ಹಾಸನ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶವನ್ನು ಹಾಸನದಲ್ಲೂ ಪಾಲಿಸಲಾಗುತ್ತಿದೆ. ಒಂದು ವಾರ ಯಾವ ಚಲನಚಿತ್ರ ಮಂದಿರಗಳಲ್ಲೂ ಚಿತ್ರ ಪ್ರದರ್ಶನ ಇಲ್ಲದಿರುವುದರಿಂದ ಥಿಯೇಟರ್ಗಳು ಬಿಕೊ ಎನ್ನುತ್ತಿವೆ.
ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಈ ವರ್ಷ 1ನೇ ತರಗತಿಯಿಂದ 6ನೇ ತರಗತಿಯವರೆಗಿನ ಪರೀಕ್ಷೆಗಳನ್ನು ನಡೆಸದಂತೆ ಸೂಚಿಸಲಾಗಿದೆ. ಅಲ್ಲದೆ, 7, 8 ಮತ್ತು ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿದ್ದು, ವಿದ್ಯಾರ್ಥಿಗಳಿಗೆ ಸ್ಟಡಿ ಹಾಲಿಡೇ ಘೋಷಿಸಲಾಗಿದೆ. ಈ ತಿಂಗಳ 30 ನಂತರ ಪರೀಕ್ಷಾ ದಿನಾಂಕವನ್ನು ಘೋಸಿಸುವುದಾಗಿ ಶಿಕ್ಷಣ ಸಚಿವರು ನಿನ್ನೆ ತಿಳಿಸಿದ್ದರು. ಇನ್ನು ಸಿನಿಮಾ ಮಂದಿರಗಳು, ಮದುವೆ, ಕ್ರೀಡೆ ಸೇರಿದಂತೆ ಜನ ಸೇರುವ ಕಾರ್ಯಕ್ರಮಗಳನ್ನೆಲ್ಲಾ ಒಂದು ವಾರದ ಮಟ್ಟಿಗೆ ಬಂದ್ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮಾರ್ಚ್16 ರಿಂದ ನಡೆಯಬೇಕಿದ್ದ 1 ರಿಂದ 6 ನೇ ತರಗತಿಯವರೆಗಿನ ಮುಖ್ಯ ಪರೀಕ್ಷೆಗಳು ರದ್ದಾಗಿದೆ. ಪರೀಕ್ಷೆ ಬರೆಯದಿದ್ದರೂ ಪಾಸ್ ಎಂಬ ಸುದ್ದಿ ಕೇಳುತ್ತಿದ್ದಂತೆ ಒಂದು ಕಡೆ ಮಕ್ಕಳು ಮತ್ತು ಪೋಷಕರು ಸಂತೋಷಪಟ್ಟರೇ, ಕೆಲ ಪೋಷಕರು ಪರೀಕ್ಷೆ ನಡೆಯಬೇಕಾಗಿತ್ತು ಎಂದಿದ್ದಾರೆ. ಇನ್ನೂ ಕೆಲವರು ಈ ಬಗ್ಗೆ ಗೊಂದಲಕ್ಕೊಳಗಾಗಿದ್ದಾರೆ.