ETV Bharat / state

ಬಿಜೆಪಿ ಕಾರ್ಯಕರ್ತರಿಂದ ಜೆಡಿಎಸ್ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ: ಕ್ರಮಕ್ಕೆ ಆಗ್ರಹಿಸಿದ ಶಾಸಕ

Assault on JDS worker: ಜೆಡಿಎಸ್ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಶಾಸಕ ಹೆಚ್ ಪಿ ಸ್ವರೂಪ್ ಆಗ್ರಹಿಸಿದ್ದಾರೆ.

assault
ಬಿಜೆಪಿ ಕಾರ್ಯಕರ್ತರಿಂದ ಜೆಡಿಎಸ್ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ
author img

By ETV Bharat Karnataka Team

Published : Nov 4, 2023, 9:07 AM IST

Updated : Nov 4, 2023, 12:29 PM IST

ಹಲ್ಲೆಗೊಳಗಾದ ಕಾರ್ಯಕರ್ತನ ಭೇಟಿ ಮಾಡಿದ ಶಾಸಕ ಹೆಚ್.ಪಿ. ಸ್ವರೂಪ್

ಹಾಸನ : ಬಿಜೆಪಿ ಕಾರ್ಯಕರ್ತರಿಂದ ಜೆಡಿಎಸ್ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಆಗ್ರಹಿಸಿದ್ದಾರೆ.

ತಾಲೂಕಿನ ಹೊಸೂರು ಗ್ರಾಮದ ನಿವಾಸಿ ಹಾಗೂ ಜೆಡಿಎಸ್ ಕಾರ್ಯಕರ್ತ ಮನು ಎಂಬುವರು ಹಲ್ಲೆಗೊಳಗಾದವರು. ಇದೇ ಗ್ರಾಮದಲ್ಲಿರುವ ಬಿಜೆಪಿ ಕಾರ್ಯಕರ್ತರು ಮೂರು ಬಾರಿ ಹಲ್ಲೆ ನಡೆಸಿದರೂ ಸಹ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಇನ್ನು ಗಾಯಾಳುವನ್ನು ನೋಡಲು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದ ಶಾಸಕ ಹೆಚ್ ಪಿ ಸ್ವರೂಪ್ ಅವರು ಪೊಲೀಸ್ ನಡೆಗೆ ಸಿಡಿಮಿಡಿಗೊಂಡು ಕೂಡಲೇ ಕೇಸ್​ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದ್ರೆ, ಜಾಗ ಬಿಟ್ಟು ಕದಡುವುದಿಲ್ಲ ಎಂದು ಪಟ್ಟು ಹಿಡಿದರು. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಆಗಮಿಸಿದ ಡಿವೈಎಸ್​ಪಿ, ಪೊಲೀಸ್ ಅಧಿಕಾರಿಗಳ ತಂಡ ಶಾಸಕ ಹೆಚ್.ಪಿ ಸ್ವರೂಪ್ ಮನವೊಲಿಸುವಲ್ಲಿ ಯಶಸ್ವಿಯಾದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಹೆಚ್ ಪಿ ಸ್ವರೂಪ್, "ನಮ್ಮ ಪಕ್ಷದ ಕಾರ್ಯಕರ್ತನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದು, ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು. ನಮ್ಮ ಕಾರ್ಯಕರ್ತ ಮನು ಎಂಬುವರ ಮೇಲೆ ಮೂರನೇ ಬಾರಿ ಹಲ್ಲೆ ನಡೆದಿರುವುದು ಖಂಡನೀಯ. ಹಾಸನ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಘರ್ಷಣೆ ನಡೆದಿದ್ದರೂ ಸಬ್ ಇನ್ಸ್​ಪೆಕ್ಟರ್ ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡುಬಂದಿದೆ. ಮುಂದೆ ಏನಾದರೂ ದೊಡ್ಡ ಮಟ್ಟದಲ್ಲಿ ಅನಾಹುತ ಸಂಭವಿಸಿದ್ರೆ ನೇರವಾಗಿ ಪೊಲೀಸ್ ಇಲಾಖೆಯೇ ಕಾರಣವಾಗಬೇಕಾಗುತ್ತದೆ" ಎಂದರು.

ಇದನ್ನೂ ಓದಿ : ರೈತನ ಮೇಲೆ ಹುಲಿ ದಾಳಿ; ಗ್ರಾಮದ ಕೆಲವರಿಂದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ

ಮನು ಮನೆಯಲ್ಲಿ ಪಕ್ಷದ ಹಬ್ಬ ಮಾಡುತ್ತಿರುವಾಗ ಹಲ್ಲೆ ಮಾಡಿ, ಕೊಲೆ ಮಾಡುವ ಯತ್ನ ಮಾಡಿದ್ದಾರೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಡಿವೈಎಸ್​ಪಿ ಸಮಸ್ಯೆ ಬಗೆಹರಿಸಿ ನ್ಯಾಯಕೊಡಿಸಬೇಕು. ತಕ್ಷಣ ತಪ್ಪಿತಸ್ಥರನ್ನು ಬಂಧಿಸಬೇಕು. ರಾಜಕೀಯ ಉದ್ದೇಶದಿಂದಲೂ ಕೂಡ ಹಲ್ಲೆ ಮಾಡಿದ್ದಾರೆ. ಮುಂದೆ ಇಂತಹ ಘಟನೆಗಳು ನಡೆಯದಿರಲಿ ಎಂದರು.

ಇದನ್ನೂ ಓದಿ : ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ದಂಪತಿ ಮೇಲೆ ಹಲ್ಲೆ, ಪತಿ ಸಾವು : ಆರೋಪಿಗಳ ಬಂಧನ

ಗಾಯಾಳು ತಾಯಿ ಜಯಲಕ್ಷ್ಮಿ ಮಾಧ್ಯಮದೊಂದಿಗೆ ಮಾತನಾಡಿ, "ನಮ್ಮ ಮಗ ಮಾರುಕಟ್ಟೆಗೆ ಹೋಗುತ್ತಿದ್ದಾಗ ಬೈಕ್ ಅಡ್ಡಗಟ್ಟಿ ನಿಲ್ಲಿಸಿ ಕುತ್ತಿಗೆಯಲ್ಲಿದ್ದ ಚೈನ್​ ಅನ್ನು ಕಸಿದುಕೊಂಡಿದ್ದು, ಪ್ರಶ್ನೆ ಮಾಡಿದ್ದಕ್ಕೆ ಕೈಯ್ಯಲ್ಲಿದ್ದ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಜೊತೆಗೆ, ಗಾಂಜಾ ಸೇವಿಸಿ ಮದ್ಯಪಾನ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಜಾತಿ ನಿಂದನೆ ಮಾಡಿರೋ ಲಕ್ಷ್ಮಣ, ಹರೀಶ್, ಪ್ರೀತಂ, ಸುಮಂತ್, ಅಭಿ, ಪ್ರಜ್ವಲ್ ಇವರೆಲ್ಲಾ ಬಿಜೆಪಿ ಪಕ್ಷದವರಾಗಿದ್ದು, ಪುತ್ರನ ಮೇಲೆ ಹಲ್ಲೆ ನಡೆಸಿದ್ದಾರೆ" ಎಂದು ಆರೋಪಿಸಿದರು.

ಇದನ್ನೂ ಓದಿ : ದಲಿತ ಯುವಕನ ಅಪಹರಿಸಿ ಹಲ್ಲೆ.. ಮುಖದ ಮೇಲೆ ಮೂತ್ರ ವಿಸರ್ಜನೆ ಆರೋಪ

Last Updated : Nov 4, 2023, 12:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.