ETV Bharat / state

ಎತ್ತಿನಗಾಡಿ ಓಟದ ಸ್ಪರ್ಧೆ ವೇಳೆ ಅವಘಡ: ಪ್ರಾಣಾಪಾಯದಿಂದ ಪಾರಾದ 5 ಜನ

ಹಾಸನದ ಅರಕಲಗೂಡು ತಾಲೂಕಿನ ದೊಡ್ಡಬೆಮ್ಮತ್ತಿ ಗ್ರಾಮದಲ್ಲಿ ಇಂದು ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಎತ್ತಿನಗಾಡಿ ಐದು ಮಂದಿಯ ಮೇಲೆ ಸಾಗಿದೆ. ಅವರು ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಎತ್ತಿನಗಾಡಿ ಓಟದ ಸ್ಪರ್ಧೆ ವೇಳೆ ಅವಘಡ
ಎತ್ತಿನಗಾಡಿ ಓಟದ ಸ್ಪರ್ಧೆ ವೇಳೆ ಅವಘಡ
author img

By

Published : Jan 18, 2021, 10:54 PM IST

ಹಾಸನ: ಎತ್ತಿನಗಾಡಿ ಓಟದ ಸ್ಪರ್ಧೆ ನಡೆಯುವ ವೇಳೆ ಕೂದಲೆಳೆಯ ಅಂತರದಿಂದ ಐದು ಜನ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹಾಸನದ ಅರಕಲಗೂಡು ತಾಲೂಕಿನಲ್ಲಿ ನಡೆದಿದೆ.

ಎತ್ತಿನಗಾಡಿ ಓಟದ ಸ್ಪರ್ಧೆ ವೇಳೆ ಅವಘಡ

ಅರಕಲಗೂಡು ತಾಲೂಕಿನ ದೊಡ್ಡಬೆಮ್ಮತ್ತಿ ಗ್ರಾಮದಲ್ಲಿ ಇಂದು ಆಯೋಜಿಸಿದ್ದ ಎತ್ತಿನಗಾಡಿ ಓಟದ ಸ್ಪರ್ಧೆಯ ವೇಳೆ ಐದು ಮಂದಿಯ ಮೇಲೆ ಎತ್ತಿನ ಬಂಡಿ ಸಾಗಿದೆ. ಸ್ಪರ್ಧೆ ಆರಂಭವಾಗಿ ಮೊದಲ ಸುತ್ತಿನಲ್ಲಿ ಜಯಶೀಲರಾದ ಮಂಜುನಾಥ್ ಎಂಬುವರ ಎತ್ತಿನಗಾಡಿ ನೆರೆದಿದ್ದ ಪ್ರೇಕ್ಷಕರ ಮೇಲೆ ನುಗ್ಗಿದೆ.

ಓದಿ:ನಾಳೆ ಬೆಂಗಳೂರಿನಲ್ಲಿ ಅಸಮಾಧಾನಿತ ಶಾಸಕರ ಸಭೆ; ಶಾಸಕ ರೇಣುಕಾಚಾರ್ಯ

ಪ್ರಾಯೋಜಕರು ಸಾಕಷ್ಟು ಬಾರಿ ಎತ್ತಿನಗಾಡಿ ಓಟ ಸ್ಪರ್ಧೆಯಿಂದ 400 ಮೀಟರ್ ಅಂತರದಲ್ಲಿ ಇರಬೇಕು ಎಂದು ಸೂಚಿಸಿದ್ದರೂ, ಪ್ರೇಕ್ಷಕರು ನೋಡಲು ಮುಗಿಬಿದ್ದ ಹಿನ್ನೆಲೆ ಎತ್ತಿನ ಬಂಡಿಯ ಚಕ್ರಕ್ಕೆ ಸಿಲುಕಿ ಕೂದಲೆಳೆಯಲ್ಲಿ ಪಾರಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಇಂತಹದೊಂದು ಘಟನೆಗೆ ಪ್ರೇಕ್ಷಕರ ನಿರ್ಲಕ್ಷವೇ ಕಾರಣ ಎಂಬುದು ಆಯೋಜಕರ ಮತ್ತು ಅಲ್ಲಿನ ಸ್ಥಳೀಯರ ಆರೋಪವಾಗಿದೆ. ಸಣ್ಣಪುಟ್ಟ ಗಾಯಗಳಾಗಿರುವ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಿ ತುರ್ತು ಚಿಕಿತ್ಸೆ ಕೊಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.