ETV Bharat / state

ಅರಕಲಗೂಡು: ಜಿಲ್ಲಾ ರೈತ ಸಂಘದ ವತಿಯಿಂದ ವಿನೂತನವಾಗಿ ಪ್ರತಿಭಟನೆ - ಹಾಸನ ಸುದ್ದಿ

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದ ತಂಬಾಕು ಮಾರುಕಟ್ಟೆ ಆವರಣದಲ್ಲಿ ಹಾಸನ ಜಿಲ್ಲಾ ರೈತ ಸಂಘದ ವತಿಯಿಂದ ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು..

ಜಿಲ್ಲಾ ರೈತ ಸಂಘದ ವತಿಯಿಂದ ವಿನೂತನವಾಗಿ ಪ್ರತಿಭಟನೆ

author img

By

Published : Nov 3, 2020, 7:26 PM IST

ಅರಕಲಗೂಡು: ತಂಬಾಕು ಬೆಳೆ ಕುಸಿತಗೊಂಡ ಹಿನ್ನೆಲೆ ಕೆಳದರ್ಜೆ ಹೊಗೆಸೊಪ್ಪು ಖರೀದಿ ಮಾಡುತ್ತಿರುವುದನ್ನು ವಿರೋಧಿಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ರೈತರು ತಲೆಯ ಮೇಲೆ ಚಪ್ಪಡಿಕಲ್ಲು ಇಟ್ಟುಕೊಂಡು ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ರು.

ಜಿಲ್ಲಾ ರೈತ ಸಂಘದ ವತಿಯಿಂದ ವಿನೂತನ ಪ್ರತಿಭಟನೆ

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದ ತಂಬಾಕು ಮಾರುಕಟ್ಟೆ ಆವರಣದಲ್ಲಿ ಹಾಸನ ಜಿಲ್ಲಾ ರೈತ ಸಂಘದ ವತಿಯಿಂದ ಇಂತಹ ವಿನೂತನ ಪ್ರತಿಭಟನೆ ಮಾಡಲಾಯಿತು. ಬೆಂಬಲ ಕುಸಿತ ಮತ್ತು ಕೆಳದರ್ಜೆಯ ತಂಬಾಕನ್ನು ಖರೀದಿ ಮಾಡಬೇಕು ಎಂದು ಒತ್ತಾಯಿಸಿ ರೈತರು ಚಪ್ಪಡಿ ಕಲ್ಲುಗಳನ್ನು ತಲೆಯಮೇಲೆ ಇಟ್ಟುಕೊಂಡು ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ರು.

ಈ ವೇಳೆ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಸಿಬಳ್ಳಿ ಯೋಗೇಶ್, ಕೋವಿಡ್-19ರ ನೆಪವನ್ನೊಡ್ಡಿ, ಕಡಿಮೆ ದರ್ಜೆಯ ಹೊಗೆಸೊಪ್ಪನ್ನು ಖರೀದಿಸಿದೇ ಕೇವಲ ಉತ್ತಮ ದರ್ಜೆಯ ಹೊಗೆಸೊಪ್ಪನ್ನು ಮಾತ್ರ ಖರೀದಿ ಮಾಡುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗದ ತಂಬಾಕು ಬೆಳೆದ ರೈತರಿಗೆ ಅನ್ಯಾಯ ಎಸಗಿದಂತೆ ಆಗುತ್ತದೆ. ತಂಬಾಕು ಮಂಡಳಿಯವರು ಪ್ರಾರಂಭದ ದಿನದಂದು ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ರೈತರ ಕಣ್ಣೊರೆಸಲು ಪ್ರಥಮ ದರ್ಜೆಯ ತಂಬಾಕಿಗೆ 175 ನೀಡುತ್ತೇವೆಂದು ಹೇಳಿ, ರೈತರಿಗೆ ಅನ್ಯಾಯ ಮಾಡಿದರು.

ಜಿಲ್ಲಾ ರೈತ ಸಂಘದ ವತಿಯಿಂದ ವಿನೂತನವಾಗಿ ಪ್ರತಿಭಟನೆ
ಜಿಲ್ಲಾ ರೈತ ಸಂಘದ ವತಿಯಿಂದ ವಿನೂತನವಾಗಿ ಪ್ರತಿಭಟನೆ

ಇನ್ನೂ ತಂಬಾಕು ಬೆಳೆದ ರೈತರಿಗೆ ಜಿಎಸ್ಟಿ ಹಾಕುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಎಚ್ ಎಸ್ ಶಂಕರ್, ಚುನಾವಣಾ ಸಂದರ್ಭದಲ್ಲಿ ಬಣ್ಣದ ಮಾತುಗಳನ್ನಾಡುವ ಜನಪ್ರತಿನಿಗಳು ಈಗ ರೈತರ ಸಮಸ್ಯೆಗಳನ್ನು ಈಡೇರಿಸಲು ಮುಂದಾಗುತ್ತಿಲ್ಲ.

ರಾಜಕಾರಣಿಗಳ ನಾಟಕಕ್ಕೆ ಮರುಳಾಗಿ ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆಂಧ್ರಪ್ರದೇಶ ಸರ್ಕಾರ ರೈತರ ಸಂಕಷ್ಟದಲ್ಲಿದ್ದಾಗ ಕೆಲವು ಕಂಪನಿಗಳ ಜೊತೆಗೂಡಿ ಕೆಳದರ್ಜೆಯ ಹೊಗೆಸೊಪ್ಪನ್ನು300 ಕೋಟಿ ರೂ. ಆವರ್ತ ನಿಧಿಯಿಂದ ಖರೀದಿ ಮಾಡಿ ರೈತರ ಪರ ನಿಂತಿತ್ತು.

ಆದರೆ, ನಮ್ಮ ರಾಜ್ಯ ಸರ್ಕಾರ ರೈತರಿಗೆ ಮರಣ ಶಾಸನವಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಭಾಗದ ತಂಬಾಕು ಬೆಳೆಗಳನ್ನು ಸರ್ಕಾರ ಖರೀದಿಸಲು ಮುಂದಾಗದಿದ್ದರೇ, ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.