ಹಾಸನ: ಜಿಲ್ಲೆಯಲ್ಲಿಂದು ಕೊರೊನಾ ಸೋಂಕಿತ ಮಹಿಳೆ ಸಾವನ್ನಪ್ಪಿದ್ದು, ಜುಲೈ 1 ರಿಂದ ಜಿಲ್ಲೆಯಲ್ಲಿ ಪ್ರತಿದಿನ ಸಾವಿನ ಸರಣಿ ಮುಂದುವರೆದಿದ್ದು, ಒಟ್ಟು ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
38 ವರ್ಷದ ಮಹಿಳೆ ಕೊರೊನಾ ವೈರಸ್ನಿಂದ ಮೃತಪಟ್ಟಿದ್ದು, ಜುಲೈ 4 ರಂದು ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ ಮೃತಪಟ್ಟಿದ್ದಾರೆ.
ಇಂದು ವರದಿಯಾದ 49 ಕೋವಿಡ್ ಸೋಂಕಿತರ ಪೈಕಿ ಒಟ್ಟು 13 ವೈದ್ಯಕೀಯ ಸಿಬ್ಬಂದಿ ಸೇರಿದ್ದಾರೆ. ಇವರ ಪೈಕಿ 9 ಮಂದಿ ವೈದ್ಯರು ಹಾಗೂ 4 ಮಂದಿ ಇತರ ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದಾರೆ. ರೋಗಿ ಸಂಖ್ಯೆ 19,864 ಜೊತೆಗೆ ಈ ಸಿಬ್ಬಂದಿ ಸಂಪರ್ಕ ಹೊಂದಿದ್ದರು.