ETV Bharat / state

'ರೇವಣ್ಣ ವಿರುದ್ಧ 50 ಸಾವಿರ ಮತಗಳ ಅಂತರದಿಂದ ಗೆಲ್ಲುವೆ.. 1 ಮತ ಕಡಿಮೆಯಾದರೂ ಮತ್ತೆ ಚುನಾವಣೆಗೆ ಹೋಗುವೆ' - ಚುನಾವಣೆಯಲ್ಲಿ ವಿರುದ್ಧ ಸ್ಪರ್ಧಿಸಲು ರೇವಣ್ಣಗೆ ಪ್ರೀತಂ ಸೆಡ್ಡು

ಹಾಸನದ ಅಧಿಕಾರಿಯನ್ನು ಏಕವಚನದಲ್ಲಿ ಬೈದಿದ್ದಕ್ಕೆ ಸಿಟ್ಟಾಗಿರುವ ಶಾಸಕ ಪ್ರೀತಂ ಗೌಡ ಅವರು ಹೆಚ್​.ಡಿ. ರೇವಣ್ಣ ಅವರು ನನ್ನ ವಿರುದ್ಧ ಚುನಾವಣೆಯಲ್ಲಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

preetam-challange
ಪ್ರೀತಂಗೌಡ
author img

By

Published : Apr 30, 2022, 9:54 PM IST

ಹಾಸನ: ಮುಂದಿನ 2023ರ ಚುನಾವಣೆಯಲ್ಲಿ ನನ್ನ ವಿರುದ್ಧ ಹೆಚ್​.ಡಿ. ರೇವಣ್ಣ ಅವರು ಬಂದು ನಿಲ್ಲಲಿ. 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ. ಅಥವಾ 50 ಸಾವಿರಕ್ಕಿಂತ 1 ಮತ ಕಡಿಮೆ ಬಂದರೂ ಮತ್ತೊಮ್ಮೆ ಚುನಾವಣೆ ಎದುರಿಸುತ್ತೇನೆ. ತಾಕತ್ತಿದ್ದರೆ ರೇವಣ್ಣ ನನ್ನ ವಿರುದ್ಧ ಸ್ಪರ್ಧೆ ಮಾಡಲಿ ಅಂತ ಪ್ರೀತಂ ಗೌಡ ಬಹಿರಂಗ ಸವಾಲು ಹಾಕಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೇವಣ್ಣ ಅವರಿಂದ ನಾನು ಏನನ್ನೂ ಕಲಿಯಬೇಕಾಗಿಲ್ಲ. ಚುನಾವಣೆಯಲ್ಲಿ ನನ್ನ ವಿರುದ್ಧ ಅವರೇ ಬಂದು ಸ್ಪರ್ಧೆ ಮಾಡಬೇಕು. ಈಗಾಗಲೇ ನಾನು ಹತ್ತಾರು ಬಾರಿ ಹೇಳಿದ್ದೇನೆ. ಈಗಲೂ ಹೇಳುತ್ತಿದ್ದೇನೆ. ತಾಕತ್ತಿದ್ದರೆ ನನ್ನ ವಿರುದ್ಧ ಬಂದು ಸ್ಪರ್ಧೆ ಮಾಡಲಿ. ಸುಖಾಸುಮ್ಮನೆ ಅವರ ಕ್ಷೇತ್ರವನ್ನು ಬಿಟ್ಟು ನನ್ನ ಕ್ಷೇತ್ರಕ್ಕೆ ಬಂದು ಮಾತನಾಡುವುದಲ್ಲ ಎಂದು ಟೀಕಿಸಿದರು.

ಅವರ ಕ್ಷೇತ್ರಕ್ಕೆ ಅವರು ಕೆಲಸ ಮಾಡಿಕೊಳ್ಳಲಿ. ಅದನ್ನು ಬಿಟ್ಟು ಹಾಸನಕ್ಕೆ ಬಂದು ಅಧಿಕಾರಿಗಳನ್ನು ಏಕವಚನದಲ್ಲಿ ನಿಂದಿಸುವುದು, ವಿಷಾದ ವ್ಯಕ್ತಪಡಿಸುವುದು ಸರಿಯಲ್ಲ. ಇದು ಅವರ ವರ್ತನೆಯನ್ನು ತೋರಿಸುತ್ತದೆ. ಒಬ್ಬ ಅಧಿಕಾರಿಯ ಜೊತೆ ಮಾತನಾಡುವುದು ಹೇಗೆ ಎಂಬುದೇ ಅವರಿಗೆ ಗೊತ್ತಿಲ್ಲ. ಹಾಗಾಗಿ ಅಕ್ಷರಸ್ಥರಿಗೂ, ಅನಕ್ಷರಸ್ಥರಿಗೂ ಇರುವ ವ್ಯತ್ಯಾಸ ಇವರಿಂದ ಗೊತ್ತಾಗುತ್ತದೆ ಎಂದು ಜರಿದರು.

ಓದಿ: ಹೊರಟ್ಟಿ ಬಿಜೆಪಿ ಸೇರ್ಪಡೆ ವಿಚಾರ: ಸೂಕ್ತ ಸಮಯದಲ್ಲಿ ಸೂಕ್ತವಾದ ನಿರ್ಧಾರ ಎಂದ ಜೋಶಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.