ಹಾಸನ: ಅಂಗನವಾಡಿ ಕೇಂದ್ರವನ್ನು ಮೇಲ್ದರ್ಜೆಗೇರಿಸಿ, ಸೇವೆ ಖಾಯಂ ಮಾಡಿ ಹೆಚ್ಚುವರಿ ವೇತನ ಕೊಡುವಂತೆ ಆಗ್ರಹಿಸಿ ನಗರದ ಹೌಸಿಂಗ್ ಬೋರ್ಡಿನಲ್ಲಿರುವ ಸಿಡಿಪಿಓ ಕಛೇರಿ ಮುಂದೆ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನೇರ ಸಂದರ್ಶನದ ಮೂಲಕ ಮೇಲ್ವಿಚಾರಕರ ಹುದ್ದೆಯನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಬೇಕು. ಸ್ಥಳೀಯವಾಗಿ ಸಾಕಷ್ಟು ಸಮಸ್ಯೆಗಳಿವೆ. ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಗೌರವ ಧನ ನೀಡಬೇಕು. ಆಹಾರ ಪದಾರ್ಥ ತಡವಾಗಿ ಬರುತ್ತಿರುವುದರಿಂದ ಊರಿನಲ್ಲಿ ಸಮಸ್ಯೆ ಎದುರಿಸಬೇಕಾಗಿದೆ ಎಂದರು.
ಕೊರೊನಾ ವಾರಿಯರ್‌ಗಳಾಗಿ ಕೆಲಸ ಮಾಡುತ್ತಿರುವ ಕಾರಣ ಪಿಪಿಇ ಕಿಟ್ ಹಾಗೂ ಇತರೆ ಸುರಕ್ಷಾ ಸಾಮಗ್ರಿ, ಪ್ರೋತ್ಸಾಹ ಧನ ನೀಡಬೇಕು. ಇಲ್ಲವಾದರೆ ಆಗಸ್ಟ್‌ನಿಂದ ಅಸಹಕಾರ ಚಳುವಳಿ ನಡೆಸಲಾಗುವುದು ಎಂದು ಅಂಗನವಾಡಿ ನೌಕರರ ತಾಲ್ಲೂಕು ಕಾರ್ಯದರ್ಶಿ ಜಯಂತಿ ಎಚ್ಚರಿಸಿದ್ದಾರೆ.