ಕೋವಿಡ್-19 ತಡೆಗಟ್ಟುವಲ್ಲಿ ಬಿಜೆಪಿ ವಿಫಲ: ಶಾಸಕ ಡಾ.ರಂಗನಾಥ್ ಆರೋಪ - Hassan
ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರದ ಚುಕ್ಕಾಣಿ ಹಿಡಿದು ಕೋವಿಡ್-19 ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಕುಣಿಗಲ್ ಕ್ಷೇತ್ರದ ಶಾಸಕ ಡಾ.ರಂಗನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
![ಕೋವಿಡ್-19 ತಡೆಗಟ್ಟುವಲ್ಲಿ ಬಿಜೆಪಿ ವಿಫಲ: ಶಾಸಕ ಡಾ.ರಂಗನಾಥ್ ಆರೋಪ MLA Dr Ranganath](https://etvbharatimages.akamaized.net/etvbharat/prod-images/768-512-7647663-107-7647663-1592358505467.jpg?imwidth=3840)
ಹಾಸನ: ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರದ ಚುಕ್ಕಾಣಿ ಹಿಡಿದು ಕೋವಿಡ್-19 ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಕುಣಿಗಲ್ ಕ್ಷೇತ್ರದ ಶಾಸಕ ಡಾ.ರಂಗನಾಥ್ ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋವಿಡ್-19ರ ವೇಳೆ ಜಿಲ್ಲೆಯ ಚನ್ನರಾಯಪಟ್ಟಣ ಅರಸೀಕೆರೆ ಭಾಗದಲ್ಲಿ ರೈತರ ಸುಮಾರು 15 ಲಕ್ಷ ಕೆ.ಜಿ ಯಷ್ಟು ತರಕಾರಿಗಳನ್ನು ಖರೀದಿಸಿ ಇವತ್ತು ನಾನು ನಮ್ಮ ಭಾಗದಲ್ಲಿ ವಿತರಣೆ ಮಾಡಿದ್ದೇನೆ. ಇದಕ್ಕೆ ಕಾರಣೀಕರ್ತರು ನಮ್ಮ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾಗಿರುವ ಡಿಕೆ ಸುರೇಶ್ ಎಂದರು.
ಇನ್ನು ಕೊರೊನಾ ಹರಡಿದ್ದ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಅಸಂಘಟಿತ ಕಾರ್ಮಿಕರು, ರೈತರುಗಳಿಗೆ ಸರ್ಕಾರ ನೆರವಾಗಬೇಕು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಎಚ್ಚರಿಸಿದ್ದು ಡಿಕೆ ಶಿವಕುಮಾರ್ ಎಂದರು. ಸಂಸದ ಡಿ.ಕೆ. ಸುರೇಶ್ ಮಾರ್ಗದರ್ಶನದಲ್ಲಿ ನಮ್ಮ ಕ್ಷೇತ್ರದಲ್ಲಿ ಬಡ ರೋಗಿಗಳಿಗೆ ಉಚಿತವಾಗಿ ರೋಗ ನಿರೋಧಕ ಮಾತ್ರೆಗಳನ್ನು ನೀಡಲಾಗುತ್ತಿದೆ ಎಂದು ಶಾಸಕರು ಹೇಳಿಕೊಂಡರು.