ಹಾಸನ: ಉಡುಪಿಯಿಂದ -ಬೆಂಗಳೂರಿಗೆ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ನಿಷೇಧಿತ 2 ಬಾಕ್ಸ್ ಔಷಧಿ ಬಾಕ್ಸ್ ಪತ್ತೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕೆಆರ್‌ಪುರಂ ಪೊಲೀಸರ ಕಾರ್ಯಾಚರಣೆಯಿಂದ ಬಯಲಾಗಿದೆ.
ಸೆ. 3 ರಂದು ಖಚಿತ ಮಾಹಿತಿ ಮೇರೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ ಹಾಗೂ ಬಡಾವಣೆ ಠಾಣೆ ಸಿಬ್ಬಂದಿ ಹೊಸ ಬಸ್ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಉಡುಪಿಯಿಂದ ಹಾಸನಕ್ಕೆ ಸರಬರಾಜಾಗುತ್ತಿದ್ದ ಎರಡು ಬಾಕ್ಸ್‌ಗಳಲ್ಲಿ ನಿಷೇಧಿತ ಔಷಧಿ ಪತ್ತೆಯಾಗಿತ್ತು. ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆಸಾರಿಗೆ ಸಂಸ್ಥೆ ಕೇಂದ್ರ ಕಚೇರಿಯಿಂದ ರಾಜ್ಯದ ವಿಭಾಗ ನಿಯಂತ್ರಣಾಧಿಕಾರಿಗಳಿಗೆ ಸುತ್ತೋಲೆ ಕಳುಹಿಸಲಾಗಿದ್ದು, ವಾರಸುದಾರರಿಲ್ಲದೆ ಲಗೇಜು ಸಾಗಿಸುವಾಗ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಲಗೇಜುಗಳಲ್ಲಿ ಮಾದಕ ವಸ್ತುಗಳು, ನಿಷಿದ್ಧ ವಸ್ತುಗಳು ಇರುವ ಬಗ್ಗೆ ಪರಿಶೀಲಿಸಿದ ನಂತರ ಲಗೇಜ್ ತೆಗೆದುಕೊಂಡು ಹೋಗಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.