ETV Bharat / state

ಸಂಘದ ವಿರುದ್ಧವೇ ಭ್ರಷ್ಟಾಚಾರ ಆರೋಪ: ಏಕಾಂಗಿಯಾಗಿ ಪ್ರತಿಭಟನೆ

author img

By

Published : Nov 13, 2019, 9:43 PM IST

ತಾಲೂಕಿನ ಜಮ್ಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಉದಯಶಂಕರ್ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.

ಸಂಘದ ವಿರುದ್ಧವೇ ಭ್ರಷ್ಟಾಚಾರ ಆರೋಪ: ಪ್ರತಿಭಟನೆ

ಸಕಲೇಶಪುರ: ಸಂಘದ ಆಡಳಿತ ಮಂಡಳಿ ವಿರುದ್ಧವೇ ಉಪಾಧ್ಯಕ್ಷನೊಬ್ಬಗಂಭೀರ ಆರೋಪ ಮಾಡಿ ಏಕಾಂಗಿಯಾಗಿ ಸಂಘದ ಬಾಗಿಲಲ್ಲಿ ಕುಳಿತು ಪ್ರತಿಭಟನೆ ಮಾಡಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.

ಸಂಘದ ವಿರುದ್ಧವೇ ಭ್ರಷ್ಟಾಚಾರ ಆರೋಪ: ಪ್ರತಿಭಟನೆ

ತಾಲೂಕಿನ ಜಮ್ಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಉದಯಶಂಕರ್ ಗಂಭೀರ ಆರೋಪ ಮಾಡಿದ್ದು, ಕೆಲಕಾಲ ಅವರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ. ಪಡಿತರ ಧಾನ್ಯ ವಿತರಣೆಯಲ್ಲಿ ಅಕ್ರಮ ಎಸಗಿರುವುದಲ್ಲದೇ ಪಡಿತರ ನೀಡಿ ಉಳಿದಿರುವ ಚೀಲಗಳನ್ನು ಕೂಡ ಅಧಿಕ ಬೆಲೆಗೆ ಮಾರಾಟ ಮಾಡಿಕೊಂಡು ಅಧ್ಯಕ್ಷ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.

Intro:ಹಾಸನ/ ಸಕಲೇಶಪುರ:
ಸಂಘದ ಆಡಳಿತ ಮಂಡಳಿ ವಿರುದ್ಧವೇ ಉಪಾಧ್ಯಕ್ಷನೋರ್ವ ಗಂಭೀರ ಆರೋಪ ಮಾಡಿ ಏಕಾಂಗಿಯಾಗಿ ಸಂಘದ ಬಾಗಿಲಲ್ಲಿ ಕುಳಿತು ಪ್ರತಿಭಟನೆ ಮಾಡಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಜಮ್ಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಉದಯಶಂಕರ್ ಗಂಭೀರ ಆರೋಪ ಮಾಡಿದ್ದು ಕೆಲಕಾಲ ಅವರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿ ಗಮನಸೆಳೆದರು.

ಪಡಿತರ ಧಾನ್ಯ ವಿತರಣೆಯಲ್ಲಿ ಅಕ್ರಮ ಎಸಗಿರುವದಲ್ಲದೇ ಪಡಿತರ ನೀಡಿ ಉಳಿದಿರುವ ಚೀಲಗಳನ್ನು ಕೂಡ ಅಧಿಕ ಬೆಲೆಗೆ ಮಾರಾಟ ಮಾಡಿಕೊಂಡು ಅಧ್ಯಕ್ಷ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪ ಮಾಡಿದರು.

ಬಡವರಿಗೆ ಸಿಗಬೇಕಾದಂತಹ ಪಡಿತರವನ್ನು ಸರಿಯಾಗಿ ವಿತರಿಸದೇ ಇತರರಿಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಲು ಮುಂದಾದ ವ್ಯಕ್ತಿಗಳಿಗೆ ದೌರ್ಜನ್ಯ ಎಸಗಿ ಹೆದರಿಕೆಯನ್ನು ಕೂಡ ಒಡ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಸಾಕಷ್ಟು ಬಾರಿ ಇವರ ವಿರುದ್ಧ ದೂರು ಸಲ್ಲಿಸಿದ್ದು, ಮೈಸೂರು ವಲಯದ ಮೇಲಾಧಿಕಾರಿಗಳು ಸಂಘಕ್ಕೆ ಆಗಮಿಸಿ ಕಾಟಾಚಾರಕ್ಕೆ ತನಿಖೆ ಮಾಡಿ ಹೋಗಿದ್ದಾರೆ.

ಇದನ್ನು ಬಯಲಿಗೆಳೆಯಲು ಹೋದ ನನ್ನ ಮೇಲೆಯೂ ಕೂಡ ಪುಡಿ ರೌಡಿಗಳನ್ನು ಬಿಟ್ಟು ಪಿಸ್ತೂಲು ತೋರಿಸಿ ಬೆದರಿಕೆ ಹಾಕಿದ್ದು, ಇದರ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ದೂರನ್ನು ಸ್ವೀಕರಿಸದೇ, ನ್ಯಾಯಾಲಯದ ಮೂಲಕ ಹೋರಾಡಿ ಅಂತ ಪೊಲೀಸರು ಕೂಡ ಉಡಾಫೆಯಿಂದ ಉತ್ತರಿಸುತ್ತಾರೆ ಎಂಬ ಗಂಭೀರ ಆರೋಪ ಕೂಡಾ ಇವರದ್ದಾಗಿದೆ.

ಹೀಗಾಗಿ ನನಗೆ ಸೂಕ್ತ ರಕ್ಷಣೆ ನೀಡಬೇಕು ಅಂತ ಉಪಾಧ್ಯಕ್ಷ ಉದಯಶಂಕರ್ ಏಕಾಂಗಿಯಾಗಿ ಧರಣಿ ಮಾಡುವ ಮೂಲಕ ಮಾಧ್ಯಮಗಳ ಮೊರೆ ಹೋಗಿದ್ದಾರೆ.

ನಿಜಕ್ಕೂ ಜಮುನ ಹಳ್ಳಿಯ ಹಾಗೂ ಬಾಳ್ಳುಪೇಟೆಯ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಕ್ರಮವಾಗಿ ದೆಯ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ತನಿಖೆಯ ಮೂಲಕವೇ ಸತ್ಯ ಹೊರಬರಬೇಕಾಗಿದೆ

*ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ*

Body:7203289

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.