ETV Bharat / state

ಪೊಲೀಸ್ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಬಿಜೆಪಿ ಒತ್ತಡ ಹೇರಿಲ್ಲ: ಗೋಪಾಲಯ್ಯ ಸ್ಪಷ್ಟನೆ - ಹಾಸನ

ಅಧಿಕಾರಿಗಳಿಗೆ ಕಿರುಕುಳ ಕೊಡುವ ಕೆಲಸ ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಯಾರೂ ಮಾಡಿಲ್ಲ. ನಾನು ಇಲ್ಲಿನ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಜೊತೆ ಫೋನ್ ಮೂಲಕ ಸಮಸ್ಯೆಗಳನ್ನು ಕೇಳುತ್ತಿದ್ದೇನೆ ಎಂದು ಸಚಿವ ಕೆ. ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ.

Minister K. Gopallah
ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ವಿಚಾರದಲ್ಲಿ ಬಿಜೆಪಿ ಒತ್ತಡ ಹೇರಿಲ್ಲ: ಗೋಪಾಲಯ್ಯ ಸ್ಪಷ್ಟನೆ
author img

By

Published : Aug 5, 2020, 9:29 AM IST

ಹಾಸನ: ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ನಮ್ಮ ಪಕ್ಷದ ಪರಾಜಿತ ಅಭ್ಯರ್ಥಿಗಳೂ ಸೇರಿದಂತೆ ಬಿಜೆಪಿಯವರು ಯಾರೂ ಭಾಗಿಯಾಗಿಲ್ಲ. ಇತ್ತೀಚೆಗೆ ಅಂತಹ ಯಾವ ಪ್ರಸಂಗವೂ ನಡೆದಿಲ್ಲ. ಯಾರಿಗೂ ಯಾರೂ ಯಾವ ರೀತಿಯ ಒತ್ತಡ ಹಾಕುವ ಕೆಲಸವನ್ನು ಬಿಜೆಪಿ ಪಕ್ಷ ಮಾಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ವಿಚಾರದಲ್ಲಿ ಬಿಜೆಪಿ ಒತ್ತಡ ಹೇರಿಲ್ಲ: ಗೋಪಾಲಯ್ಯ ಸ್ಪಷ್ಟನೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಯಾವುದಾದರೂ ವರ್ಗಾವಣೆ ಪ್ರಕರಣ ಇದ್ದರೆ ನಮ್ಮ ಬಳಿ ಹೇಳಿ ಅಧಿಕಾರಿಗಳನ್ನು ನಾನೇ ಕರೆಯಿಸಿ ಕೇಳುತ್ತೇನೆ. ಯಾವುದೇ ಸಮಸ್ಯೆ ನನ್ನ ಮುಂದೆ ಬಂದರೆ ಗಂಭೀರವಾಗಿ ತೆಗೆದುಕೊಂಡು ಬಗೆಹರಿಸುವೆ ಎಂದರು.

ಅಧಿಕಾರಿಗಳಿಗೆ ಕಿರುಕುಳ ಕೊಡುವ ಕೆಲಸ ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಯಾರೂ ಮಾಡಿಲ್ಲ. ನಾನು ಇಲ್ಲಿನ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಜೊತೆ ಫೋನ್ ಮೂಲಕ ಸಮಸ್ಯೆಗಳನ್ನು ಕೇಳುತ್ತಿದ್ದೇನೆ. ಏನೇ ಸಮಸ್ಯೆ ಇದ್ದರೂ ಹೇಳುತ್ತಾರೆ. ಪಿಎಸ್​ಐ ಕಿರಣ್ ಕುಮಾರ್ ಆತ್ಮಹತ್ಯೆ ಪ್ರಕರಣ ಸಂಪೂರ್ಣ ತನಿಖೆ ನಂತರ ಸತ್ಯಾಂಶ ತಿಳಿಯಲಿದೆ. ತನಿಖೆ ಮಾಡಲು ಅಧಿಕಾರಿಗಳಿಗೆ ವಹಿಸಿರುವಾಗ ಮಧ್ಯದಲ್ಲಿ ನಾವು ಮಾತನಾಡುವುದು ತಪ್ಪಾಗುತ್ತದೆ. ನಿಷ್ಪಕ್ಷಪಾತವಾಗಿ ತ್ವರಿತ ಗತಿಯಲ್ಲಿ ತನಿಖೆ ನಡೆಯಲಿದೆ. ಪ್ರಕರಣವನ್ನು ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ. ಯಾರಿಗೂ ಅನುಮಾನ ಬೇಡ ಎಂದು ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು.

ಯಾವ ಪಕ್ಷವನ್ನೂ ಗುರಿಯಾಗಿಟ್ಟುಕೊಂಡು ನಾನು ಕೆಲಸ ಮಾಡುವುದಿಲ್ಲ. ನಾನು ಇವರೆಗೂ ಪ್ರಾಮಾಣಿಕವಾಗಿ ಜಿಲ್ಲೆಯಲ್ಲಿ ಕೆಲಸ ಮಾಡಿರುವೆ. ಸೇಡಿನ ರಾಜಕಾರಣ ಮಾಡುವುದಿಲ್ಲ ಎಂದರು. ಕಳೆದ ಮೂರ್ನಾಲ್ಕು ದಿನಗಳಿಂದ ಸ್ಥಳೀಯ ಗಾರ್ಮೆಂಟ್ಸ್​​ ಕಂಪನಿಯಲ್ಲಿ 150 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರ ಬಗ್ಗೆ ನಿಗಾ ವಹಿಸಲಾಗಿದೆ. ಕಾರ್ಖಾನೆಯ 61 ಜನರಿಗೆ, ಕೃಷಿ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ಸರ್ಕಾರ ಈಗಾಗಲೇ 9000 ಕಿಟ್​​ಗಳನ್ನು ಕೊಟ್ಟಿದೆ. 1500 ಕಿಟ್​ಗಳನ್ನು ಫ್ಯಾಕ್ಟರಿಗಳಲ್ಲಿ ಪರೀಕ್ಷೆ ಮಾಡಲು ಕೊಡಲಾಗಿದೆ ಎಂದು ಮಾಹಿತಿ ನೀಡಿದರು.

ಇನ್ನು ಆತ್ಮಸ್ಥೈರ್ಯದಿಂದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸ ಮಾಡಬೇಕು. ನಾವು ಯಾವ ಒತ್ತಡವನ್ನು ಹಾಕುವುದಿಲ್ಲ ಎಂದು ಧೈರ್ಯ ತುಂಬಿದರು. ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಚನ್ನರಾಯಪಟ್ಟಣದ ಪಿಎಸ್ ಐ ಕಿರಣ್ ಕುಮಾರ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಲಾಗಿದೆ. ಪ್ರಕರಣವನ್ನ ಸಂಪೂರ್ಣವಾಗಿ ತನಿಖೆ ನಡೆಸಿ ಸತ್ಯವನ್ನ ಹೊರಗೆ ತರುತ್ತೇವೆ. ಅವರ ಕುಟುಂಬಕ್ಕೆ ಸರ್ಕಾರದಿಂದ ಬರುವ ಸವಲತ್ತನ್ನು ಒದಗಿಸುತ್ತೇವೆ. ಶಕ್ತಿಮೀರಿ ವೈಯಕ್ತಿಕವಾಗಿಯೂ ಕೈಲಾದ ಸಹಾಯ ಮಾಡಲಾಗುವುದು. ಅಲ್ಲದೇ ಸರ್ಕಾರದ ಗಮನ ಸೆಳೆದು ಸಹಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ್ದು, ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ನೈತಿಕವಾಗಿ ಯಾವ ಒತ್ತಡ ಹಾಕುವುದಿಲ್ಲ ಧೈರ್ಯ ತುಂಬಿ ಸರ್ಕಾರ ನಿಮ್ಮ ಜೊತೆಯಲ್ಲಿರುವ ಬಗ್ಗೆ ತಿಳಿಸಿದ್ದೇವೆ ಎಂದರು.

ಗೌರಿ-ಗಣೇಶ್ ಹಬ್ಬ ಮತ್ತು ಮೊಹರಂ ಹಬ್ಬಗಳು ಇದೆ ತಿಂಗಳು ಬರುವುದರಿಂದ ಸರ್ಕಾರ ನೀಡುವ ನಿರ್ದೇಶನದಂತೆ ಇಲಾಖೆಯು ಕಾರ್ಯ ನಿರ್ವಹಿಸಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.