ಹಾಸನ: ನಗರದ ಬಿ.ಎಂ. ರಸ್ತೆ ಬಳಿ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡ ಅಭಿಮಾನಿ ಬಳಗದಿಂದ ಶ್ರೀ ಚಾಮರಾಜೇಂದ್ರ ರಕ್ತನಿಧಿ ಸಂಯುಕ್ತಾಶ್ರಯದಲ್ಲಿ ಸ್ವಯಂ ಪ್ರೇರಿತವಾಗಿ ನೂರಾರು ಜನರು ರಕ್ತದಾನ ಮಾಡಿದರು.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ರಕ್ತದಾನಿಗಳ ಸಂಖ್ಯೆ ತೀರಾ ಕಡಿಮೆಯಾಗಿರುವುದರಿಂದ ರಕ್ತನಿಧಿ ಬ್ಯಾಂಕಿನಲ್ಲಿ ರಕ್ತದ ಶೇಖರಣೆಯಲ್ಲೂ ಇಳಿಕೆಯಾಗಿದೆ. ರೋಗಿಗಳ ಆಪರೇಷನ್ ಮತ್ತು ಇತರೆ ಚಿಕಿತ್ಸೆ ಸಮಯದಲ್ಲಿ ರಕ್ತದ ಅವಶ್ಯಕತೆ ಹೆಚ್ಚು ಇದ್ದು, ಶಾಸಕ ಪ್ರೀತಂ ಜೆ. ಗೌಡ ಅಭಿಮಾನಿ ಬಳಗದಿಂದ ರಕ್ತದಾನ ಮಾಡಲಾಗುತ್ತಿದೆ ಎಂದರು.
ಕೊರೊನಾ ವೈರಸ್ ಹರಡಿರುವುದರಿಂದ ಸರ್ಕಾರದ ಆದೇಶದಂತೆ ಸಾಮಾಜಿಕ ಅಂತರದಲ್ಲಿ ಸಾಲಾಗಿ ನಿಂತು ನೂರಾರು ಜನರು ರಕ್ತದಾನ ಮಾಡಿದರು.