ETV Bharat / state

ರಾಮನಾಥಪುರದಲ್ಲಿ ಆಯುಷ್ಮಾನ್ ಕಾರ್ಡ್ ವಿತರಣೆ ಕಾರ್ಯಕ್ರಮ

author img

By

Published : Sep 8, 2020, 10:00 PM IST

ಆಸ್ಪತ್ರೆಗಳ ವಿವರ, ಎಷ್ಟು ಕಾಯಿಲೆಗಳಿಗೆ ಹೆಲ್ತ್ ಕಾರ್ಡ್ ಆಗುತ್ತದೆ ಎಂಬಿತ್ಯಾದಿ ಸರ್ಕಾರಿ ಸೌಲಭ್ಯದ ಬಗ್ಗೆ ಸಮಗ್ರ ಮಾಹಿತಿ ತಿಳಿಸುತ್ತಾ, ಕೋವಿಡ್‌ನ ಮುನ್ನೆಚ್ಚರಿಕೆಯ ಬಗ್ಗೆ, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಮತ್ತು ಕೈ ತೊಳೆಯುವುದರ, ವೈಯಕ್ತಿಕ ಶುಚಿತ್ವದ, ಪ್ರಾಥಮಿಕ ಸಂಪರ್ಕ, ಕ್ವಾರಂಟೈನ್ ಹಾಗೂ ಮನೆಯ ಮದ್ದು ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು..

Ayushman Card Distribution Program in Ramanathapuram
ರಾಮನಾಥಪುರದಲ್ಲಿ ಆಯುಷ್ಮಾನ್ ಕಾರ್ಡ್ ವಿತರಣೆ

ಅರಕಲಗೂಡು : ರಾಮನಾಥಪುರದಲ್ಲಿ ಜ್ಞಾನ ವಿಕಾಸ ಕೇಂದ್ರದ ಸೃಜನಶೀಲಾ ಕಾರ್ಯಕ್ರಮದಡಿ ಆಯುಷ್ಮಾನ್ ಕಾರ್ಡ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಕೊಡಗು ಜಿಲ್ಲೆಯ ನಿರ್ದೇಶಕ ಡಾ. ಯೋಗೇಶ್ ಮಾತನಾಡಿ, ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ದುರ್ಬಲ ವರ್ಗದ ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಹಿಳಾ ಸಬಲೀಕರಣ ಆಗುವ ಉದ್ದೇಶದಿಂದ ಪೌಷ್ಠಿಕ ಆಹಾರ ಮೇಳ, ಆರೋಗ್ಯ ಅರಿವು, ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ, ಸದಸ್ಯರ ಕೌಶಲ್ಯತೆ ಗುರುತಿಸಲಾಗುವುದು ಎಂದರು.

ಆ ಕಾರ್ಯಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಅನುಗುಣವಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಹಿಳೆಯರಿಗೆ ಅನುಕೂಲಗಳನ್ನು ಯೋಜನೆಯಿಂದ ಒದಗಿಸಲಾಗುತ್ತಿದೆ. ಅದರಲ್ಲಿ ಆಯುಷ್ಮಾನ್ ಭಾರತ್ ಕರ್ನಾಟಕ ಕಾರ್ಡ್​​​ಗಳನ್ನು (ಹೆಲ್ತ್ ಕಾರ್ಡ್) ಸದಸ್ಯರಿಗೆ ವಿತರಣೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮವು ಸದಸ್ಯರಿಗೆ ಬಹಳಷ್ಟು ಉಪಯೋಗವಾಗುತ್ತಿದೆ ಎಂದು ತಿಳಿಸಿದರು.

ಜಿಪಂ ಸದಸ್ಯ ಡಾ. ಮಂಥರ್ ಗೌಡ ಮಾತನಾಡಿ, ಸಂಘದ ಎಲ್ಲಾ ಸದಸ್ಯರುಗಳೂ ಕೋವಿಡ್-19 ಬಗ್ಗೆ ಮುನ್ನೆಚ್ಚರಿಕೆವಹಿಸಿ ಮತ್ತು ಸಂಘ ಬಲವರ್ಧನೆ ಮಾಡಿಕೊಂಡು ಉತ್ತಮ ವ್ಯವಹಾರ ಮಾಡುವ ಮೂಲಕ ಆರ್ಥಿಕತೆಯಲ್ಲಿ ಮುಂದೆ ಬನ್ನಿ ಎಂದು ಸಲಹೆ ನೀಡಿದರು. ಜಿಪಂ ಮಾಜಿ ಸದಸ್ಯ ಹೆಚ್ ಎಸ್ ಶಂಕರ್ ಮಾತನಾಡಿ, ಇಂತಹ ಕಾರ್ಯಕ್ರಮ ಬಡ ಜನರಿಗೆ ಬಹಳ ಉಪಯುಕ್ತವಾಗುತ್ತದೆ.

ಆದ್ದರಿಂದ ಯೋಜನೆಯಿಂದ ಒಳ್ಳೆಯ ವ್ಯವಹಾರವನ್ನು ಮಾಡಿ ಆರ್ಥಿಕತೆಯಲ್ಲಿ ಮುಂದೆ ಬನ್ನಿ ಎಂದು ಸದಸ್ಯರಿಗೆ ಮನವರಿಕೆ ಮಾಡುತ್ತಾ, ಇಂತಹ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದ ಜನತೆ ಪಾಲ್ಗೊಂಡು ಇದರ ಪ್ರಯೋಜನ ಪಡೆದು ಆರ್ಥಿಕವಾಗಿ ಸಧೃಢರಾಗಿ ಎಂದರು. ವೈದ್ಯಾಧಿಕಾರಿ ಡಾ. ರಾಜೇಶ್ ಮಾತನಾಡಿ, ಆಯುಷ್ಮಾನ್ ಕಾರ್ಡ್​​ ಉಪಯೋಗ, ಯಾವ ಯಾವ ಕಾಯಿಲೆಗಳಿಗೆ ಅನ್ವಯವಾಗುತ್ತದೆ.

ಆಸ್ಪತ್ರೆಗಳ ವಿವರ, ಎಷ್ಟು ಕಾಯಿಲೆಗಳಿಗೆ ಹೆಲ್ತ್ ಕಾರ್ಡ್ ಆಗುತ್ತದೆ ಎಂಬಿತ್ಯಾದಿ ಸರ್ಕಾರಿ ಸೌಲಭ್ಯದ ಬಗ್ಗೆ ಸಮಗ್ರ ಮಾಹಿತಿ ತಿಳಿಸುತ್ತಾ, ಕೋವಿಡ್‌ನ ಮುನ್ನೆಚ್ಚರಿಕೆಯ ಬಗ್ಗೆ, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಮತ್ತು ಕೈ ತೊಳೆಯುವುದರ, ವೈಯಕ್ತಿಕ ಶುಚಿತ್ವದ, ಪ್ರಾಥಮಿಕ ಸಂಪರ್ಕ, ಕ್ವಾರಂಟೈನ್ ಹಾಗೂ ಮನೆಯ ಮದ್ದು ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಬಸವಾಪಟ್ಟಣ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಮಹೇಂದ್ರಕುಮಾರ್ ಪಟೇಲ್ ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜಿಸುವುದರಿಂದ ದುರ್ಬಲ ವರ್ಗದವರಿಗೆ ಬಹಳಷ್ಟು ಪ್ರಯೋಜನವಾಗುತ್ತಿದೆ. ಇದರ ಜೊತೆಗೆ ವೃದಾಪ್ಯ ವೇತನ, ಕಿಸಾನ್ ಕಾರ್ಡ್, ಜಾಬ್ ಕಾರ್ಡನ್ನು ಮಾಡಿಸಿಕೊಡುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಕೆ.ಜಯಂತಿ, ಮಹಿಳಾ ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಕುಮಾರಿ, ಮಾಜಿ ತಾಪಂ ಸದಸ್ಯ ಲೋಕನಾಥ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಮಮತ ಚೇತನ್, ರಾಮನಾಥಪುರ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ನರಂಸಿಂಹ ಮೂರ್ತಿ, ರಾಮನಾಥಪುರ ವಲಯದ ಮೇಲ್ವಿಚಾರಕಿ ವನಿತ ಹಾಗೂ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.