ETV Bharat / state

ಸರ್ಕಾರ-ಖಾಸಗಿ ವ್ಯಕ್ತಿಯ ನಡುವಿನ ಜಟಾಪಟಿ: ಬೀಕನಹಳ್ಳಿ ಪುರದಮ್ಮ ದೇವಾಲಯದ ದ್ವಾರಕ್ಕೆ ಬೀಗ!

author img

By

Published : Jan 19, 2021, 11:49 PM IST

ಅಂಗಡಿ-ಮುಂಗಟ್ಟು ಹಾಗೂ ಅಡಿಗೆ ಮನೆ ಸೇರಿದಂತೆ ಖಾಸಗಿ ವ್ಯಕ್ತಿ 15 ಲಕ್ಷಕ್ಕೆ ಟೆಂಡರ್ ಮಾಡಿಕೊಂಡು 5 ಸಾವಿರ ಕಟ್ಟಿ ಉಳಿಕೆ ಹಣವನ್ನ ಸರ್ಕಾರಕ್ಕೆ ಪಾವತಿಸಿಲ್ಲ. ಅಧಿಕಾರಿಗಳು ಹರಾಜು ಹಣ ಬಂದಿಲ್ಲ  ಎಂಬ ಕಾರಣಕ್ಕೆ ದೇವಾಲಯದ ಆವರಣ ಗೇಟಿಗೆ ಬಿಗ ಜಡಿದು ಕೈ ತೊಳೆದುಕೊಂಡಿದ್ದಾರೆ.

beekanahalli-puradamamma-temple-door-louck-news
ಬೀಕನಹಳ್ಳಿ ಪುರದಮ್ಮ ದೇವಾಲಯ ದ್ವಾರಕ್ಕೆ ಬೀಗ

ಹಾಸನ: ಜಿಲ್ಲೆಯ ಪ್ರಮುಖ ದೇವಾಲಯವೊಂದು ಮುಜರಾಯಿ ಇಲಾಖೆಗೆ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಸೇರ್ಪಡೆಗೊಂಡಿದ್ದು, ಅಧಿಕಾರಿಗಳ ಎಡವಟ್ಟಿನಿಂದ ದೇವಸ್ಥಾನಕ್ಕೆ ಬೀಗ ಬಿದ್ದಿದೆ. ಅಧಿಕಾರಿಗಳು ಮಾಡಿರುವ ಅಚಾತುರ್ಯವಾದ್ರೂ ಏನು..? ಸ್ಥಳೀಯರು ಮತ್ತು ಭಕ್ತಾದಿಗಳ ಆಕ್ರೋಶಕ್ಕೆ ಕಾರಣವೇನು..? ಇಲ್ಲಿದೆ ಸಂಪೂರ್ಣ ವರದಿ.

ಬೀಕನಹಳ್ಳಿ ಪುರದಮ್ಮ ದೇವಾಲಯ ದ್ವಾರಕ್ಕೆ ಬೀಗ

ಓದಿ: ದಾಳಿಯ ನಂತರ ಎಚ್ಚೆತ್ತ ವಿಸ್ಟ್ರಾನ್:​ ಷರತ್ತುಗಳ ಮೇಲೆ ನೇಮಕಾತಿ ಪ್ರಕ್ರಿಯೆ ಆರಂಭ

ಹಾಸನ ತಾಲೂಕಿನ ಬೀಕನಹಳ್ಳಿ ಗ್ರಾಮದಲ್ಲಿರುವ ಶ್ರೀ ಪುರದಮ್ಮ ದೇವಾಲಯ, ಜಿಲ್ಲೆಯಲ್ಲಿ ಅಷ್ಟೇ ಅಲ್ಲದೇ ರಾಜ್ಯದ ಉದ್ದಗಲಕ್ಕೂ ತನ್ನದೇ ಆದ ಹೆಸರನ್ನ ಮಾಡಿದೆ. ಆದರೆ ಕೆಲವು ಅಧಿಕಾರಿಗಳ ನಿರ್ಲಕ್ಷ್ಯದಿಂದ ದೇವಾಲಯದ ಮುಂಭಾಗದ ಗೇಟಿಗೆ ಬೀಗಮುದ್ರೆ ಬಿದ್ದಿದ್ದು, ಭಕ್ತಾದಿಗಳು ಮತ್ತೊಂದು ಮಾರ್ಗದಲ್ಲಿ ದೇವಾಲಯಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ದೇವಾಲಯದ ಭಕ್ತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ದೇವಾಲಯಕ್ಕೆ ರಾಜ್ಯದ ಮೂಲೆ ಮೂಲೆಯಿಂದಲೂ ಭಕ್ತರು ಆಗಮಿಸಿ ತಾವು ಹೊತ್ತಿದ್ದ ಹರಕೆಯನ್ನು ತೀರಿಸುವ ಮೂಲಕ ತಮ್ಮ ಸಂಕಷ್ಟವನ್ನು ದೇವಿಯ ಮುಂದೆ ಸಮರ್ಪಣೆ ಮಾಡುತ್ತಾರೆ. ವಿಶೇಷವೆಂದರೆ ಇಲ್ಲಿ ಪ್ರಾಣಿ ಬಲಿ ಕೊಡುವ ಪದ್ಧತಿ ಜಾರಿಯಲ್ಲಿತ್ತು. ಹರಕೆಯನ್ನು ತೀರಿಸಿದರೆ ಕೆಲಸಗಳು ನೆರವೇರುತ್ತದೆ ಎನ್ನುವ ಪ್ರಬಲ ನಂಬಿಕೆ ಭಕ್ತರದ್ದು, ಹಾಗಾಗಿ ಜನಸಾಗರವೇ ಹರಿದು ಬರುತ್ತದೆ.

ಆದರೆ ಮುಜುರಾಯಿ ಇಲಾಖೆಗೆ ಸೇರಿರುವ ಈ ದೇವಾಲಯದ ಮುಖ್ಯ ಪ್ರವೇಶ ದ್ವಾರದ ಗೇಟಿಗೆ ಅಧಿಕಾರಿಗಳೇ ಬೀಗ ಜಡಿದಿದ್ದಾರೆ. ಇದಕ್ಕೆ ಕಾರಣ ಈ ದೇವಾಲಯದ ಬಲಿ ಪೀಠವಂತೆ. ಅಂಗಡಿ ಮುಂಗಟ್ಟು ಹಾಗೂ ಅಡಿಗೆ ಮನೆ ಸೇರಿದಂತೆ ಖಾಸಗಿ ವ್ಯಕ್ತಿ 15 ಲಕ್ಷಕ್ಕೆ ಟೆಂಡರ್ ಮಾಡಿಕೊಂಡು 5 ಸಾವಿರ ಕಟ್ಟಿ ಉಳಿಕೆ ಹಣವನ್ನ ಸರ್ಕಾರಕ್ಕೆ ಪಾವತಿಸಿಲ್ಲ. ಅಧಿಕಾರಿಗಳು ಹರಾಜು ಹಣ ಬಂದಿಲ್ಲ ಎಂಬ ಕಾರಣಕ್ಕೆ ದೇವಾಲಯದ ಆವರಣ ಗೇಟಿಗೆ ಬಿಗ ಜಡಿದು ಕೈ ತೊಳೆದುಕೊಂಡಿದ್ದಾರೆ.

ಹಿಂದೆ ಸರ್ಕಾರ ಮತ್ತು ಖಾಸಗಿ ವ್ಯಕ್ತಿಯ ನಡುವೆ ಜಟಾಪಟಿ ನಡೆದು ನಂತರ ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರ್ಪಡೆಯಾಯ್ತು. ಆದರೆ ಈಗ ದೇವಾಲಯದ ಆದಾಯ ಮೂಲವಾದ ಅಂಗಡಿ, ಬಲಿಪೀಠ ಇವುಗಳನ್ನ ಸರಿಯಾಗಿ ಹರಾಜು ಕೂಗದ ಕಾರಣ ಇಡೀ ಪುರದಮ್ಮ ದೇವಾಲಯದ ಆವರಣದಲ್ಲಿ ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ.

ಇನ್ನು ಪಾರ್ಕಿಂಗ್ ವ್ಯವಸ್ಥೆ ಕೂಡ ಸರಿಯಾಗಿಲ್ಲ, ಹಾಗೆ ಭಾನುವಾರ, ಮಂಗಳವಾರ, ಶುಕ್ರವಾರದ ದಿನ ಸಾವಿರಾರು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಣದ ವಿಚಾರದಲ್ಲಿ ದೇವಾಲಯಕ್ಕೆ ಬೀಗ ಹಾಕಿ ಸಾರ್ವಜನಿಕರಿಗೆ ಮತ್ತು ಭಕ್ತರಿಗೆ ತೊಂದರೆ ನೀಡುವುದು ಎಷ್ಟು ಸರಿ. ನಾವು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿ ಮಾಡಿದರು ಬೀಗ ತೆಗೆಯುವ ಕಾರ್ಯ ಮಾಡುತ್ತಿಲ್ಲ ಎನ್ನುವುದು ಗ್ರಾಪಂ ಸದಸ್ಯರ ಆಕ್ರೋಶ.

ಒಟ್ಟಾರೆ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಹಾಗೇ, ಮುಜರಾಯಿ ಅಧಿಕಾರಿಗಳ ಮತ್ತು ಟೆಂಡರ್ ಪಡೆದ ಗುತ್ತಿಗೆದಾರನ ನಡುವಿನ ಕಿತ್ತಾಟದಲ್ಲಿ ದೇವಾಲಯಕ್ಕೆ ಬೀಗ ಬಿದ್ದಿದೆ. ಮುಂದಿನ ದಿನದಲ್ಲಿ ಯಾವ ರೀತಿಯ ತಿರುವು ಪಡೆಯಲಿದೆ ಎಂಬುದನ್ನ ಕಾದು ನೋಡಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.