ETV Bharat / state

ಮೊದಲ ಬಾರಿ ದಸರಾ ಮಾದರಿಯಲ್ಲಿ ಹಾಸನಾಂಬೆ ಜಾತ್ರೆ... ಮನಸೋತ ಭಕ್ತರು!

ಇತ್ತೀಚೆಗಷ್ಟೆ ಮೈಸೂರು ದಸರಾ ಮುಗಿದಿದೆ. ಈಗ ಹಾಸನಾಂಬೆ ಜಾತ್ರೆ ಪ್ರಾರಂಭವಾಗಿದೆ. ಮೈಸೂರಿನಲ್ಲಿ ಜರುಗಿದ ದಸರಾದಂತೆ ಅಲ್ಲದಿದ್ದರೂ ಜಿಲ್ಲಾಡಳಿತ ಈ ಬಾರಿ ಮಿನಿ ದಸರಾ ಮಾದರಿಯಲ್ಲಿಯೇ ಹಾಸನಾಂಬೆ ಜಾತ್ರಾ ಮಹೋತ್ಸವವನ್ನು ಆಯೋಜನೆ ಮಾಡಿರುವುದರಿಂದ ಭಕ್ತ ಗಣವನ್ನು ಕೈಬೀಸಿ ಕರೆಯುತ್ತಿದೆ.

ಹಾಸನಾಂಬೆ ಜಾತ್ರೆ ಪ್ರಾರಂಭ
author img

By

Published : Oct 18, 2019, 5:25 AM IST

Updated : Oct 18, 2019, 6:37 AM IST

ಹಾಸನ: ಮೊದಲ ಬಾರಿಗೆ ಹಾಸನದಲ್ಲಿ ದಸರಾ ಮಾದರಿಯಲ್ಲಿಯೇ ಹಾಸನಾಂಬೆ ದೇವಿ ಮೂಲಸ್ಥಾನ ಸೇರಿದಂತೆ, ಈ ಬಾರಿ ಸಪ್ತಮಾತೃಕೆಯರ ಸ್ತಬ್ಧಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಆ ಟ್ಯಾಬ್ಲೋಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಚಾಲನೆ ನೀಡಿದರು.

ದಸರಾ ಮಾದರಿಯಲ್ಲಿಯೇ ಪ್ರಮುಖ ರಸ್ತೆಗಳಲ್ಲಿ ಸಾಗಿ ಎಲ್ಲರ ಗಮನ ಸೆಳೆದಿದ್ದು, ಜಿಲ್ಲಾಡಳಿತ ಮಾಡಿರುವ ಹೊಸ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ತಬ್ಧಚಿತ್ರ ಅಷ್ಟೇ ಅಲ್ಲದೆ ಸಾಂಪ್ರದಾಯಿಕ ಜನಪದ ನೃತ್ಯ ಕಲೆಗಳ ಪ್ರದರ್ಶನ, ಸೋಮನ ಕುಣಿತ, ನಂದಿ ಕೋಲು, ವೀರಗಾಸೆ, ತಮಟೆ ನೃತ್ಯ, ಕೀಲು ಕುದುರೆ, ಮಹಿಳೆ ಮತ್ತು ಪುರುಷರ ಕೋಲಾಟ, ಚಿಟ್ಟಿ ಮೇಳ, ಕಂಸಾಳೆ ಸೇರಿದಂತೆ ಜಿಲ್ಲೆಯ ವಿವಿಧ ಕಲಾ ತಂಡಗಳು ಹಾಸನಾಂಬೆ ದೇವಸ್ಥಾನದಿಂದ ಮೆರವಣಿಗೆ ಹೊರಟು ನಗರದ ಮುಖ್ಯ ರಸ್ತೆಗಳ ಮೂಲಕ ಕಲಾ ಭವನದವರೆಗೂ ವೈಭೋವೋಪಿತವಾಗಿ ಸಾಗಿ ಭಕ್ತಗಣದ ಮನಸೂರೆಗೊಳಿಸಿದವು.

ಹಾಸನಾಂಬೆ ಜಾತ್ರೆ ಪ್ರಾರಂಭ

ವರ್ಷಕ್ಕೊಮ್ಮೆ ದರ್ಶನ ಕೊಡುವಂತಹ ಹಾಸನಾಂಬೆ ಮೂರು ದಿನಗಳ ಕಾಲ ಭಕ್ತರಿಗೆ ದರ್ಶನ ಕೊಡಲಿದ್ದಾಳೆ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾದುಸ್ವಾಮಿ ಸ್ಥಳೀಯ ಶಾಸಕ ಪ್ರೀತಂ ಗೌಡ ಎಂಎಲ್​ಸಿ ಗೋಪಾಲಸ್ವಾಮಿ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ದೇವಾಲಯದ ಬಾಗಿಲನ್ನು ತೆರೆಯಲಾಯಿತು.

ಒಟ್ಟಾರೆ ಜಿಲ್ಲಾಡಳಿತ ಮಾಡಿರುವ ಹೊಸ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಹಾಸನಾಂಬೆಯ ಇತಿಹಾಸ ಸ್ತಬ್ಧ ಚಿತ್ರಗಳು ಜಿಲ್ಲೆಯ ಕಲೆಗಳನ್ನು ಮತ್ತು ಕಲಾವಿದರುಗಳನ್ನು ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಪರಿಚಯ ಮಾಡಿಕೊಟ್ಟಿರುವುದು ಕಲಾವಿದರಿಗೂ ಕೂಡ ತಮ್ಮ ಪ್ರತಿಭೆಗಳನ್ನು ಹೊರ ಹೊಮ್ಮಿಸಲು ಸೂಕ್ತ ವೇದಿಕೆಯಾಗಿತ್ತು.

Intro:ಮೈಸೂರು ದಸರಾ. . . ! ಎಷ್ಟೊಂದು ಸುಂದರ. . . ! ! ಹೌದು ಇತ್ತೀಚೆಗಷ್ಟೇ ಮೈಸೂರು ದಸರಾ ಮುಗಿದು ಈಗ ಹಾಸನಂಬ ಜಾತ್ರೆ ಪ್ರಾರಂಭವಾಗಿದೆ. ಮೈಸೂರಿನಲ್ಲಿ ಜರುಗಿದ ದಸರಾದಂತೆ ಅಲ್ಲದಿದ್ದರೂ ಜಿಲ್ಲಾಡಳಿತ ಈ ಬಾರಿ ಮಿನಿ ದಸರಾ ಮಾದರಿಯಲ್ಲಿಯೇ ಹಾಸನಾಂಬ ಜಾತ್ರಾ ಮಹೋತ್ಸವವನ್ನು ಆಯೋಜನೆ ಮಾಡಿರುವುದರಿಂದ ಭಕ್ತ ಗಣವನ್ನು ಕೈಬೀಸಿ ಕರೆಯುತ್ತಿದೆ.

ಮೊದಲ ಬಾರಿಗೆ ಹಾಸನದಲ್ಲಿ ದಸರಾ ಮಾದರಿಯಲ್ಲಿಯೇ
ಹಾಸನಾಂಬೆ ದೇವಿ ಮೂಲಸ್ಥಾನ ಸೇರಿದಂತೆ, ಈ ಬಾರಿ ಸಪ್ತಮಾತೃಕೆಯರ ಸ್ತಬ್ಧಚಿತ್ರವನ್ನು ನಿರ್ಮಾಣ ಮಾಡಿದ್ದು, ಆ ಟ್ಯಾಬ್ಲೋಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಚಾಲನೆ ನೀಡಿದರು. ದಸರಾ ಮಾದರಿಯಲ್ಲಿಯೇ ಪ್ರಮುಖ ರಸ್ತೆಗಳಲ್ಲಿ ಸಾಗಿ ಎಲ್ಲರ ಗಮನ ಸೆಳೆದಿದ್ದು, ಜಿಲ್ಲಾಡಳಿತ ಮಾಡಿರುವ ಹೊಸ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ತಬ್ಧಚಿತ್ರ ಅಷ್ಟೇ ಅಲ್ಲದೆ ಸಾಂಪ್ರದಾಯಿಕ ಜನಪದ ನೃತ್ಯ ಕಲೆಗಳ ಪ್ರದರ್ಶನ, ಸೋಮನ ಕುಣಿತ, ನಂದಿ ಕೋಲು, ವೀರಗಾಸೆ, ತಮಟೆ ನೃತ್ಯ, ಕೀಲು ಕುದುರೆ, ಮಹಿಳೆ ಮತ್ತು ಪುರುಷರ ಕೋಲಾಟ, ಚಿಟ್ಟಿ ಮೇಳ, ಕಂಸಾಳೆ ಸೇರಿದಂತೆ ಜಿಲ್ಲೆಯ ವಿವಿಧ ಕಲಾ ತಂಡಗಳು ಹಾಸನಾಂಬ ದೇವಸ್ಥಾನದಿಂದ ಮೆರವಣಿಗೆ ಹೊರಟು ನಗರದ ಮುಖ್ಯ ರಸ್ತೆಗಳ ಮೂಲಕ ಕಲಾ ಭವನದವರೆಗೂ ವೈಭೋವೋಪಿತವಾಗಿ ಸಾಗಿ ಭಕ್ತಗಣದ ಮನಸೂರೆಗೊಳಿಸಿದವು.

ವರ್ಷಕ್ಕೊಮ್ಮೆ ದರ್ಶನ ಕೊಡುವಂತಹ ಹಾಸನಾಂಬೆ ಇಂದಿನಿಂದ ಮೂರು ದಿನಗಳ ಕಾಲ ಭಕ್ತರಿಗೆ ದರ್ಶನ ಕೊಡಲಿದ್ದಾಳೆ. ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಾದುಸ್ವಾಮಿ ಸ್ಥಳೀಯ ಶಾಸಕ ಪ್ರೀತಂ ಗೌಡ ಎಂಎಲ್ಸಿ ಗೋಪಾಲಸ್ವಾಮಿ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ದೇವಾಲಯದ ಬಾಗಿಲನ್ನು ತೆರೆಯಲಾಯಿತು.

ಒಟ್ಟಾರೆ ಜಿಲ್ಲಾಡಳಿತ ಮಾಡಿರುವ ಹೊಸ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಹಾಸನಾಂಬೆಯ ಇತಿಹಾಸ ಸ್ತಬ್ಧ ಚಿತ್ರಗಳು ಜಿಲ್ಲೆಯ ಕಲೆಗಳನ್ನು ಮತ್ತು ಕಲಾವಿದರುಗಳನ್ನು ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಪರಿಚಯ ಮಾಡಿಕೊಟ್ಟಿರುವುದು ಕಲಾವಿದರಿಗೂ ಕೂಡ ತಮ್ಮ ಪ್ರತಿಭೆಗಳನ್ನು ಹೊರ ಹೊಮ್ಮಿಸಲು ಸೂಕ್ತ ವೇದಿಕೆಯಾಗಿತ್ತು.

ಸ್ತಬ್ದ ಚಿತ್ರಗಳ ಮತ್ತು ಮೆರವಣಿಗೆ ತಂಡಗಳ ನಡುವೆ ವರ್ಗಾವಣೆಗೊಂಡ ನಾಗರಾಜು ಆಗಮಿಸಿದ ವೇಳೆ ಅಧಿಕಾರಿಗಳೊಂದಿಗೆ ಕಲಾತಂಡಗಳು ಮತ್ತು ನಾಗರಾಜು ರವರ ಅಭಿಮಾನಿಗಳು ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದು ವಿಶೇಷವಾಗಿತ್ತು. ಇನ್ನು ಹಾಸನ ಉಪವಿಭಾಗಾಧಿಕಾರಿಯಾಗಿ ಬಂದಿರುವ ನವೀನ್ ಭಟ್ ಕೂಡಾ ಮೆರವಣಿಗೆಯ ಸಾಲಿನಲ್ಲಿ ನಡೆದುಕೊಂಡು ಬಂದು ಕಲಾವಿದರಿಗೆ ಹುರಿದುಂಬಿಸಿದರು.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

Body:7203289

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
Last Updated : Oct 18, 2019, 6:37 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.