ಹಾಸನ: ಜಿಲ್ಲೆಯಲ್ಲಿ ಕೊರೊನಾ ಅಬ್ಬರ ಕಡಿಮೆಯಾಗ್ತಿಲ್ಲ. ದಿನದಿಂದ ದಿನಕ್ಕೆ ಕೇಸ್ಗಳು ಮತ್ತು ಪಾಸಿಟಿವಿಟಿ ರೇಟ್ ಸಹ ಕಡಿಮೆಯಾಗದ ಹಿನ್ನೆಲೆ ಮತ್ತೊಂದು ವಾರ ಲಾಕ್‌ಡೌನ್ ಮುಂದುವರೆಸುತ್ತೇವೆಂದು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಹೇಳಿದ್ದಾರೆ.
ಇಂದು ಸಿಎಂ ಜೊತೆ ನಡೆದ ವಿಡಿಯೋ ಕಾನ್ಫರೆನ್ಸ್ ನಂತರ ಮಾತನಾಡಿದ ಅವರು, ಪ್ರತಿವಾರ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ, ಮುಂದಿನ ವಾರದೊಳಗೆ ಬಹಳಷ್ಟು ಕಡಿಮೆಯಾಗಲಿದೆ. 23 ಹಳ್ಳಿಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ, ವೈದ್ಯರ ನಡೆ ಹಳ್ಳಿಯ ಕಡೆ 2ನೇ ಸುತ್ತು ಆರಂಭಿಸುತ್ತೇವೆ. ಸೋಂಕಿತರು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ನಲ್ಲಿಯೇ ಚಿಕಿತ್ಸೆ ಪಡೆಯಬೇಕೆಂದರು.
ಶುಕ್ರವಾರ(ನಾಳೆ) ಸಿಎಂ ಯಡಿಯೂರಪ್ಪ ಹಾಸನ ಜಿಲ್ಲೆಗೆ ಆಗಮಿಸಲಿದ್ದು, ಜಿಲ್ಲೆಯ ಸ್ಥಿತಿಗತಿಯ ಬಗ್ಗೆ ವಿವರಿಸುತ್ತೇವೆ. ಈಗ ಇರುವ ಲಾಕ್ಡೌನ್ನ್ನು ಜೂ. 14 ರ ಬಳಿಕವೂ ಒಂದು ವಾರ ವಿಸ್ತರಣೆ ಮಾಡುತ್ತೇವೆ ಎಂದು ತಿಳಿಸಿದರು.
ಹಾಸನದಲ್ಲಿ ಈ ಹಿಂದೆ ವಾರದಲ್ಲಿ ಮೂರು ದಿನ, ಅಂದರೆ ಸೋಮವಾರ, ಬುಧವಾರ, ಶುಕ್ರವಾರ ಬೆಳಗ್ಗೆ 6 ರಿಂದ 19 ಗಂಟೆವರೆಗೆ ಅಗತ್ಯವಸ್ತು ಖರೀದಿಸಲು ಅವಕಾಶ ನೀಡಲಾಗಿದ್ದು, ಉಳಿದ ನಾಲ್ಕು ದಿನ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿತ್ತು.
ಓದಿ: ಬಾಲಕನ ಕಿಡ್ನಾಪ್ ಮಾಡಿ 2 ಕೋಟಿ ರೂ.ಗೆ ಬೇಡಿಕೆ ಕೇಸ್: ಆರೋಪಿಗೆ ಷರತ್ತುಬದ್ಧ ಜಾಮೀನು