ETV Bharat / state

ಚಿಗಹಳ್ಳಿ ಹಾಲು ಉತ್ಪಾದಕರ ಸಂಘದಲ್ಲಿ ಹಣ ದುರಪಯೋಗ ಆರೋಪ - ಹಾಲು ಉತ್ಪಾದಕರ ಸಹಕಾರ ಸಂಘ ಅಕ್ರಮ

ಚಿಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಣ ದುರುಪಯೋಗ ಆರೋಪ ಕೇಳಿ ಬಂದ ಹಿನ್ನೆಲೆ ಸೂಕ್ತ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಆದರೆ ಕಾರ್ಯದರ್ಶಿ ಮತ್ತು ಅಧ್ಯಕ್ಷರು ದಾಖಲೆಗಳನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

chigahalli-milk-producers-association-money-abuse-case
ಚಿಗಹಳ್ಳಿ ಹಾಲು ಉತ್ಪಾದಕರ ಸಂಘ
author img

By

Published : May 21, 2020, 11:12 AM IST

ಹಾಸನ: ತಾಲೂಕಿನ ಶಾಂತಿ‌‌ಗ್ರಾಮ ಹೋಬಳಿಯ ಚಿಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಣ ದುರುಪಯೋಗ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಸುರೇಶ್​, ಆತನ ಪತ್ನಿ ಕೆ.ಬಿ.ಶುಭ ಹಾಗೂ ನಿರ್ದೇಶಕ ಶಾಮಿಯಾನ್​ ಮಂಜೇಗೌಡ​ ಮತ್ತು ಸಂಘದ ಅಧ್ಯಕ್ಷ ಚಿಗಹಳ್ಳಿ ಗೌಡಪ್ಪ, ಹಂಚಿಹಳ್ಳಿ ಗ್ರಾಮದ ಕಮಲಮ್ಮ, ಪ್ರದೀಪ ಎಂಬುವವರಿಂದ ಲಕ್ಷಾಂತರ ರೂ. ಅವ್ಯವಹಾರ ನಡೆದಿರುವುದು ಸಾಕ್ಷಾಧಾರಗಳಿಂದ ಸಾಬೀತಾಗಿದೆ. ಅಲ್ಲದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮ ಹಣ ಸಂದಾಯ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

chigahalli-milk-producers-association-money-abuse-case
ಚಿಗಹಳ್ಳಿ ಹಾಲು ಉತ್ಪಾದಕರ ಸಂಘದಲ್ಲಿ ಹಣ ದುರಪಯೋಗ ಆರೋಪ

ಅಕ್ರಮ ಹಣ ವರ್ಗಾವಣೆ

ಕಾರ್ಯದರ್ಶಿ ಸುರೇಶ ತನ್ನ ಪತ್ನಿ ಶುಭ ಹೆಸರಿಗೆ ಕೌಶಿಕದ ಕರ್ನಾಟಕ ಬ್ಯಾಂಕಿನ ಉಳಿತಾಯ ಖಾತೆ ಹಾಗೂ ಹೆಚ್‌ಡಿಸಿಸಿ ಬ್ಯಾಂಕ್​ ಖಾತೆಗೆ ಹಣ ಪಾವತಿಸಿದ್ದಾನೆ. ಅಲ್ಲದೆ ತನ್ನದೇ ಹೆಸರಿನಲ್ಲಿ ಹಾಸನದ ಹೆಚ್‌ಡಿಸಿಸಿ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದಾನೆ. ಕಾರ್ಯದರ್ಶಿ ಅಣ್ಣ ಶಾಮಿಯಾನ್ ಮಂಜೇಗೌಡ ತಾಲೂಕಿನ ಎಂ.ಹೊಸಕೊಪ್ಪಲಿನ ನಿವಾಸಿ ಆಗಿದ್ದರೂ ಹಾಲು ಉತ್ಪಾದಕ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಹೆಚ್‌ಡಿಸಿಸಿ ಬ್ಯಾಂಕಿನ ಉಳಿತಾಯ ಖಾತೆ ಹಾಗೂ ಕರ್ನಾಟಕ ಬ್ಯಾಂಕಿನ ಖಾತೆ ಸೇರಿದಂತೆ ಒಂದೇ ಕುಟುಂಬದ 5 ಜನರಿಗೆ ಹಣ ವರ್ಗಾವಣೆ ಮಾಡಿದ್ದಾನೆ.

ದಾಖಲೆ ಸಮೇತ ದೂರು

ಕಾರ್ಯದರ್ಶಿ ನಡೆಸಿರುವ ಅವ್ಯವಹಾರ ಹಾಸನ ಹಾಲು ಉತ್ಪಾದಕ ಸಹಕಾರ ಒಕ್ಕೂಟಕ್ಕೆ ದಾಖಲೆಗಳ ಸಮೇತ ದೂರು ನೀಡಲಾಗಿದೆ. ಒಕ್ಕೂಟದ ವ್ಯವಸ್ಥಾಪಕರು ಹಾಲು ಖರೀದಿ ಪುಸ್ತಕ, ಹಣ ಬಟವಾಡೆ ಪುಸ್ತಕ, ಸಭಾ ನಡವಳಿ ಪುಸ್ತಕ, ನಗದು ಪುಸ್ತಕ, ಪ್ರೋತ್ಸಾಹ ಧನ ಪುಸ್ತಕ, ಪಶು ಆಹಾರ ಖರೀದಿ ಪುಸ್ತಕ ಹಾಗೂ ಕರ್ನಾಟಕ ಸರ್ಕಾರದ ಪ್ರೋತ್ಸಾಹ ಧನ ಯೋಜನೆಯಡಿ ಪ್ರತಿ ತಿಂಗಳು ಹಾಲು ಉತ್ಪಾದಕರಿಗೆ ಹಣ ಸಂದಾಯವಾಗಿರುವ ಮಾಹಿತಿ ಪುಸ್ತಕಗಳನ್ನು ಪರಿಶೀಲನೆಗೆ ಒದಗಿಸುವಂತೆ ಹೇಳಿದ್ದಾರೆ.

ಆದರೆ ಕಾರ್ಯದರ್ಶಿ ಹಾಗೂ ಅಧ್ಯಕ್ಷರು ದಾಖಲೆಗಳನ್ನು ಒದಗಿಸುತ್ತಿಲ್ಲ. ಆದ್ದರಿಂದ ಒಕ್ಕೂಟ 5 ತಿಂಗಳ ಹಾಲಿನ ಹಣವನ್ನು ತಡೆ ಹಿಡಿದಿದ್ದಾರೆ. ಗ್ರಾಮದಲ್ಲಿ 41 ಹಾಲು ಉತ್ಪಾದಕರು ಪ್ರತಿನಿತ್ಯ ಹಾಲನ್ನು ಹಾಕುತ್ತಿದ್ದಾರೆ. ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವುದರಿಂದ ಜೀವನ ನಡೆಸುವುದೇ ದುಸ್ತರವಾಗಿದೆ.

ಕಾರ್ಯದರ್ಶಿ ಆತ್ಮಹತ್ಯೆ ಬೆದರಿಕೆ

ಇನ್ನು ಕಾರ್ಯದರ್ಶಿಗೆ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಕೇಳಿದರೆ ಆತ ಆತ್ಮಹತ್ಮೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಅಕ್ರಮ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆ. ಪ್ರಾಮಾಣಿಕನಾಗಿದ್ದರೆ ದಾಖಲೆಗಳನ್ನು ಕೊಡಬಹುದಲ್ಲವೇ?. ಈಗಾಗಲೇ ಮುಂಗಾರು ಪ್ರವೇಶಿಸುತ್ತಿದೆ. ಕೃಷಿ ಚಟುವಟಿಕೆಗಳಿಗೆ ಹಣದ ಅಗತ್ಯ ಇರುವುದರಿಂದ ಕೂಡಲೇ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈಗಾಗಲೇ ಈ ವಿಚಾರನ್ನು ಸಹಕಾರ ಇಲಾಖೆಯ ಸಹಾಯಕ ರಿಜಿಸ್ಟ್ರಾರ್​​‌ ಗಮನಕ್ಕೆ ತಂದಿದ್ದೇವೆ. ಲಾಕ್‌ಡೌನ್ ಮುಗಿದ ತಕ್ಷಣ ಉತ್ಪಾದಕರ ಸಂಘದ ನಿರ್ದೇಶಕ ಸುರೇಶ್ ಅಗತ್ಯ ದಾಖಲೆಗಳನ್ನು ಕೊಡುವುದಾಗಿ ಹೇಳಿದ್ದಾರೆ. ತನಿಖೆಯಲ್ಲಿ ಅವ್ಯವಹಾರ ಸಾಬೀತಾದರೆ ಆಡಳಿತ ಮಂಡಳಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹಾಮೂಲು ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.