ಹಾಸನ : ಆಗಸ್ಟ್ 3ರಿಂದ ಪ್ರಾರಂಭವಾಗಿರುವ ಆಶ್ಲೇಷ ಮಳೆ ಸತತ 2ನೇ ದಿನವೂ ಜಿಲ್ಲೆಯಲ್ಲಿ ಸುರಿಯುತ್ತಿರುವುದರಿಂದ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ವರ್ಷ ಆಗಸ್ಟ್ 8ರಂದು ಹೇಮಾವತಿ ಜಲಾಶಯ ತುಂಬಿ ಹರಿದಿತ್ತು. ಆದರೆ, ಮುಂಗಾರು ಮಳೆ ಸರಿಯಾದ ಪ್ರಮಾಣದಲ್ಲಿ ಆಗದಿದ್ದರೂ ಆಗಸ್ಟ್ ತಿಂಗಳಲ್ಲಿ ಸುರಿಯುವ ಆಶ್ಲೇಷ, ಮಖ ಮತ್ತು ಪುಬ್ಬ ಮಳೆ ಜಿಲ್ಲೆಯ ಜೀವನದಿ ಹೇಮಾವತಿಯನ್ನು ತುಂಬಿಸುತ್ತವೆ ಎಂಬ ಪ್ರತೀತಿ ಇದೆ. ಹಾಗಾಗಿ ಹೇಮಾವತಿ ಸಾಮಾನ್ಯವಾಗಿ ಆಗಸ್ಟ್ ಅಥವಾ ಸೆಪ್ಟಂಬರ್ ತಿಂಗಳ ಮೊದಲ ವಾರದಲ್ಲಿ ತುಂಬಿ ಹರಿಯುತ್ತದೆ.
ನಿನ್ನೆಯಿಂದ ಸತತವಾಗಿ ಸುರಿಯುತ್ತಿರುವ ಮಳೆ ಕೇವಲ ಹಾಸನ ನಗರಕ್ಕೆ ಮಾತ್ರವಲ್ಲದೆ ಹೊಳೆನರಸೀಪುರ, ಚನ್ನರಾಯಪಟ್ಟಣ, ಆಲೂರು, ಸಕಲೇಶಪುರ ಮತ್ತು ಬೇಲೂರು ಭಾಗದಲ್ಲಿ ಸುರಿಯುತ್ತಿದೆ. ಹೇಮಾವತಿ ಜಲಾಶಯಕ್ಕೆ ನೀರು ಬರಬೇಕಾದರೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಮಳೆಯಾದ್ರೆ ಮಾತ್ರ ಜಿಲ್ಲೆಗೆ ಸಾಕಷ್ಟು ನೀರು ಹರಿದು ಬರುತ್ತದೆ. ಈಗಾಗಲೇ ಡ್ಯಾಮ್ನಲ್ಲಿ 16 ಟಿಎಂಸಿ ನೀರಿದ್ದು, ಇದೇ ರೀತಿ 3-4 ದಿನ ಸತತವಾಗಿ ಮಳೆ ಬಂದರೆ ಭಾಗಶಃ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.
ಜಿಲ್ಲೆಯಲ್ಲಾಗಿರುವ ಮಳೆಯ ವರದಿಯನ್ನು ನೋಡುವುದಾದ್ರೆ, ಹಾಸನ ತಾಲೂಕಿನ ಸಾಲಗಾಮೆ 23.4 ಮಿ.ಮೀ., ಹಾಸನ 20.6 ಮಿ.ಮೀ., ದುದ್ದ 11.4 ಮಿ.ಮೀ., ಶಾಂತಿಗ್ರಾಮ 16 ಮಿ.ಮೀ., ಕಟ್ಟಾಯ 30.1 ಮಿ.ಮೀ., ಗೊರೂರು 33.2 ಮಿ.ಮೀ. ಮಳೆಯಾಗಿದೆ. ಸಕಲೇಶಪುರ ಪಟ್ಟಣದಲ್ಲಿ 86.8 ಮಿ.ಮೀ., ಹೊಸೂರು 103.3 ಮಿ.ಮೀ., ಶುಕ್ರವಾರ ಸಂತೆ 159 ಮಿ.ಮೀ., ಹೆತ್ತೂರು 175.2 ಮಿ.ಮೀ., ಯಸಳೂರು 122 ಮಿ.ಮೀ., ಬಾಳ್ಳುಪೇಟೆ 42 ಮಿ.ಮೀ., ಬೆಳಗೋಡು 53.2 ಮಿ.ಮೀ., ಮಾರನಹಳ್ಳಿ 197.1 ಮಿ.ಮೀ., ಹಾನುಬಾಳು 96 ಮಿ.ಮೀ., ಮಳೆಯಾಗಿದೆ. ಅರಸೀಕೆರೆ ತಾಲ್ಲೂಕಿನ ಜಾವಗಲ್ನಲ್ಲಿ 2 ಮಿ.ಮೀ., ಗಂಡಸಿ 3.6 ಮಿ.ಮೀ., ಕಸಬಾ 1 ಮಿ.ಮೀ. ಮಳೆಯಾಗಿದೆ.
ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು 19.1 ಮಿ.ಮೀ., ಹೊಳೆನರಸೀಪುರ 18.6 ಮಿ.ಮೀ., ಹಳೆಕೋಟೆ 24.4 ಮಿ.ಮೀ. ಮಳೆಯಾಗಿದೆ. ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ 55 ಮಿ.ಮೀ., ಕಸಬಾ 20.2 ಮಿ.ಮೀ., ದೊಡ್ಡಮಗ್ಗೆ 20.2 ಮಿ.ಮೀ., ರಾಮನಾಥಪುರ 32.4 ಮಿ.ಮೀ., ಬಸವಪಟ್ಟಣ 17.3 ಮಿ.ಮೀ., ಕೊಣನೂರು 18.4 ಮಿ.ಮೀ., ದೊಡ್ಡಬೆಮ್ಮತ್ತಿ 25.2 ಮಿ.ಮೀ. ಮಳೆಯಾಗಿದೆ.
ಅದೇ ರೀತಿ ಆಲೂರಿನಲ್ಲಿ 31.2 ಮಿ.ಮೀ., ಕುಂದೂರು 59.8 ಮಿ.ಮೀ., ಪಾಳ್ಯ 24.3 ಮಿ.ಮೀ., ಕೆ.ಹೊಸಕೋಟೆ 82 ಮಿ.ಮೀ. ಮಳೆಯಾಗಿದೆ. ಬೇಲೂರು ತಾಲ್ಲೂಕಿನ ಹಳೆಬೀಡು 3.4 ಮಿ.ಮೀ., ಬೇಲೂರು 13 ಮಿ.ಮೀ., ಹಗರೆ 13.4 ಮಿ.ಮೀ., ಬಿಕ್ಕೋಡು 27.4 ಮಿ.ಮೀ., ಗೆಂಡೆಹಳ್ಳಿ 25 ಮಿ.ಮೀ., ಅರೆಹಳ್ಳಿ 46 ಮಿ.ಮೀ., ಮಳೆಯಾಗಿದೆ. ಹಾಗೇ ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 3 ಮಿ.ಮೀ., ಉದಯಪುರ 9 ಮಿ.ಮೀ., ಬಾಗೂರು 6 ಮಿ.ಮೀ., ನುಗ್ಗೆಹಳ್ಳಿ 2.6 ಮಿ.ಮೀ., ಹಿರಿಸಾವೆ 5.2 ಮಿ.ಮೀ., ಶ್ರವಣಬೆಳಗೊಳ 8 ಮಿ.ಮೀ. ಮಳೆಯಾಗಿದೆ. ಹೀಗಾಗಿ ಎರಡು ದಿನಗಳಿಂದ ಸುರಿಯುತ್ತಿರುವ ಹಿಂಗಾರು ಮಳೆಗೆ ರೈತರು ಸಂತಸಗೊಂಡಿದ್ದಾರೆ.