ಹಾಸನ: ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆಯಿಂದ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರ ಬಡ್ತಿ ಹಿನ್ನೆಲೆಯಲ್ಲಿ ಕೌನ್ಸಲಿಂಗ್ ಅನ್ನು ಶನಿವಾರ ನಡೆಸಲಾಯಿತು.
ಈಗಾಗಲೇ 1ರಿಂದ 7ನೇ ತರಗತಿಯವರೆಗೂ ಶಿಕ್ಷಕರಾಗಿ ಸೇವೆ ಸಲ್ಲಿಸಿರುವವರನ್ನು 8ರಿಂದ 10ನೇ ತರಗತಿಗೆ ಪ್ರಮೋಷನ್ ನೀಡುವ ನಿಟ್ಟಿನಲ್ಲಿ ಈ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆಯ ಎಲ್ಲಾ ತಾಲೂಕಿನ ಶಿಕ್ಷಕರು ಬೆಳಗಿನಿಂದಲೇ ಡಿಡಿಪಿಐ ಕಚೇರಿ ಎದುರು, ರಸ್ತೆಯಲ್ಲಿ ಕೌನ್ಸಲಿಂಗ್ಗಾಗಿ ಕಾಯುತ್ತಿದ್ದರು. ಎಲ್ಲಾ ವಿಷಯದ ಶಿಕ್ಷಕರಿಗೆ ಬಡ್ತಿ ನೀಡಲಾಗುತ್ತಿದ್ದು, ಹಿಂದಿ ಭಾಷಾ ಶಿಕ್ಷಕರಿಗೆ ಮಾತ್ರ ಬಡ್ತಿ ನೀಡಲು ಕೌನ್ಸಲಿಂಗ್ ಕರೆದಿರಲಿಲ್ಲ. ನಮಗೂ ಕೌನ್ಸಲಿಂಗ್ಗೆ ಅವಕಾಶ ನೀಡುವಂತೆ ಹಿಂದಿ ಶಿಕ್ಷಕರು ಇದೇ ವೇಳೆ ಮನವಿ ಮಾಡಿದರು.