ETV Bharat / state

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ : ಬ್ಯಾಂಕ್​ ನೌಕರರಿಂದ ಪ್ರತಿಭಟನೆ - Bank employees protest in hassan

ಬ್ಯಾಂಕ್ ಸಿಬ್ಬಂದಿಯ ವೇತನ ವೃದ್ಧಿ ಹಾಗೂ ಇತರೆ ಸೌಲಭ್ಯಗಳ ಸುಧಾರಣೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾಸನದಲ್ಲಿ ಬ್ಯಾಂಕ್​ ನೌಕರರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ
ಪ್ರತಿಭಟನಾ ಮೆರವಣಿಗೆ
author img

By

Published : Feb 1, 2020, 9:03 PM IST

Updated : Feb 1, 2020, 9:35 PM IST

ಹಾಸನ: ಬ್ಯಾಂಕ್ ಸಿಬ್ಬಂದಿ ವೇತನ ವೃದ್ಧಿ ಹಾಗೂ ಇತರೆ ಸೌಲಭ್ಯಗಳ ಸುಧಾರಣೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರದ ಹಿನ್ನೆಲೆ ನಗರದಲ್ಲೂ ಬ್ಯಾಂಕ್​ ನೌಕರರು ಪ್ರತಿಭಟನೆ ನಡೆಸಿದರು.

ನಗರದ ಎನ್.ಆರ್. ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಬ್ಯಾಂಕ್​ ನೌಕರರು ಬ್ಯಾಂಕ್ ಸಿಬ್ಬಂದಿಯ ನಾನಾ ಬೇಡಿಕೆಗಳ ಬಗ್ಗೆ ಭಾರತೀಯ ಬ್ಯಾಂಕ್ ಸಂಘಟನೆಯು ಸಕರಾತ್ಮಕವಾಗಿ ಸ್ಪಂದಿಸದೆ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ನಮ್ಮ ವೇದಿಕೆಯು ಎರಡು ದಿನಗಳ ಕಾಲ ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಬೇಡಿಕೆ ಈಡೇರದೇ ಇದ್ದಲ್ಲಿ, ಮಾರ್ಚ್ 11 ರಿಂದ ಮೂರು ದಿನಗಳ ಕಾಲ ಬ್ಯಾಂಕ್ ಮುಷ್ಕರ, ನಂತರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವುದಾಗಿ ಹೇಳಿದರು.

ನಿರಂತರ ಬೆಲೆ ಏರಿಕೆ, ಬ್ಯಾಂಕ್ ಸಿಬ್ಬಂದಿ ಮೇಲೆ ಹೆಚ್ಚುತ್ತಿರುವ ಕಾರ್ಯಭಾರ ಹಾಗೂ ಎದುರಿಸುತ್ತಿರುವ ನಾನಾ ವೃತ್ತಿ ಸಂಬಂಧಿ ಜವಾಬ್ಧಾರಿಗಳ ಹಿನ್ನೆಲೆ ಬ್ಯಾಂಕ್ ಸಿಬ್ಬಂದಿಯ ನ್ಯಾಯಬದ್ಧ ಯೋಗ್ಯತೆಗೆ ತಕ್ಕ ವೇತನ ಹೆಚ್ಚಳ ಹಾಗೂ ವೃತ್ತಿ ಸೌಲಭ್ಯಗಳಲ್ಲಿ ಸುಧಾರಣೆಯನ್ನು ಮಾಡಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದರು.

Intro:ಹಾಸನ: ಬ್ಯಾಂಕ್ ಸಿಬ್ಬಂದಿಗಳ ವೇತನ ವೃದ್ಧಿ ಹಾಗೂ ಇತರೆ ಸೌಲಭ್ಯಗಳ ಸುಧಾರಣೆಗೆ ಸಂಬಂಧಿಸಿದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ
ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರದ ಹಿನ್ನಲೆಯಲ್ಲಿ ಮೊದಲನೆ ದಿವಸ ಎನ್.ಆರ್. ವೃತ್ತದ ಬಳಿ ಇರುವ ಬ್ಯಾಂಕ್ ಮುಖ್ಯ ಕಛೇರಿ ಮುಂದೆ ಪ್ರತಿಭಟನೆಯ ಘೋಷಣೆ ಕೂಗಿ ಜಿಲ್ಲಾಧಿಕಾರಿ ಕಛೇರಿ ಆವರಣದವರೆಗೂ ಮೆರವಣಿಗೆ ನಡೆಸಲಾಯಿತು.
​ ​ ​ ​ ​ ​ ಬ್ಯಾಂಕ್ ಸಿಬ್ಬಂದಿಯ ನಾನಾ ಬೇಡಿಕೆಗಳ ಬಗ್ಗೆ ಭಾರತೀಯ ಬ್ಯಾಂಕ್ ಸಂಘಟನೆಯು ಸಕರಾತ್ಮಕವಾಗಿ ಸ್ಪಂದಿಸದೆ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ನಮ್ಮ ವೇದಿಕೆಯು ಎರಡು ದಿನಗಳ ಕಾಲ ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ ಎಂದರು.
ನಂತರ ಮಾರ್ಚ್ ೧೧ ರಿಂದ ಮೂರು ದಿನಗಳ ಕಾಲ ಬ್ಯಾಂಕ್ ಮುಷ್ಕರ, ನಂತರ ಅನಿರ್ಧಿಷ್ಟವಧಿ ಕಾಲದ ಮುಷ್ಕರಕ್ಕೆ ಕರೆ ನೀಡಿರುವುದಾಗಿ ಹೇಳಿದರು. ದ್ವಿಪಕ್ಷಿಯ ಒಪ್ಪಂದದ ಪ್ರಕಾರ ೨೦೧೭ ನವೆಂಬರ್ ೧ ರಿಂದ ವೇತನ ಪರಿಷ್ಕರಣೆ ಆಗಬೇಕಾಗಿದ್ದು, ನಮ್ಮ ಬೇಡಿಕೆಗಳನ್ನು ಅವಧಿಗಿಂತ ಮೊದಲೆ ೨೦೧೭ ಫೆಬ್ರವರಿ ಹಾಗೂ ೨೦೧೭ ಮೇ ರಂದು ಭಾರತೀಯ ಬ್ಯಾಂಕ್ ಸಂಘಟನೆ ಐಬಿಎಗೆ ಸಲ್ಲಿಸಿದ್ದು, ಇದುವರೆಗೂ ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಸುಮಾರು ೨೧ ಸುತ್ತಿನ ಮಾತುಕತೆಯಾಗಿದ್ದರೂ ಐಬಿಎ ನಮ್ಮ ಬೇಡಿಕೆಗಳಿಗೆ ಸ್ಪಂದಿಸದೇ ಇದ್ದುದ್ದರಿಂದ ಮುಷ್ಕರದ ಪರಿಸ್ಥಿತಿಗೆ ಕಾರಣವಾಗಿದೆ. ನಿರಂತರ ಬೆಳೆ ಏರಿಕೆ, ಬ್ಯಾಂಕ್ ಸಿಬ್ಬಂದಿಗಳ ಮೇಲೆ ಹೆಚ್ಚುತ್ತಿರುವ ಕಾರ್ಯಭಾರ ಹಾಗೂ ಎದುರಿಸುತ್ತಿರುವ ನಾನಾ ವೃತ್ತಿ ಸಂಬಂಧಿ ಜವಬ್ಧಾರಿಗಳ ಹಿನ್ನಲೆಯಲ್ಲಿ ಬ್ಯಾಂಕ್ ಸಿಬ್ಬಂದಿಯ ನ್ಯಾಯಬದ್ಧ ಯೋಗ್ಯತೆಗೆ ತಕ್ಕ ವೇತನ ಹೆಚ್ಚಳ ಹಾಗೂ ವೃತ್ತಿ ಸೌಲಭ್ಯಗಳಲ್ಲಿ ಸುಧಾರಣೆಯನ್ನು ಮಾಡಲು ನಮ್ಮ ಒತ್ತಾಯವಾಗಿದೆ ಎಂದು ಹೇಳಿದರು.
​ ​ ​ ​ ಬ್ಯಾಂಕ್ ಸಿಬ್ಬಂದಿಗಳಿಗೆ ವೇತನದಲ್ಲಿ ಶೇಕಡ ೨೦ ರಷ್ಟು ಹೆಚ್ಚಳ, ವಾರದಲ್ಲಿ ೫ ದಿನಗಳು ಬ್ಯಾಂಕ್ ವ್ಯವಹಾರ ನಡೆಯಬೇಕು, ವಿಶೇಷ ಭತ್ಯೆಯನ್ನು ಮೂಲ ವೇತನದಲ್ಲಿ ವಲೀನಗೊಳಿಸಬೇಕು, ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಪಿಂಚಣಿ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಕುಟುಂಬ ಪಿಂಚಿಣಿಯಲ್ಲಿ ಸುಧಾರಣೆ ಮಾಡಿ ನಿರ್ವಹಣೆ ಲಾಭವನ್ನು ಆಧರಿಸಿ ಸಿಬ್ಬಂದಿ ಕಲ್ಯಾಣ ನಿಧಿಯನ್ನು ನಿರ್ಧರಿಸಲಿ. ಯಾವುದೇ ಹೊರ ಮಿತಿಯಿಲ್ಲದೇ ನಿವೃತ್ತಿ ವರಮಾನಗಳಿಗೆ ಆದಾಯ ತೆರಿಗೆಯಿಂದ ವಿನಾಯಿತಿ ಕೊಡಬೇಕು ಹಾಗೂ ವ್ಯವಹಾರದ ಸಮಯ, ಊಟದ ವಿರಾಮ ಮೊದಲಾದಗಳಿಗೆ ಏಕರೂಪ ವ್ಯಾಖ್ಯಾನ ನೀಡಿ ರಜೆ ಕೊಶ ಸ್ಥಾಪನೆ ಮಾಡುವಂತೆ ಆಗ್ರಹಿಸಿದರು.
​ ​ ​ ​ ​ ನಮ್ಮ ಬೇಡಿಕೆಗೆ ಸಕರಾತ್ಮಕ ಸ್ಪಂದನೆ ಇಲ್ಲದ ಕಾರಣ ಮುಷ್ಕರದ ಅನಿವಾರ್ಯತೆ ಸೃಷ್ಠಿಯಾಗಿದ್ದು, ಸಾರ್ವಜನಿಕರು ಹಾಗೂ ಬ್ಯಾಂಕ್ ಗ್ರಾಃಕರು ಇದರಿಂದಾಗುವ ಅನಾನುಕುಲಗಳನ್ನು ಸಹಿಸಿಕೊಳ್ಳುವ ಔದರ್ಯ ತೋರಬೇಕೆಂದು ಮನವಿ ಮಾಡಿದರು.
​ ​ ​ ​ ​

ಬೈಟ್ : ಕುಮಾರ್, ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆಯ ಸಂಚಾಲಕ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

Body:೦Conclusion:೦
Last Updated : Feb 1, 2020, 9:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.