ETV Bharat / state

ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ಜೆಡಿಎಸ್​ ಶಾಸಕ ಶಿಷ್ಯನ ವಿಡಿಯೋ ವೈರಲ್​ - ಹಾಸನ ಸುದ್ದಿ

ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರ ಶಿಷ್ಯ ಸಮೀವುಲ್ಲಾ ಸಾರ್ವಜನಿಕ ಕಾರ್ಯಕ್ರಮದಲ್ಲಿ ವ್ಯಕ್ತಿಯೋರ್ವನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು,ನೆಟ್ಟಿಗರು ಮಾಜಿ ನಗರಸಭಾ ಅಧ್ಯಕ್ಷನ ವಿರುದ್ದ ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ.

arasikere-municipality-former-presiden-sameevullah-obscene-noise
ಅಂದು ಶಾಸಕ ಶಿವಲಿಂಗೇಗೌಡ...ಇಂದು ಅವರ ಶಿಷ್ಯ...ಏನ್​ ಸ್ವಾಮಿ ಇದು?
author img

By

Published : Jan 7, 2020, 5:36 AM IST

ಹಾಸನ: ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರ ಶಿಷ್ಯ/ ನಗರ ಸಭೆಯ ಮಾಜಿ ಅಧ್ಯಕ್ಷ ಸಮೀವುಲ್ಲಾ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ವ್ಯಕ್ತಿಯೋರ್ವನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಮಾಜಿ ನಗರಸಭಾ ಅಧ್ಯಕ್ಷರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಂಸಾರ್ವಜನಿಕ ಕಾರ್ಯಕ್ರಮದಲ್ಲಿ ಜೆಡಿಎಸ್​ ಶಾಸಕ ಶಿವಲಿಂಗೇಗೌಡ ಶಿಷ್ಯ ಸಮೀವುಲ್ಲಾ ವ್ಯಕ್ತಿಯನ್ನು ಅವಾಚ್ಯ ಶಬ್ದಗಳಿಂದ ನಿಂದನೆ

ಶಾಸಕ ಶಿವಲಿಂಗೇಗೌಡ ಗದಗದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನಾ ಮಾಹಿತಿಯನ್ನು ನೆರೆದಿದ್ದ ಫಲಾನುಭವಿಗಳಿಗೆ ವಿವರಿಸುತ್ತಿದ್ದರು. ಇದೇ ವೇಳೆ ಶಂಕರ್ ಎಂಬಾತ, 'ಸರ್, ಬ್ಯಾಂಕ್​ನವರು ಆರ್ಥಿಕ ಸ್ಥಿತಿ ಸದೃಢವಾಗಿದ್ದ ಉಳ್ಳವರಿಗೆ ಮಾತ್ರ ಸಾಲ ಕೊಡುತ್ತಾರೆ. ಹೊರತು ಬಡವರಿಗೆ ಕೊಡಲ್ಲ. ಯಾಕೆ ಎಂಬುದನ್ನು ಬ್ಯಾಂಕ್​ನ ಅಧಿಕಾರಿಗಳಿಂದಲೇ ಸ್ಪಷ್ಟಪಡಿಸಿ' ಎಂದು ಆಗ್ರಹಿಸಿದ್ದರು.

ಇದಕ್ಕೆ ವೇದಿಕೆಯ ಮೇಲೆ ಕೂತಿದ್ದ ಅರಸೀಕೆರೆ ನಗರಸಭೆಯ ಮಾಜಿ ಅಧ್ಯಕ್ಷ ಸಮೀವುಲ್ಲಾ ಅವರು ಸಿಟ್ಟಾಗಿ, 'ಅದನ್ನೆಲ್ಲಾ ಕೇಳೋಕೆ ನೀನ್ ಯಾವನೋ? ನೀನೇನು ಪ್ರಧಾನಮಂತ್ರಿ ಯೋಜನಾ ಫಲಾನುಭವಿನಾ? ನಿನ್ನನ್ನು ಇಲ್ಲಿಗೆ ಬರೋದಿಕ್ಕೆ ಯಾವನೋ ಹೇಳಿದ್ದು? ಎಂಬ ಶಬ್ದಗಳು ವಿಡಿಯೋದಲ್ಲಿ ಸೆರೆಯಾಗಿವೆ.

ಕಳೆದ ವಾರವಷ್ಟೇ ಕಾಂಗ್ರೆಸ್​ನವರು ಶಾಸಕ ಶಿವಲಿಂಗೇಗೌಡರಿಗೆ ಪ್ರಶ್ನೆ ಕೇಳಿದ್ದಕ್ಕೆ ಅವ್ಯಾಚ ಶಬ್ದ ಬಳಸಿ, ಬೈದು ಸಾಮಾನ್ಯ ಸಭೆಯಿಂದ ಹೊರ ನಡೆದಿದ್ದರು. ಈಗ ಅವರದ್ದೇ ಸಾಲಿಗೆ ಅವರ ಶಿಷ್ಯ ಸೇರ್ಪಡೆಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರು ಮಾಜಿ ನಗರಸಭಾ ಅಧ್ಯಕ್ಷರನ್ನು ಸಾಮಾಜಿಕ ಜಾಲತಾಣದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

Intro:ಹಾಸನ: ಅದ್ಯಾಕೊ ಗೊತ್ತಿಲ್ಲ ಕಣ್ರೀ. . ಜೆಡಿಎಸ್ ಪಕ್ಷದವರು ಆಡಿದ್ದೆ ಆಟ. ಹೇಳಿದ್ದೆ ಮಾತು ಅನ್ನೋ ಹಾಗೇ ಅವರು ಆಡಿದ ಮಾತನ್ನ ಯಾರಾದರೂ ಪ್ರಶ್ನೆ ಮಾಡಿದ್ರೆ ಎಗರಿ ಎಗರಿ ಬೀಳ್ತಾರೆ. ಕಳೆದವಾರವಷ್ಟೇ ಕಾಂಗ್ರೆಸ್ ನವರು ಅರಸೀಕೆರೆ ಶಾಸಕ ಶಿವಲಿಂಗೇಗೌಡರಿಗೆ ಪ್ರಶ್ನೆ ಕೇಳಿದ್ದಕ್ಕೆ ಅವ್ಯಾಚ ಶಬ್ದ ಬಳಸಿ ಬೈದು ಸಾಮಾನ್ಯ ಸಭೆಯಿಂದ ಹೊರ ನಡೆದಿದ್ರು. ಈಗ ಅವರದ್ದೇ ಸಾಲಿಗೆ ಅವರ ಶಿಷ್ಯ ಸೇರ್ಪಡೆಯಾಗಿದ್ದಾರೆ. ಆಗಿದ್ರೆ ಆ ಶಿಷ್ಯ ಏನ್ ಮಾಡ್ದಾ ಅಂತೀರಾ. . . ? ಹಾಗಿದ್ರೆ ಈ ವಿಡಿಯೋ ನೋಡಿ. . ನಿಮಗೆ ಗೊತ್ತಾಗುತ್ತೆ. . .

ಹೌದು ಇಂತಹದೊಂದು ಘಟನೆಗೆ ಸಾಕ್ಷಿಯಾಗಿದ್ದು ಮತ್ತೆ ಅದೇ ಅರಸೀಕೆರೆ. ಪ್ರಧಾನಮಂತ್ರಿ ಅವಾಸ್ ಯೋಜನೆಯ ಮನೆ ವಿತರಣಾ ಪೂರ್ವಭಾವಿ ಸಮಾರಂಭದ ಕಾರ್ಯಕ್ರಮದಲ್ಲಿ ವ್ಯಕ್ತಿಯೋರ್ವನಿಗೆ ಹಿಗ್ಗಾಮುಗ್ಗಾ ಬೈತಿರೋ ಇವರ ಹೆಸರು ಸಮೀವುಲ್ಲಾ ಅಂತ. ಅರಸೀಕೆರೆ ನಗರಸಭೆಯ ಮಾಜಿ ಅಧ್ಯಕ್ಷ. ಶಾಸಕ ಶಿವಲಿಂಗೇಗೌಡ ಯೋಜನೆಯ ಸಂಪೂರ್ಣ ಮಾಹಿತಿಯನ್ನು ನೆರೆದಿದ್ದ ಫಲಾನುಭವಿಗಳಿಗೆ ವಿವರಿಸುತ್ತಿದ್ರು. ಈ ಸಂದರ್ಭದಲ್ಲಿ ಶಂಕರ್ ಎಂಬ ವ್ಯಕ್ತಿಯೋರ್ವ ಸರ್ ಬ್ಯಾಂಕ್ ನವರು ಆರ್ಥಿಕ ಸ್ಥಿತಿ ಉಳ್ಳವರಿಗೆ ಮಾತ್ರ ಲೋನ್ ಕೊಡ್ತಾರೆ ಹೊರತು ಬಡವರಿಗೆ ಕೊಡಲ್ಲ ಅಂತ ವೇದಿಕೆ ಗಮನಕ್ಕೆ ತಂದು, ಅದನ್ನ ಬ್ಯಾಂಕ್ ನ ಅಧಿಕಾರಿಗಳಿಂದಲೇ ಸ್ಪಷ್ಟಪಡಿಸಿ ಎನ್ನುತ್ತಿದ್ದಂತೆ, ವೇದಿಕೆಯ ಮೇಲೆ ಕೂತಿದ್ದ ಸಮೀವುಲ್ಲಾ ಸಿಟ್ಟಾಗಿ ಬಂದು ಅದನ್ನೆಲ್ಲಾ ಕೇಳೋಕೆ ನೀನ್ ಯಾವನೋ. . ? ನೀನೇನು ಪ್ರಧಾನಮಂತ್ರಿ ಯೋಜನೆಯ ಫಲಾನುಭವಿನಾ. . ? ನಿನ್ನನ್ನ ಇಲ್ಲಿಗೆ ಬರೋದಿಕ್ಕೆ ಯಾವನೋ ಹೇಳಿದ್ದು. . ? ಬೋಳಿಮಗನೆ ಮೈಕ್ ಕಿತ್ತು ಹೊರಗಡೆ ಕಳಿಸಿ ಇವನನ್ನ ಅಂತಹ ಯದ್ವಾ-ತದ್ವಾ ವೇದಿಕೆಯ ಮೇಲೆಯೇ ಸಾರ್ವಜನಿಕರ ಮುಂದೆ ಬೈಯೋ ಮೂಲಕ ಮತ್ತೆ ಜೆಡಿಎಸ್ ಪಕ್ಷದ ಮಾಜಿ ನಗರಸಭೆ ಅಧ್ಯಕ್ಷ ತನ್ನ ಗುರು ಶಿವಲಿಂಗೇಗೌಡರ ಹಾದಿಯನ್ನು ಹಿಡಿದಿರೋದು ನಾಚಿಕೆಗೇಡಿನ ಕೆಲಸವಷ್ಟೇ ಅಲ್ಲದೆ ಪಕ್ಷಕ್ಕೆ ಕಳಂಕ ಪ್ರಾಯವಾಗಿದ್ದಾರೆ.

ಇನ್ನು ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರು ಮಾಜಿ ನಗರಸಭಾ ಅಧ್ಯಕ್ಷನ ವಿರುದ್ದ ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ. ಇನ್ನು ಕಳೆದ ವಾರವಷ್ಟೇ ಅರಕಲಗೂಡು ಶಾಸಕ ಇದೇ ರೀತಿ ತನ್ನ ಕ್ಷೇತ್ರದ ಮತದಾರರನ್ನ ಬೈದು ನಿಂದನೆಗೆ ಗುರಿಯಾಗಿದ್ರು.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

Body:7203289

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.