ಹಾಸನ: ಅಪರಿಚಿತ ಮಹಿಳೆಯೊಬ್ಬರು ರೈಲಿಗೆ ಸಿಲುಕಿ ಅನುಮಾನಸ್ಪದವಾಗಿ ಸಾವಿಗೀಡಾಗಿರುವ ಘಟನೆ ಹಾಸನದ ನೂತನ ನಿಲ್ದಾಣದ ರೈಲ್ವೆ ಗೇಟ್ ಸಮೀಪ ನಡೆದಿದೆ.
ರೈಲಿನ ಕೆಳಭಾಗಕ್ಕೆ ಸಿಲುಕಿದ್ದ ಕಾರಣ ಅಂಗಾಗಗಳು ತುಂಡಾಗಿಲ್ಲ. ಮಹಿಳೆಯ ಶವವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದೊಂದು ಕೊಲೆ ಅನಿಸುತ್ತದೆ. ಕೊಲೆ ಮಾಡಿದ ಬಳಿಕ ಆಕೆಯನ್ನು ರೈಲ್ವೆ ಹಳಿಗಳ ಮೇಲೆ ಎಸೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.