ಹಾಸನ: ನಿನ್ನೆಯಿಂದ ರಾಜ್ಯದ ಎಲ್ಲಾ ದೇವಾಲಯಗಳ ಬಾಗಿಲು ತೆರೆದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಲಾಕ್‌ಡೌನ್‌ನಿಂದ ದೇವಸ್ಥಾನದ ಬಾಗಿಲನ್ನು ಕಳೆದ ಎರಡು ತಿಂಗಳಿನಿಂದ ಮುಚ್ಚಲಾಗಿತ್ತು. ಸರ್ಕಾರವು ಕೆಲ ನಿಬಂಧನೆಯೊಂದಿಗೆ ದೇವಾಲಯದ ಬಾಗಿಲು ತೆಗೆಯಲು ಅವಕಾಶ ಕೊಟ್ಟಿದ್ದು ದೇವಾಲಯಗಳು ತೆರದಿವೆ.
ನಗರದ ಸೀತಾರಾಮಾಂಜನೇಯ ದೇವಸ್ಥಾನದ ಬಾಗಿಲು ತೆರೆದಿದ್ದು ಮೊದಲ ದಿನ ಭಕ್ತರ ಸಂಖ್ಯೆ ಅಷ್ಟಾಗಿ ಇರಲಿಲ್ಲ. ದೇವಾಲಯದ ಮುಂದೆ ಕೈಕಾಲು ತೊಳೆಯಲು ವ್ಯವಸ್ಥೆ ಮಾಡಲಾಗಿದ್ದು, ಹ್ಯಾಂಡ್ ವಾಷ್, ಸ್ಯಾನಿಟೈಸರ್ ಇಡಲಾಗಿತ್ತು. ಭಕ್ತಾಧಿಗಳು ದೇವಸ್ಥಾನದ ಒಳ ಬರುವ ಮೊದಲು ಸ್ವಚ್ಛತೆಯಿಂದ ಬಂದು ಸಾಮಾಜಿಕ ಅಂತರದಲ್ಲಿ ದೇವರ ದರ್ಶನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿತ್ತು.
ದೇವಸ್ಥಾನದ ಅಧ್ಯಕ್ಷ ಶ್ರೀಕಾಂತ್ ಮಾತನಾಡಿ, ಕೊರೊನಾ ಜಗತ್ತನ್ನು ಹರಡಿದೆ. ಲಾಕ್‌ಡೌನ್ ಆದೇಶ ಜಾರಿ ಬಂದಿದ್ದು ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ಸರ್ಕಾರದ ಆದೇಶದಂತೆ ಸೋಮವಾರದಿಂದ ದೇವಾಲಯದ ಬಾಗಿಲು ತೆಗೆದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಲಾಗಿದೆ ಎಂದರು.