ಸಕಲೇಶಪುರ (ಹಾಸನ): ಮದುವೆಯೊಂದರಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಹಿನ್ನೆಲೆ ವರನ ತಂದೆ ಹಾಗೂ ವಧುವಿನ ತಂದೆಗೆ ದಂಡ ವಿಧಿಸಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಿ.ಆರ್.ಹರೀಶ್ ತಂಡ ಗ್ರಾಮಾಂತರ ಪ್ರದೇಶಗಳಲ್ಲಿ ಕೊರೊನಾ ನಿಯಂತ್ರಣ ಪಡೆಯ ಕಾರ್ಯವನ್ನು ವೀಕ್ಷಿಸಲು ಹೋಗುತ್ತಿರುವಾಗ ತಾಲೂಕಿನ ಸತ್ತಿಗಾಲ್ ಸಮೀಪ ಜನರ ಗುಂಪೊಂದು ಕಾಣಿಸಿದೆ. ಈ ಹಿನ್ನೆಲೆ ಗುಂಪು ಚದುರಿಸಲು ಹೋದಾಗ ಮದುವೆಯೊಂದು ನಡೆಯುತ್ತಿದ್ದು, ಸರಿಯಾಗಿ ಮಹೂರ್ತದ ಸಮಯವಾಗಿತ್ತು.
ಮದುವೆ ಬಳಿಕ ವಧು-ವರರಿಗೆ ಅಕ್ಷತೆ ಹಾಕಿದ ತಾಪಂ ಇಒ ಹರೀಶ್, ನಂತರ ವಧುವಿನ ತಂದೆ ಹಾಗೂ ವರನ ತಂದೆಯನ್ನು ಕರೆದು ಸಾಮಾಜಿಕ ಅಂತರ ಕಾಪಾಡದ ಹಿನ್ನೆಲೆ ತಲಾ 1000 ರೂ. ದಂಡ ವಿಧಿಸಿದರು.