ETV Bharat / state

ವಿಕಲಚೇತನ ಪತ್ನಿ, ಅನಾರೋಗ್ಯ ಪೀಡಿತ ಗಂಡ, ಶಿಥಿಲಾವಸ್ಥೆಯಲ್ಲಿ ಮನೆ: ಸಂಕಷ್ಟದಲ್ಲಿ ದಂಪತಿ

ಕಳೆದ ಮೂರು ವರ್ಷಗಳಿಂದ ಪಟ್ಟಣ ಪಂಚಾಯತ್​ ಕಾರ್ಯಾಲಯಕ್ಕೆ ಸರ್ಕಾರದ ಯಾವುದಾದರೂ ಒಂದು ಅನುದಾನದಲ್ಲಿ ಮನೆ ನಿರ್ಮಾಣಕ್ಕೆ ಅನುವು ಮಾಡಿಕೊಡಿ ಎಂದು ಅರ್ಜಿ ಸಲ್ಲಿಸಿದರು ದಂಪತಿಯ ಸಂಕಷ್ಟಕ್ಕೆ ಯಾರೂ ಸ್ಪಂದಿಸಿಲ್ಲ. ಕಚೇರಿಗೆ ಅಲೆದಲೆದು ವಿಕಲಚೇತನಳಾಗಿರುವ ಪತ್ನಿ, ಅನಾರೋಗ್ಯ ಪೀಡಿತ ಗಂಡ ಸುಸ್ತಾಗಿದ್ದಾರೆ.

ಬಿದ್ದು ಹೋಗುತ್ತಿರುವ ಮನೆಯಲ್ಲಿ ವಾಸ ಮಾಡುತ್ತಿರುವ ದಂಪತಿಗಳು

author img

By

Published : Aug 31, 2020, 2:53 PM IST

ಅರಕಲಗೂಡು: ವಿಕಲಚೇತನ ಹೆಂಡತಿ ಲಕ್ಷ್ಮಿ ಹಾಗೂ ಅನಾರೋಗ್ಯ ಪೀಡಿತ ಮಂಜುನಾಥ ದಂಪತಿ ಪಟ್ಟಣದ ಕುಂಬಾರ ಬೀದಿಯಲ್ಲಿ ಕಳೆದ 30 ವರ್ಷಗಳಿಂದ ವಾಸವಿದ್ದಾರೆ. ಆದರೆ ಈಗ ಇವರು ವಾಸಿಸುತ್ತಿರುವ ಮನೆ ಶಿಥಿಲಾವಸ್ಥೆ ತಲುಪಿರುವುದರಿಂದ ಈ ದಂಪತಿ ದಿಕ್ಕು ತೋಚದಂತಾಗಿದ್ದಾರೆ.

ಶಿಥಿಲಾವಸ್ಥೆಯಲ್ಲಿರುವ ವಾಸಿಸುತ್ತಿರುವ ದಂಪತಿ

ಲಕ್ಷ್ಮಿಗೆ ಕಿವಿ ಕೇಳುವುದಿಲ್ಲ. ಕೆಲವರ ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಪತಿಗೆ ಆರೋಗ್ಯ ಸ್ಥಿತಿ ಸರಿ ಇಲ್ಲ. ಇಂತಹ ಸಂದರ್ಭದಲ್ಲಿ ಆಸರೆಯಾಗಿದ್ದ ಮನೆ ಸಹ ಮಳೆಗಾಲದಲ್ಲಿ ಸ್ವಲ್ಪ ಸ್ವಲ್ಪ ಭಾಗ ಬೀಳುತ್ತಿದ್ದು, ಮನೆಯ ಸುತ್ತಲೂ ಪ್ಲಾಸ್ಟಿಕ್ ಟಾರ್ಪಾಲ್ ಕಟ್ಟಿಕೊಂಡು ವಾಸಿಸುತ್ತಿದ್ದಾರೆ.

ಹಳೆ ಮನೆ ರಿಪೇರಿಗೆಂದು ಪಟ್ಟಣ ಪಂಚಾಯತ್​ಗೆ ಅರ್ಜಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಕಡು ಬಡವರಿಗೆ ಸಿಗುವ ಸರ್ಕಾರದ ಸವಲತ್ತುಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೀಡುತ್ತಿಲ್ಲ. ಬಿದ್ದು ಹೋಗುತ್ತಿರುವ ಸೂರಿನ ಕೆಳಗೆ ದಿನನಿತ್ಯ ಪ್ರಾಣ ಭಯದಲ್ಲೇ ಜೀವನ ಸಾಗಿಸುತ್ತಿದ್ದೀವೆ ಎಂದು ಮಂಜುನಾಥ ದಂಪತಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ಪಟ್ಟಣ ಪಂಚಾಯತ್​ ಕಾರ್ಯಾಲಯಕ್ಕೆ ಸರ್ಕಾರದ ಯಾವುದಾದರೂ ಒಂದು ಅನುದಾನದಲ್ಲಿ ಮನೆ ನಿರ್ಮಾಣಕ್ಕೆ ಅನುವು ಮಾಡಿಕೊಡಿ ಎಂದು ಅರ್ಜಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲವಂತೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇವರ ಕಷ್ಟಕ್ಕೆ ಸ್ಪಂದಿಸಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.