ETV Bharat / state

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡವಾಳ ಬಯಲು: ಎಸ್ ಎ ರಾಮದಾಸ್

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನ ನಿಜವಾದ ಬಂಡವಾಳ ಬಯಲಾಗಲಿದೆ ಎಂದು ಮಾಜಿ ಸಚಿವ ಎಸ್ ಎ ರಾಮದಾಸ್ ಕಿಡಿಕಾರಿದ್ದಾರೆ.

SA Ramdas
ಮಾಜಿ ಸಚಿವ ಎಸ್.ಎ. ರಾಮದಾಸ್
author img

By ETV Bharat Karnataka Team

Published : Nov 23, 2023, 3:01 PM IST

ಮಾಜಿ ಸಚಿವ ಎಸ್.ಎ. ರಾಮದಾಸ್ ಮಾತನಾಡಿದರು.

ಹಾಸನ: ''ಐದು ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಸರ್ಕಾರ ರಚಿಸಿರುವ ಕಾಂಗ್ರೆಸ್ ಬಂಡವಾಳವು ಮೇ ತಿಂಗಳಲ್ಲಿ ನಡೆಯುವ ಲೋಕಾಸಭಾ ಚುನಾವಣೆಯಲ್ಲಿ ಬಯಲಾಗಲಿದೆ'' ಎಂದು ಮಾಜಿ ಸಚಿವ ಎಸ್ ಎ ರಾಮದಾಸ್ ಹೇಳಿದ್ದಾರೆ.

ಬಿಜೆಪಿ ಕಚೇರಿಗೆ ಭೇಟಿ ನೀಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ರಾಷ್ಟ್ರ ನಾಯಕರು ಅಂತ ಬಂದಾಗ ಅವರ ಘನತೆ, ಗೌರವದಲ್ಲಿ ನಾನೇನು ಮಾತನಾಡುತ್ತಿದ್ದೀನಿ ಎಂಬುದರ ಅರಿವು ಇಟ್ಟುಕೊಂಡು ಮಾತನಾಡುವುದು ಒಳ್ಳೆಯದು. ಇದೇನು ಅವರಿಗೆ ಹೊಸತಲ್ಲ. ಈ ರೀತಿ ಮಾತನಾಡಿ ಕೊನೆಗೆ ಕೇಸು ನ್ಯಾಯಾಲಯದಲ್ಲೂ ಬರುವಂತಾಯಿತು. ಮೋದಿ ಬಗ್ಗೆ ಮಾತನಾಡಲು ಅವರ ಬಳಿ ಏನು ಉಳಿದಿಲ್ಲ. ಕಾಂಗ್ರೆಸ್​ಸರ್ಕಾರದಲ್ಲಿ ಮಾಡಿದಂತ ಸ್ಕ್ಯಾಮ್​ಗಳನ್ನು ನಮ್ಮ ಕೇಂದ್ರ ಸರ್ಕಾರ ಮಾಡಿಲ್ಲ. ಇದರಿಂದ ಪ್ರಸ್ತುತ ಇಡೀ ದೇಶ ನೆಮ್ಮದಿಯಿಂದ ಇದೆ'' ಎಂದರು.

''ಬಿಜೆಪಿ ಬಗ್ಗೆ ಕ್ಷುಲ್ಲಕ ಮಾತುಗಳನ್ನು ಆಡಿರುವುದು ಸಂಸದ ರಾಹುಲ್ ಗಾಂಧಿಯವರ ಘನತೆ ಗೌರವಕ್ಕೆ ಸರಿಹೊಂದುವುದಿಲ್ಲ. ಗೆದ್ದಾಗ ಎಲ್ಲರೂ ನಮ್ಮದೇ ಎನ್ನುತ್ತಾರೆ. ಆದರೆ, ನಮ್ಮ ದೇಶದ ಪ್ರಧಾನಿ ಮೋದಿ ಸೋತಂತ ಆಟಗಾರರ ಬಳಿ ಹೋಗಿ, ಗೆಲುವಿನ ದಿನಗಳು ಬರುತ್ತವೆ ಎಂದು ಸಾಂತ್ವನ ಹೇಳಿದ್ದರು. ದೇಶದ ಇತಿಹಾಸದಲ್ಲಿ ಯಾವುದೇ ಪ್ರಧಾನಮಂತ್ರಿ ಈ ಕಾರ್ಯವನ್ನು ಮಾಡಿಲ್ಲ. ಆದ್ರೆ, ರಾಹುಲ್ ಗಾಂಧಿ ಅವರು ಈ ಬಗ್ಗೆ ಶ್ಲಾಘಿಸಬೇಕೇ ಹೊರತು, ಕ್ಷುಲ್ಲಕ ಮಾತುಗಳನ್ನಾಡಬಾರದು. ಅವರನ್ನು ರಾಷ್ಟ್ರೀಯ ನಾಯಕರು ಎಂದು ಹೇಳಿಕೊಳ್ಳುವುದಕ್ಕೆ ಅವರ ಪಾರ್ಟಿಯವರಿಗೇ ಬೇಸರವಾಗುತ್ತಿದೆ'' ಎಂದು ಕಿಡಿಕಾರಿದರು.

''ರಾಜ್ಯದಲ್ಲಿ ಕಾಂಗ್ರೆಸ್ ಮಾಡುವ ಸಾಧನೆಗಳನ್ನು ಬಿಜೆಪಿಯವರು ಮಾಡುವುದಕ್ಕೆ ಆಗಿಲ್ಲ ಎಂದು ನಮ್ಮ ಮೇಲೆ ಗೂಬೆ ಕೂರಿಸಿ ಅಧಿಕಾರಕ್ಕೆ ಬಂದಿದೆ. ಇವತ್ತು ಜನಸಾಮಾನ್ಯರ ಕೆಲಸ ಮಾಡಬೇಕೇ ಹೊರತು, ಜಾತಿ ಜಾತಿಗಳ ಮಧ್ಯೆ ವಿಷ ಬೀಜಗಳನ್ನು ಬಿತ್ತುತ್ತಿರುವುದು ಸರಿಯಲ್ಲ. ಶಾಸಕರ ಯಾವುದೇ ಕ್ಷೇತ್ರದಲ್ಲೂ ರಸ್ತೆ, ಚರಂಡಿ ಹಾಗೂ ಯಾವ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇದರಿಂದ ಜನರ ಮನಸ್ಸಿಗೆ ತುಂಬಾ ನೋವಾಗಿದೆ. ಪ್ರಸ್ತುತ ಜನರನ್ನು ಗಮನವನ್ನು ಬೇರೆಡೆಗೆ ಸೆಳೆಯುವ ಕಾರ್ಯವನ್ನು ಮಾಡುತ್ತಿದ್ದಾರೆ'' ಎಂದು ಆರೋಪಿಸಿದರು.

''ಚುನಾವಣೆ ಫಲಿತಾಂಶದಿಂದ ಲಾಭ, ನಷ್ಟ ಎಲ್ಲಾ ತಿಳಿಯುವುದು. ಐದು ಗ್ಯಾರಂಟಿಗಳನ್ನು ತೋರಿಸಿಕೊಂಡು ಕಾಂಗ್ರೆಸ್ ಗೆದ್ದು ಬಂದಿದೆ. ಲೋಕಸಭೆ ಚುನಾವಣೆ ಬಂದಂತ ಸಂದರ್ಭದಲ್ಲಿ ಕಾಂಗ್ರೆಸ್​ನ ಬಂಡವಾಳ ಬಯಲಾಗಲಿದೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರು ಸಂಕಲ್ಪ ಮಾಡಿದ್ದು, ರಾಜ್ಯದಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲಿಸಬೇಕು ಎಂದು ಪಣತೊಟ್ಟಿದ್ದಾರೆ. ನಮ್ಮ ಎಲ್ಲಾ ನೋವುಗಳನ್ನು ಮರೆತು, ಈ ದೇಶಕ್ಕೆ ಮತ್ತೊಮ್ಮೆ ಮೋದಿ ಬೇಕು, ಆಗ ದೇಶದ ಅಭಿವೃದ್ಧಿ ಆಗಬೇಕು ಎನ್ನುವ ವಿಚಾರವನ್ನು ಇಟ್ಟುಕೊಂಡು ಹೊರಟಿದ್ದೇವೆ '' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನೂ ಓದಿ: ಡಿಸೆಂಬರ್ 6ರ ನಂತರ ನನಗಾದ ನೋವು ವಿವರಿಸುತ್ತೇನೆ: ವಿ.ಸೋಮಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.