ಹಾಸನ : ಜಮೀನು ಖಾತೆ ಬದಲಾವಣೆಗಾಗಿ ಲಂಚ ಪಡೆಯುವ ವೇಳೆ ಪಿಡಿಒ ಮತ್ತು ಕಾರ್ಯದರ್ಶಿ ಎಸಿಬಿ ಬಲೆಗೆ ಬಿದ್ದಿರುವ ಘಟನೆ ತಾಲೂಕಿನ ಕೌಶಿಕ ಗ್ರಾಮದಲ್ಲಿ ನಡೆದಿದೆ.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಹಾಗೂ ಕಾರ್ಯದರ್ಶಿ ಪುಷ್ಪಲತಾ ಎಸಿಬಿ ಬಲೆಗೆ ಬಿದ್ಧಿರುವ ಅಧಿಕಾರಿಗಳು. ಹಾಸನದ ಸುರೇಶ್ ಕುಮಾರ್ ಎಂಬುವರು ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದು, ಖಾತೆ ಬದಲಾವಣೆಗಾಗಿ ಲಂಚ ನೀಡಬೇಕೆಂದು ಅಧಿಕಾರಿಗಳು ಒತ್ತಡ ಹಾಕಿದ್ದಾರೆ. ಮೊದಲ ಕಂತಾಗಿ ₹2600 ಹಣ ಪಡೆದಿದ್ದು, ಇನ್ನುಳಿದ 500 ರೂಪಾಯಿಯನ್ನು ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ದೂರುದಾರ ಸುರೇಶ್ ಕುಮಾರ್ ದೂರಿನನ್ವಯ ಇಂದು ಭ್ರಷ್ಟಾಚಾರ ನಿಗ್ರಹ ದಳದ ಡಿಎಸ್ಪಿ ಸತೀಶ್, ಇನ್ಸ್ಪೆಕ್ಟರ್ ಶಿಲ್ಪಾ, ವೀಣಾ ಹಾಗೂ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ದಾಳಿ ಬಳಿಕ ಆರೋಪಿಗಳಿಂದ ಲಂಚ ಪಡೆದಿದ್ದ ಹಣವನ್ನು ವಶ ಪಡೆದುಕೊಂಡಿದ್ದು, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: ಕೋವಿಡ್ನಿಂದ ಪತಿ ನಿಧನ : ತಬ್ಬಲಿ ಮಗು, ವಿಧವೆಗೆ ಹೊಸ ಬಾಳು ನೀಡಿದ ಮೃತ ಗಂಡನ ಸಹೋದರ!