ETV Bharat / state

ನಿರಂತರ ಮಳೆಗೆ ಕುಸಿದ ರಸ್ತೆ... ವಾಹನ ಸವಾರರ ಪರದಾಟ

ನಿರಂತರ ಮಳೆಯಿಂದಾಗಿ ಹಾಸನ ನಗರದ ಬೈಪಾಸ್ ಸಮೀಪದ ಗವೇನಹಳ್ಳಿ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿ ವಾಹನ ಸವಾರರು ಪರದಾಟ ನಡೆಸುವಂತಾಗಿತ್ತು.

Breaking News
author img

By

Published : Aug 17, 2020, 4:46 PM IST

ಹಾಸನ: ನಿರಂತರ ಮಳೆಯಿಂದಾಗಿ ನಗರದ ಬೈಪಾಸ್ ಸಮೀಪದ ಗವೇನಹಳ್ಳಿ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿ ವಾಹನ ಸವಾರರು ಪರದಾಟ ನಡೆಸುವಂತಾಗಿತ್ತು.

ನಿರಂತರ ಮಳೆಗೆ ಕುಸಿದ ರಸ್ತೆ... ವಾಹನ ಸವಾರರ ಪರದಾಟ

ಇಂದು ಆರಂಭವಾಗಿರುವ ಮಾಘ ಮಳೆ ಬೆಳಗ್ಗಿನಿಂದ ಸುರಿಯುತ್ತಿದ್ದು, ಸಕಲೇಶಪುರ, ಅರಕಲಗೂಡು ಮತ್ತು ಚನ್ನರಾಯಪಟ್ಟಣದ ಕೆಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ನಗರದ ಹೊರವಲಯದಲ್ಲಿರುವ ಗವೇನಹಳ್ಳಿ ಮತ್ತು ಬೂವನಹಳ್ಳಿಗೆ ಸಂಪರ್ಕಿಸುವ ರಸ್ತೆ ಮಧ್ಯೆ ಭೂ ಕುಸಿತ ಉಂಟಾಗಿ ದೊಡ್ಡ ದೊಡ್ಡ ವಾಹನಗಳು ಮಣ್ಣಿನಲ್ಲಿ ಸಿಲುಕಿಕೊಂಡಿದ್ದು, ಅವುಗಳನ್ನು ಕ್ರೇನ್ ಮೂಲಕ ಮೇಲೆತ್ತಲಾಯಿತು.

ಕಳಪೆ ಒಳಚರಂಡಿ ಕಾಮಗಾರಿಯೇ ಭೂ ಕುಸಿತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಆದಷ್ಟು ಶೀಘ್ರವಾಗಿ ಉತ್ತಮ ಗುಣಮಟ್ಟದ ಕಾಮಗಾರಿ ಕೈಗೊಂಡು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.