ಸಕಲೇಶಪುರ: ಆಶಾ ಕಾರ್ಯಕರ್ತೆಯರ ನಿರಂತರ ಶ್ರಮದಿಂದಾಗಿ ಕೋವಿಡ್-19 ಹರಡದಿರಲು ಸಹಾಯಕಾರಿ ಆಗಿದೆ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್ ಹಾಗೂ ಜ್ಯೂಸ್ ವಿತರಿಸಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರು ಕಳೆದ 3 ತಿಂಗಳಿಂದ ಕೋವಿಡ್- 19 ತಡೆಗಟ್ಟಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ನಾವು ದೇವರ ರೂಪದಲ್ಲಿ ಆಶಾ ಕಾರ್ಯಕರ್ತೆಯರನ್ನು ನೋಡಬೇಕಾಗಿದೆ. ಆಶಾ ಕಾರ್ಯಕರ್ತೆಯರ ಸೇವೆಯನ್ನು ಗುರುತಿಸಿ ರೆಡ್ ಕ್ರಾಸ್ ಸಂಸ್ಥೆಯು ಮಾಸ್ಕ್ ಹಾಗೂ ಜ್ಯೂಸ್ ನೀಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ತಾ.ಪಂ. ಇ.ಓ ಹರೀಶ್, ತಾ. ವೈದ್ಯಾಧಿಕಾರಿ ಮಹೇಶ್, ತಾ.ಪಂ. ಸದಸ್ಯ ಯಡೇಹಳ್ಳಿ ಮಂಜುನಾಥ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳಾದ ಶಾರದಾ ಗುರುಮೂರ್ತಿ, ರೇಖಾ ಸುರೇಶ, ಹರೀಶ್ ಆಚಾರ್ ಮತ್ತಿತರರು ಹಾಜರಿದ್ದರು.