ಹಾಸನ: ಹಳೇ ರೌಡಿಯನ್ನು ಅಪಹಾಸ್ಯ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ಬಾಲಕನೋರ್ವನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ದಂಪತಿ ಸೇರಿ 9 ಮಂದಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.
ಜು.09 ರಂದು ನಗರದ ಭಾಗ್ಯ ಎಂಬ ಮಹಿಳೆಯ ಮಗ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸ್ನೇಹಿತರ ಜೊತೆ ಹೊರಗೆ ಹೋಗಿದ್ದು, ಮನೆಗೆ ವಾಪಸ್ ಬಂದಿರಲಿಲ್ಲ. ಈ ಬಗ್ಗೆ ದೂರು ನೀಡಲಾಗಿತ್ತು. ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿದಾಗ ಇದು ಕೊಲೆ ಎಂದು ದೃಢಪಟ್ಟಿತ್ತು. ಮೊಬೈಲ್ ಆಧಾರದ ಮೇಲೆ ಈ ಸಂಬಂಧ ರಾಕಿ ಮತ್ತು ಪತ್ನಿ ಶೃಂಗ ಎಂಬುವರನ್ನು ವಿಚರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣ ಬಯಲಾಗಿದೆ.
ಈ ಸಂಬಂಧ ರಾಕಿ, ಆತನ ಪತ್ನಿ ಶೃಂಗ ಸೇರಿ 9 ಮಂದಿಯನ್ನು ಬಂಧಿಸಲಾಗಿದೆ. ಕೊಲೆಗೂ ಮುನ್ನ ಶೃಂಗ ವಿನಯ್ ತಾಯಿಗೆ ಕರೆ ಮಾಡಿ ನಿನ್ನ ಮಗನಿಗೆ ಸರಿಯಾಗಿ ಬುದ್ಧಿ ಕಲಿಸುತ್ತೇವೆ. ಹೆಚ್ಚು ಮಾತನಾಡಿದರೆ ಸಾಯಿಸುತ್ತೇವೆ ಎಂದು ಹೇಳಿದ್ದನಂತೆ.
ತನಿಖೆ ಕೈಗೊಂಡ ಪೊಲೀಸರು ಮೊದಲು ಕೊಲೆಯಾದ ವಿನಯ್ ಸ್ನೇಹಿತರುಗಳಾದ ರಕ್ಷಿತ್ ಮತ್ತು ಧನುಷ್ ಎಂಬುವರನ್ನು ವಿಚಾರಣೆಗೆ ಒಳಪಡಿಸಿದಾಗ, ಕೊಲೆ ಪ್ರಕರಣ ಬಯಲಿಗೆ ಬಂದಿದೆ. ಈ ಸಂಬಂಧ ಆರೋಪಿಗಳಾದ ರಾಕಿ ಅಲಿಯಾಸ್ ರಾಕೇಶ್, ದಿನೇಶ್, ನಾಗೇಶ್, ರಕ್ಷಿತ್, ರಾಕಿ ಪತ್ನಿ ಶೃಂಗ, ಸಂತೋಷ್ ಆಟೋ ಚಾಲಕ ಮಂಜು ಬಂಧಿತ ಆರೋಪಿಗಳು ಎಂದು ವಿವರಿಸಿದರು.
ಇದನ್ನೂ ಓದಿ : ಅಕ್ರಮ ಗಣಿಗಾರಿಕೆ ತಡೆಯಲು ಹೋದ ಡಿಎಸ್ಪಿ ಮೇಲೆ ಟ್ರಕ್ ಹರಿಸಿ ಕೊಲೆ.. ಹರಿಯಾಣದಲ್ಲಿ ಭೀಕರ ಘಟನೆ