ಹಾಸನ : ಹಿಮ್ಸ್ ವೈದ್ಯನ ಕರ್ಮಕಾಂಡ ಬಯಲಿಗೆ ಬಂದಿದೆ. ತರಬೇತಿ ನಿರತ ವೈದ್ಯೆಗೆ ಮುತ್ತು ಕೊಟ್ಟಿದ್ದಾರೆ ಎಂದು ಹಾಸನದ ಹಿಮ್ಸ್ ಸಹಾಯಕ ಪ್ರಾಧ್ಯಾಪಕನ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ.
ವೈದ್ಯ ಪದವಿ ಪೂರೈಸಿ ತರಬೇತಿಯಲ್ಲಿದ್ದ ವೈದ್ಯ ವಿದ್ಯಾರ್ಥಿನಿಗೆ ವೈದ್ಯನೊಬ್ಬ ಲೈಂಗಿಕ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ. ನಾನು ಲಿಫ್ಟ್‌ನಲ್ಲಿ ತೆರಳುವ ವೇಳೆ ವೈದ್ಯ ಏಕಾಏಕಿ ಮುತ್ತು ನೀಡಿದ್ದಾಗಿ ಹಾಸನ ವೈದ್ಯಕೀಯ ಸಂಸ್ಥೆಗೆ ಸಂತ್ರಸ್ತೆ ದೂರು ನೀಡಿದ್ದಾರೆ.
ಓದಿ: ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆ.. ಜ 31ಕ್ಕೆ ಸಂಸತ್ ಅಧಿವೇಶನ ಶುರು
ದೂರು ನೀಡಿದ ಬಳಿಕ ಕರ್ತವ್ಯನಿರತ ಮಹಿಳಾ ಹೌಸ್ ಡಾಕ್ಟರ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ವೈದ್ಯನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಿಮ್ಸ್ ವೈದ್ಯಶಾಸ್ತ್ರ ವಿಭಾಗದಲ್ಲಿ ಇವರು ಸಹ ಪ್ರಾದ್ಯಾಪಕರಾಗಿ ಕೆಲಸ ಮಾಡುತ್ತಿದ್ದರು.
ಜನವರಿ 12ರಂದು ಕರ್ತವ್ಯದಲ್ಲಿರುವಾಗಲೇ ಮಹಿಳಾ ವೈದ್ಯೆ ಮೇಲೆ ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಮಹಿಳಾ ವೈದ್ಯೆ ಲಿಖಿತ ದೂರು ಆಧರಿಸಿ ಹಿಮ್ಸ್ ನಿರ್ದೇಶಕರಿಗೆ, ವಿಭಾಗದ ಮುಖ್ಯಸ್ಥರಿಂದ ದೂರು ನೀಡಲಾಗಿತ್ತು. ಹಿಮ್ಸ್ ನಿರ್ದೇಶಕರ ದೂರು ಆಧರಿಸಿ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ವೈದ್ಯನನ್ನು ಅಮಾನತು ಮಾಡಲಾಗಿದೆ.
ಓದಿ: ಶಾಲೆಯಲ್ಲೇ ವಿದ್ಯಾರ್ಥಿನಿಯನ್ನು ಎಳೆದು ತಬ್ಬಿಕೊಂಡ ಮುಖ್ಯ ಶಿಕ್ಷಕ..VIDEO ಸೆರೆಹಿಡಿದ ವಿದ್ಯಾರ್ಥಿಗಳು!
ಈ ಘಟನೆ ಕುರಿತು ಮೂರು ವಾರದೊಳಗೆ ತನಿಖೆ ನಡೆಸಿ ವರದಿ ನೀಡಲು ಹಾಸನ ಹೆಚ್ಚುವರಿ ಡಿಸಿ ಕವಿತಾ ರಾಜಾರಾಂ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಹಾಗೂ ಹಿಮ್ಸ್ ಆಡಳಿತ ಮಂಡಳಿ ಉಪಾಧ್ಯಕ್ಷ ನವಿನ್ ರಾಜ್ ಸಿಂಗ್ ಆದೇಶ ಹೊರಡಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ