ಹಾಸನ: ಅನಗತ್ಯವಾಗಿ ರಸ್ತೆಗಿಳಿದು ಕರ್ಫ್ಯೂ ರೂಲ್ಸ್ ಬ್ರೇಕ್ ಮಾಡಿದ ಜನರಿಗೆ ಕಪ್ಪೆ ಜಿಗಿತ ಶಿಕ್ಷೆ ನೀಡಿದ ಘಟನೆ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ.
ಬೇಲೂರು ಪಟ್ಟಣದ ನೆಹರು ನಗರದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅನಗತ್ಯ ಓಡಾಟ ಮಾಡುತ್ತಿದ್ದ ವಾಹನ ಸವಾರರಿಗೆ ಸರ್ಕಲ್ ಇನ್ಸಪೆಕ್ಟರ್ ಶ್ರೀಕಾಂತ, ಬಸ್ಕಿ ಹೊಡೆಸಿ ಮತ್ತೆ ತಪ್ಪು ಮಾಡದಂತೆ ಎಚ್ಚರಿಕೆ ನೀಡಿದರು.
ಮಹಿಳೆಯರಿಗೂ ಎಚ್ಚರಿಕೆ ನೀಡಿದ ಪೊಲೀಸರು, ಆಸ್ಪತ್ರೆ ನೆಪ ಹೇಳಿಕೊಂಡು ಇಬ್ಬಿಬ್ಬರು ಬಂದ್ರೆ ವಾಹನ ಸೀಜ್ ಮಾಡುವುದಾಗಿ ವಾರ್ನಿಂಗ್ ನೀಡಿ ಕಳುಹಿಸಿದ್ದಾರೆ.
ಇವತ್ತು ಬಸ್ಕಿ ಹೊಡೆಸಿದ್ದೇನೆ, ನಾಳೆಯಿಂದ ವಾಹನಗಳನ್ನು ಜಪ್ತಿ ಮಾಡಿ ಒಂದು ಸಾವಿರ ದಂಡ ಹಾಕ್ತೇನೆ ಎಂದು ಅನಗತ್ಯವಾಗಿ ಓಡಾಡುವವರಿಗೆ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಕಾಂತ ಎಚ್ಚರಿಕೆ ನೀಡಿದರು.