ETV Bharat / state

ಹಾಸನದಲ್ಲಿ ಅಮಾನವೀಯ ಘಟನೆ: ಶುಂಠಿ ಕೆಲಸಕ್ಕೆ ಕರೆತಂದಿದ್ದ ಕಾರ್ಮಿಕರನ್ನು ಕೂಡಿ ಹಾಕಿದ ಮಾಲೀಕ - ತಲೆಮರೆಸಿಕೊಂಡಿರುವ ಜಮೀನು ಮಾಲೀಕ ಮುನೇಶ್​​

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಳ್ಳಿ ಗ್ರಾಮದಲ್ಲಿ ಮಾಲೀಕನೊಬ್ಬ ಶುಂಠಿ ಕೆಲಸಕ್ಕೆ ಕರೆತಂದಿದ್ದ ಕಾರ್ಮಿಕರನ್ನು ಶೆಡ್​ನೊಳಗೆ ಕೂಡಿ ಹಾಕಿದ ಅಮಾನವೀಯ ಘಟನೆ ನಡೆದಿದೆ. ಅರಸೀಕೆರೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ, ಕಾರ್ಮಿಕರನ್ನು ಬಂಧಮುಕ್ತ ಮಾಡಿದ್ದಾರೆ.

owner locked a group of workers in a shed
ಕಾರ್ಮಿಕರನ್ನು ಕೂಡಿ ಹಾಕಿದ ಮಾಲೀಕ
author img

By

Published : Apr 5, 2022, 3:08 PM IST

ಹಾಸನ: ಶುಂಠಿ ಕೆಲಸಕ್ಕೆ ಕರೆತಂದಿದ್ದ ಕಾರ್ಮಿಕರನ್ನು ಮಾಲೀಕ ಕೂಡಿ ಹಾಕಿದ್ದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದೆ. ಈ ಸಂಬಂಧ ಅರಸೀಕೆರೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ, ಕಾರ್ಮಿಕರನ್ನು ಬಂಧಮುಕ್ತ ಮಾಡಿದ್ದಾರೆ.

ಶುಂಠಿ ಕೆಲಸಕ್ಕೆ ಕರೆತಂದಿದ್ದ ಕಾರ್ಮಿಕರನ್ನು ಕೂಡಿ ಹಾಕಿದ ಮಾಲೀಕ

ಶುಂಠಿ ಕೆಲಸಕ್ಕೆ ಕರೆತಂದಿದ್ದ ಕಾರ್ಮಿಕರನ್ನು ಒಂದು ಶೆಡ್​​ನೊಳಗೆ ಕೂಡಿಹಾಕಿ ಅಲ್ಲಿಯೇ ಊಟ ತಿಂಡಿ ನೀಡುತ್ತಿದ್ದರು ಎನ್ನಲಾಗ್ತಿದೆ. ಸುಮಾರು 55 ಮಂದಿ ಕಾರ್ಮಿಕರನ್ನ ಕೂಡಿ ಹಾಕಲಾಗಿತ್ತು. ಇದರಲ್ಲಿ 50 ಪುರುಷ ಕಾರ್ಮಿಕರು ಹಾಗೂ ಹತ್ತು ಮಂದಿ ಮಹಿಳೆಯರು ಇದ್ದರು. ಸದ್ಯ ಪೊಲೀಸರು ಇವರನ್ನೆಲ್ಲಾ ಬಂಧಮುಕ್ತಗೊಳಿಸಿದ್ದಾರೆ. ಜಮೀನು ಮಾಲೀಕ ಮುನೇಶ್ ತಲೆಮರೆಸಿಕೊಂಡಿದ್ದಾರೆ. ಈ ಸಂಬಂಧ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಇದನ್ನೂ ಓದಿ: ಇಡೀ ಗ್ರಾಮವನ್ನೇ ಶಿಕ್ಷಣ ಕೇಂದ್ರವನ್ನಾಗಿ ಪರಿವರ್ತಿಸಿದ ಸರ್ಕಾರಿ ಶಿಕ್ಷಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.