ETV Bharat / state

ಪಕ್ಷ ಬಿಟ್ಟವರ ಮೇಲೆ ಸೂರಜ್​ ರೇವಣ್ಣ, ಬೆಂಬಲಿಗರಿಂದ ಹಲ್ಲೆ ಆರೋಪ: ಎಕ್ಸ್​​ಕ್ಲೂಸಿವ್​ ವಿಡಿಯೋ - ಬೆಂಗಳೂರಿನ ಕಾರ್ಪೊರೇಟರ್ ಆನಂದ್ ಹೊಸೂರು

ಕಳೆದ 30-40 ವರ್ಷಗಳಿಂದ ನಾವು ಜೆಡಿಎಸ್​ನಲ್ಲಿ ನಿಯತ್ತಿನ ನಾಯಿಯಂತೆ ಕೆಲಸ ಮಾಡಿದ್ದೇವೆ. ಆದ್ರೆ ಈಗ ಪಕ್ಷ ತೊರೆದು ಬೇರೆ ಪಕ್ಷಕ್ಕೆ ಹೋದ ಹಿನ್ನೆಲೆಯಲ್ಲಿ ನಮ್ಮ ಮೇಲೆ ಹಗೆ ಸಾಧಿಸಿ ರೌಡಿಗಳನ್ನು ಬಿಟ್ಟು ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂದು ಗಾಯಾಳು ಮಧು ಆರೋಪಿಸಿದ್ದಾರೆ.

Assaulting JDS activist by Suraj Revanna, ಸೂರಜ್​ ರೇವಣ್ಣ, ಬೆಂಬಲಿಗರಿಂದ ಹಲ್ಲೆ ಆರೋಪ
ಸೂರಜ್​ ರೇವಣ್ಣ, ಬೆಂಬಲಿಗರಿಂದ ಹಲ್ಲೆ ಆರೋಪ
author img

By

Published : Dec 5, 2019, 1:49 PM IST

ಹಾಸನ: ಕೆ. ಆರ್. ಪೇಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ಬಂದಿದ್ದ ಬೆಂಗಳೂರಿನ ಕಾರ್ಪೊರೇಟರ್ ಆನಂದ್ ಹೊಸೂರು ಮತ್ತು ಅವರ ಸ್ನೇಹಿತರಾದ ಮಧು, ನವೀನ್ ಸಂತೋಷ್ ಗಿರೀಶ್ ಮೇಲೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಪುತ್ರ ಸೂರಜ್ ರೇವಣ್ಣ ಮತ್ತು ಅವರ ಬೆಂಬಲಿಗರು ನಡೆಸಿದ್ದಾರೆ ಎನ್ನಲಾದ ಹಲ್ಲೆಯ ಎಕ್ಸ್​​ಕ್ಲೂಸಿವ್​ ವಿಡಿಯೋ ಈಟಿವಿ ಭಾರತಕ್ಕೆ ಲಭ್ಯವಾಗಿದೆ.

ಮಂಗಳವಾರ ರಾತ್ರಿ ಆನಂದ ಹೊಸೂರು ಮತ್ತು ಅವರ ಮೇಲೆ ಸೂರಜ್ ರೇವಣ್ಣ ಮತ್ತವರ ಬೆಂಬಲಿಗರು ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಸದ್ಯ ಅದಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದು ಸಿಕ್ಕಿದೆ.

ಸೂರಜ್​ ರೇವಣ್ಣ, ಬೆಂಬಲಿಗರಿಂದ ಹಲ್ಲೆ ಆರೋಪ

ಇನ್ನು, ಈ ಬಗ್ಗೆ ನನ್ನ ಮಗ ಸ್ಥಳದಲ್ಲೇ ಇರಲಿಲ್ಲ ಅಂತ ರೇವಣ್ಣ ಪತ್ರಿಕಾಗೋಷ್ಟಿ ಮೂಲಕ ಸ್ಪಷ್ಟನೆ ನೀಡಿದ್ದರು. ಅಲ್ಲದೆ, ಪ್ರಕರಣದಿಂದ ಸೂರಜ್​ ಅವರನ್ನು ಕೈಬಿಡುವಂತೆ ಆಗ್ರಹಿಸಿದ್ದರು.

ಇನ್ನು, ತಪ್ಪು ಮಾಡಿದವರೂ ಎಷ್ಟೇ ಪ್ರಭಾವಿಗಳಾಗಿದ್ರೂ ಅವರಿಗೆ ತಕ್ಕ ಶಿಕ್ಷೆ ಆಗಬೇಕು ಅಂತ ಉಪಮುಖ್ಯಮಂತ್ರಿ ಅಶ್ವಥ್​ ನಾರಾಯಣ ಗೌಡ ಹೇಳಿದ್ದರು. ಇದಕ್ಕೆ ಇಂಬುಕೊಡುವಂತೆ ಜೆಡಿಎಸ್ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾದ ವಿಡಿಯೋ ಈಟಿವಿ ಭಾರತಕ್ಕೆ ಎಕ್ಸ್ ಕ್ಲೂಸಿವ್ ವಿಡಿಯೋ ದೊರಕಿದ್ದು, ಹಲ್ಲೆಗೊಳಗಾದ ಮಧು ತನ್ನ ನೋವನ್ನು ತೋಡಿಕೊಂಡಿದ್ದಾನೆ.

ಕಳೆದ 30-40 ವರ್ಷಗಳಿಂದ ನಾವು ಜೆಡಿಎಸ್​ನಲ್ಲಿ ನಿಯತ್ತಿನ ನಾಯಿಯಂತೆ ಕೆಲಸ ಮಾಡಿದ್ದೇವೆ. ಆದ್ರೆ ಈಗ ಪಕ್ಷ ತೊರೆದು ಬೇರೆ ಪಕ್ಷಕ್ಕೆ ಹೋದ ಹಿನ್ನೆಲೆಯಲ್ಲಿ ನಮ್ಮ ಮೇಲೆ ಹಗೆ ಸಾಧಿಸಿ ರೌಡಿಗಳನ್ನು ಬಿಟ್ಟು ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಇದು ಹೆಚ್​ ಡಿ ರೇವಣ್ಣ ಅವರ ಕುಟುಂಬಕ್ಕೆ ಶೋಭೆ ತರುವಂತಹ ಕೆಲಸವಲ್ಲ. ಅಷ್ಟಕ್ಕೂ ನಿಮ್ಮ ನಂಬಿ ಹಳ್ಳಿಯಲ್ಲಿ ಚುನಾವಣೆಯ ನಡೆಯುತ್ತಿಲ್ಲ. ಆದರೂ ಇಂತಹ ಕೆಳಮಟ್ಟದ ಕೃತ್ಯಕ್ಕೆ ಕೈ ಹಾಕಿರುವುದು ನಾಚಿಕೆಗೇಡಿನ ಕೆಲಸ ಎಂದು ಗಾಯಾಳು ಮಧು ಹರಿಹಾಯ್ದಿದ್ದಾರೆ.

ಅವರಿಗೆ ನಿಜವಾಗಿಯೂ ತಾಕತ್ತಿದ್ದರೆ ನಮ್ಮನ್ನು ಕೊಲೆಮಾಡುವ ಉದ್ದೇಶವಿದ್ದರೆ, ನೇರವಾಗಿ ನನ್ನ ಕೊಲೆ ಮಾಡಲಿ ಎಂದು ಸವಾಲು ಹಾಕಿದ್ದಾರೆ ಮಧು...

Intro:EXCLUSIVE VIDEO

HASSAN: ಕೆ. ಆರ್. ಪೇಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ಬಂದಿದ್ದ ಬೆಂಗಳೂರಿನ ಕಾರ್ಪೊರೇಟರ್ ಆನಂದ್ ಹೊಸೂರು, ಮತ್ತು ಅವರ ಸ್ನೇಹಿತರಾದ ಮಧು, ನವೀನ್ ಸಂತೋಷ್ ಗಿರೀಶ್ ಮೇಲೆ ಮಾಜಿ ಸಚಿವ ಎಚ್ ಡಿ ರೇವಣ್ಣ ಪುತ್ರ ಸೂರಜ್ ರೇವಣ್ಣ ಮತ್ತು ಅವರ ಶಿಷ್ಯರಾದ ಜೆಡಿಎಸ್ ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಇನ್ನು ಈ ಬಗ್ಗೆ ನನ್ನ ಮಗ ಸ್ಥಳದಲ್ಲೇ ಇರಲಿಲ್ಲ ಅಂತ ರೇವಣ್ಣ ಪತ್ರಿಕಾಗೋಷ್ಠಿಯ ಮುಖಾಂತರ ಹೇಳಿಕೆ ನೀಡುವ ಮೂಲಕ ನನ್ನ ಮಗನನ್ನ ಕೈಬಿಡುವಂತೆ ಆಗ್ರಹ ಮಾಡಿದರು.

ಇನ್ನು ಕಾನೂನನ್ನು ಉಲ್ಲಂಘಿಸಿ ಯಾರೇ ತಪ್ಪು ಮಾಡಿದರೂ ಅವರಿಗೆ ತಕ್ಕ ಶಿಕ್ಷೆ ಆಗಬೇಕು ಅಂತ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ ಗೌಡ ಕೂಡ ಆಗ್ರಹ ಮಾಡಿದರು

ಇದಕ್ಕೆ ಇಂಬುಕೊಡುವಂತೆ ಜೆಡಿಎಸ್ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬುದಕ್ಕೆ ಈಟಿವಿ ಭಾರತಕ್ಕೆ ಎಕ್ಸ್ ಕ್ಲೂಸಿವ್ ವಿಡಿಯೋ ದೊರಕಿದ್ದು, ಹಲ್ಲೆಗೊಳಗಾದ ಮಧು ತನ್ನ ನೋವನ್ನು ಹಂಚಿಕೊಂಡಿದ್ದಾನೆ.

ಕಳೆದ ಮೂವತ್ತು ನಲವತ್ತು ವರ್ಷಗಳಿಂದ ನಾವು ಜೆಡಿಎಸ್ ನಲ್ಲಿ ನಿಯತ್ತಿನ ನಾಯಿ ಅಂತ ಕೆಲಸ ಮಾಡಿದ್ದೇವೆ. ಆದರೆ ಈಗ ಪಕ್ಷ ತೊರೆದು ಬೇರೆ ಪಕ್ಷಕ್ಕೆ ಹೋದ ಹಿನ್ನೆಲೆಯಲ್ಲಿ ನಮ್ಮ ಮೇಲೆ ಹಗೆ ಸಾಧಿಸಿ ರೌಡಿಗಳನ್ನು ಬಿಟ್ಟು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದು ಅವರ ಕುಟುಂಬಕ್ಕೆ ಶೋಭೆ ತರುವಂತಹ ಕೆಲಸವಲ್ಲ. ಅಷ್ಟಕ್ಕೂ ನಿಮ್ಮ ನಂಬಿ ಹಳ್ಳಿಯಲ್ಲಿ ಚುನಾವಣೆಯ ನಡೆಯುತ್ತಿಲ್ಲ ಆದರೂ ಇಂತಹ ಕೆಳಮಟ್ಟದ ಕೃತ್ಯಕ್ಕೆ ಕೈ ಹಾಕಿರುವುದು ನಾಚಿಕೆಗೇಡಿನ ಕೆಲಸ.

ಅವರಿಗೆ ನಿಜವಾಗಿಯೂ ತಾಕತ್ತಿದ್ದರೆ ನಮ್ಮನ್ನು ಕೊಲೆಮಾಡುವ ಉದ್ದೇಶವಿದ್ದರೆ, ನೇರವಾಗಿ ನನ್ನ ಕೊಲೆ ಮಾಡಲಿ. ಅದನ್ನು ಬಿಟ್ಟು ರೌಡಿಗಳನ್ನು ಕಳುಹಿಸಿ ನಮ್ಮ ಮೇಲೆ ಹಲ್ಲೆ ಮಾಡಿಸುವುದು ರೇವಣ್ಣನವರಿಗೆ ಮತ್ತು ಅವರ ಸ್ಥಾನಕ್ಕೆ ಗೌರವ ತರುವಂತಹ ಕೆಲಸವಲ್ಲ ಅಂತ ಹೇಳಿಕೆ ನೀಡಿದ್ದಾನೆ

Body:7203289

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.