ಹಾಸನ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತ ಸುಮಾರು 125 ಮಂದಿ ಕೂಲಿ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡುವ ಮೂಲಕ ಅವರವರ ಜಿಲ್ಲೆಗಳಿಗೆ ಕಳುಹಿಸಿದೆ. ಈ ವೇಳೆ ಬಸ್ ಚನ್ನರಾಯಪಟ್ಟಣದಲ್ಲಿ ಬಸ್ ನಿಲ್ಲಿಸಿದ ವೇಳೆ ಕೂಲಿ ಕಾರ್ಮಿಕರು ಈಟಿವಿ ಭಾರತನೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
ಮೈಸೂರು ಜಿಲ್ಲೆಯ ಕೆ ಆರ್ ನಗರ-ಹುಣಸೂರು ಸಮೀಪ ಪಾಲ ಎಂಬಲ್ಲಿ ಕಾಲುವೆ ಕೆಲಸ ಮಾಡುತ್ತಿದ್ದ ವಿಜಯಪುರ ಮೂಲದ 125 ಮಂದಿ ಕೂಲಿ ಕಾರ್ಮಿಕರನ್ನು ಐದು ಬಸ್ಗಳಲ್ಲಿ ವ್ಯವಸ್ಥೆ ಅವರವರ ಊರುಗಳಿಗೆ ಕಳುಹಿಸಲಾಗಿದೆ. ಮಾರ್ಗಮಧ್ಯೆ ಊಟಕ್ಕೆಂದು ಚನ್ನರಾಯಪಟ್ಟಣದಲ್ಲಿ ಬಸ್ ನಿಲ್ಲಿಸಲಾಗಿತ್ತು. ಈ ವೇಳೆ ಈಟಿವಿ ಭಾರತನೊಂದಿಗೆ ಮಾತನಾಡಿದ ಕಾರ್ಮಿಕರು, ನಮ್ಮ ಹಳ್ಳಿಗೆ ಹೋಗುತ್ತಿದ್ದೇವೆ. ಸರ್ಕಾರ ನಮಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಟ್ಟಿದೆ. ನಮ್ಮ ಊರು ನಮಗೆ ಚೆಂದ. ಜೀವನ ಸಾಗಿಸಲು ದೂರದ ಊರಿಗೆ ತೆರಳಿದ್ದು, ಅನೇಕರು ನಮ್ಮ ಸ್ವಂತ ಊರುಗಳಿಗೆ ಹೋಗಬೇಕೆಂದು ಮಾಲೀಕರಿಗೆ ಒತ್ತಾಯಿಸಿದ್ದೆವು. ನಮ್ಮ ನಮ್ಮ ಊರುಗಳಿಗೆ ತೆರಳಲು ಅನುಕೂಲ ಮಾಡಿಕೊಟ್ಟಿರುವುದು ಸಂತಸದ ವಿಚಾರವಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡರು.
ಪ್ರತಿ ಬಸ್ನಲ್ಲೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ವ್ಯವಸ್ಥೆ ಮಾಡಲಾಗಿತ್ತು. ಒಂದೊಂದು ಬಸ್ನಲ್ಲಿ ಕೇವಲ 25 ಜನರಿಗೆ ಅವಕಾಶ ನೀಡಲಾಗಿತ್ತು. ಇನ್ನು ಕೂಲಿ ಕಾರ್ಮಿಕರು ಗೃಹಪಯೋಗಿ ವಸ್ತುಗಳೊಂದಿಗೆ ಬಸ್ನಲ್ಲಿ ತೆರಳುತ್ತಿರುವುದು ಕಂಡುಬಂತು.