ETV Bharat / state

ಅರೆ ಮಿಲಿಟರಿ ಪಡೆಯ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿದ ಬೇಲೂರು ರಥೋತ್ಸವ - etv bharat bharat kannada

ವಿಶ್ವವಿಖ್ಯಾತ ಬೇಲೂರಿನ ಚನ್ನಕೇಶವ ರಥೋತ್ಸವ ವೇಳೆ ಕುರಾನ್ ಪಠಣೆ ಮಾಡುವುದಕ್ಕೆ ವಿವಿಧ ಹಿಂದೂಪರ ಸಂಘಟನೆಗಳಿಂದ ವಿರೋಧ ವ್ಯಕ್ತಪಡಿಸಿದ್ದರಿಂದ ಮೊದಲ ಬಾರಿಗೆ ಕುರಾನ್ ಪಠಣೆ ಇಲ್ಲದೆ ರಥೋತ್ಸವ ಜರುಗಿದೆ.

belur-rathotsava-celebrated-with-pomp-in-the-presence-of-a-paramilitary-force
ಅರೆ ಮಿಲಿಟರಿ ಪಡೆಯ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿದ ಬೇಲೂರು ರಥೋತ್ಸವ
author img

By

Published : Apr 4, 2023, 3:47 PM IST

Updated : Apr 4, 2023, 5:14 PM IST

ಹಾಸನ: ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬೇಲೂರು ಚೆನ್ನಕೇಶವ ಸನ್ನಿಧಿಯಲ್ಲಿ ಅರೆ ಮಿಲಿಟರಿ ಪಡೆಯ ಬಂದೋಬಸ್ತಿನಲ್ಲಿ ಕುರಾನ್ ಪಠಣೆ ಇಲ್ಲದೆ ರಥೋತ್ಸವ ಯಶಸ್ವಿಯಾಗಿ ಜರುಗಿದೆ. ಈ ಹಿಂದೆ ರಥೋತ್ಸವದ ವೇಳೆ ಕುರಾನ್​ ಪಠಣೆ ಮಾಡುತ್ತಿದ್ದರು. ಆದರೆ, ಕಳೆದ ವರ್ಷದಿಂದ ಹಿಂದೂಪರ ಸಂಘಟಣೆಗಳಿಂದ ವಿರೋಧ ವ್ಯಕ್ತವಾಗಿತ್ತು.

ಈ ಬಾರಿ ಕುರಾನ್​ ಪಠಣೆ ಮಾಡಿಲ್ಲ - ಸೈಯದ್​ ಸಜಾದ್​ ಭಾಷಾ ಖಾದ್ರಿ.. ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಇಂದು ಇತಿಹಾಸ ಪ್ರಸಿದ್ಧ ಬೇಲೂರು ಚೆನ್ನಕೇಶವ ರಥೋತ್ಸವ ಜರುಗಿತು. ಚನ್ನಕೇಶವನ ರಥೋತ್ಸವಕ್ಕೆ ಕುರಾನ್ ಪಠಣೆ ಮಾಡಬಾರದು ಎಂದು ವಿವಿಧ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೇ ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಕುರಾನ್ ಪಠಣೆ ಮಾಡಲು ಬಂದಿದ್ದ ದೊಡ್ಡ ಮೇದೂರು ಗ್ರಾಮದ ಸೈಯದ್ ಸಜಾದ್ ಭಾಷಾ ಖಾದ್ರಿ ಅವರು ಈ ಬಾರಿ ಕೇವಲ ದೇವಸ್ಥಾನದ ಮುಂಭಾಗದ ಮೆಟ್ಟಿಲ ಬಳಿ ಮುಸ್ಲಿಂ ಧರ್ಮದ ಶ್ಲೋಕ ಹೇಳಿ ವಂದನೆ ಸಲ್ಲಿಸಿದ್ದು, ಕುರಾನ್ ಪಠಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಹಿತಕರ ಘಟನೆ ನಡೆಯದಂತೆ ಪೊಲೀಸರಿಂದ ಬಿಗಿ ಬಂದೋಬಸ್ತ್.. ಇನ್ನು, ಮುಸ್ಲಿಂ ಧರ್ಮದ ಪ್ರಕಾರ ಶ್ಲೋಕ ಹೇಳಲು ಮುಂದಾದ ವೇಳೆ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ‘ಜೈ ಶ್ರೀ ರಾಮ್ ನಾವೆಲ್ಲ ಹಿಂದೂ ನಾವೆಲ್ಲ ಒಂದು’ ಎಂದು ಘೋಷಣೆ ಕೂಗಿ ಮುಸ್ಲಿಂ ಧರ್ಮದ ಪ್ರಾರ್ಥನೆಗೆ ಅಡ್ಡಿಪಡಿಸಿದ ಘಟನೆಯು ಕೂಡ ನಡೆಯಿತು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ರಥೋತ್ಸವಕ್ಕೆ ಸಾಕ್ಷಿಯಾದ ಲಕ್ಷಾಂತರ ಜನರು.. ಶ್ಲೋಕ ಹೇಳುವುದಕ್ಕೂ ಅವಕಾಶ ನೀಡಿದ ಜಿಲ್ಲಾಡಳಿತದ ವಿರುದ್ಧ ಹಿಂದೂ ಸಂಘಟನೆಗಳು, ಹಿಂದೂ ವಿರೋಧಿ ಜಿಲ್ಲಾಡಳಿತಕ್ಕೆ ಧಿಕ್ಕಾರ ಧಿಕ್ಕಾರ ಎಂದು ಕೂಗುವ ಮೂಲಕ ಪ್ರತಿಭಟನೆ ನಡೆಸಿದರು. ಇದರ ಮಧ್ಯೆಯೂ ವಿಜೃಂಭಣೆಯಿಂದ ನಡೆದ ಬೇಲೂರು ಚೆನ್ನಕೇಶವ ನಗರ ರಥೋತ್ಸವಕ್ಕೆ ಲಕ್ಷಾಂತರ ಮಂದಿ ಭಾಗಿಯಾಗಿದ್ದರು.

ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ: ಕಳೆದ ಮಾರ್ಚ್ 28 ರಂದು ನೂರಾರು ಕಾರ್ಯಕರ್ತರು ರಥೋತ್ಸವದಲ್ಲಿ ಕುರಾನ್​ ಪಠಣೆ ವಿರೋಧಿಸಿ ಬೇಲೂರಿನ ದೇವಾಲಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ ಬೈಕ್‌ನಲ್ಲಿ ಬಂದ ಯುವಕ ಘೋಷಣೆ ಕೂಗಿದ್ದನು. ಇದರಿಂದ ಪ್ರತಿಭಟನಾಕಾರರು ಮತ್ತು ಯುವಕನ ಮಧ್ಯೆ ವಾಗ್ವಾದ ನಡೆದು, ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು.

ಇತ್ತೀಚಿಗೆ ಕುರಾನ್​ ಪಠಣೆ ಬೇಡವೆಂದು ಆಗ್ರಹಿಸಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಯುವಕನೋರ್ವ ಘೋಷಣೆ ಕೂಗಿದ್ದ. ಇದರಿಂದ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು.

ಇದನ್ನೂ ಓದಿ: ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವ ಸಂಭ್ರಮ.. ತೇರು ಕದಲುವ ಮೊದಲು ಕುರಾನ್ ಪಠಣ

Last Updated : Apr 4, 2023, 5:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.