ಹಾಸನ: ಸಂಸಾರದಲ್ಲಿ ಜಿಗುಪ್ಸೆ ಹೊಂದಿದ ಮಹಿಳೆಯೊಬ್ಬಳು ತಮ್ಮ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಈ ದುರ್ಘಟನೆಯಲ್ಲಿ ಮಗುವೊಂದು ಮೃತಪಟ್ಟಿದ್ದು, ತಾಯಿ ಮತ್ತು ಮತ್ತೊಂದು ಮಗು ಆಸ್ಪತ್ರೆಯಲ್ಲಿ ಸಾವು - ಬದುಕಿನ ಮಧ್ಯೆ ಹೋರಾಟ ನಡೆಸಿರುವ ಘಟನೆ ಹಾಸನ ನಗರದ ಚಿಪ್ಪಿನಕಟ್ಟೆಯಲ್ಲಿ ನಡೆದಿದ್ದು, ಈಗ ಬೆಳಕಿಗೆ ಬಂದಿದೆ. ಈ ಪ್ರಕರಣದ ಬಗ್ಗೆ ಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.
ನಗರದ ಬೆಸ್ತರ ಬೀದಿಯ ಚಿಪ್ಪಿನಕಟ್ಟೆ ನಿವಾಸಿಯಾಗಿರುವ ಮಂಗಳೂರು ಮೂಲದ ಸತ್ತಿಗಾಲ್ ಜೀನತ್ ಬಾನು ಅವರನ್ನು ನಗರದ ಚಿಪ್ಪಿನಕಟ್ಟೆ ನಿವಾಸಿ ಎಂಡಿ. ದಿಲ್ದಾರ್ ಅವರಿಗೆ 12 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದರು. ತದನಂತರ ತವರು ಮನೆ ಕಡೆಯವರು ಮನೆಗೆ ಬಂದು ವಿಚಾರಸದೇ ಇದ್ದ ಕಾರಣ ಗೃಹಿಣಿ ಜೀನತ್ ಬಾನು ಬೇಸತ್ತಿದ್ದರು. ತನ್ನ ಇಬ್ಬರು ಮಕ್ಕಳದ 6 ವರ್ಷದ ಸುನೈನಾ ದಿಲ್ದಾರ್ ಹಾಗೂ ಮೂರುವರೆ ವರ್ಷದ ಮಹಮದ್ ಆರಾನ್ ಜೊತೆ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಜನವರಿ 7 ರ ರಾತ್ರಿಯಿಂದಲೇ ಮಗ ಮಹಮದ್ ಆರಾನ್ ಸೇರಿದಂತೆ ಮೂವರಿಗೂ ವಾಂತಿ ಭೇದಿ ಕಾಣಿಸಿಕೊಂಡಿದೆ. ಕುಟುಂಬಸ್ಥರು ಕೂಡಲೇ ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗು ಮಹಮದ್ ಆರಾನ್ ಸಾವನಪ್ಪಿತ್ತು. ತಾಯಿ ಜೀನತ್ ಬಾನು ಹಾಗೂ 6 ವರ್ಷದ ಹೆಣ್ಣು ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ - ಮಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಹಾಸನ ಎಸ್ಪಿ ಹರಿರಾಂ ಶಂಕರ್, ’’ಜೀನತ್ ಬಾನು ಅವರು ಪತಿ ಜೊತೆ ನಗರದಲ್ಲಿ ವಾಸ ಮಾಡುತ್ತಿದ್ದರು. ಮದುವೆಯಾಗಿ ಅನೇಕ ವರ್ಷಗಳಾಗಿವೆ. ನನ್ನ ಮದುವೆಯಾಗಿ ಇಷ್ಟು ವರ್ಷ ಕಳೆದರು. ನನ್ನ ತಂದೆ - ತಾಯಿ ಇಬ್ಬರು ನನ್ನನ್ನು ಭೇಟಿ ಮಾಡುವುದಕ್ಕೆ ಬರುತ್ತಿಲ್ಲ. ಯಾವುದೇ ರೀತಿಯಲ್ಲಿ ನನ್ನನ್ನು ವಿಚಾರಿಸಿಕೊಳ್ಳುತ್ತಿಲ್ಲ ಎಂಬ ಕೊರಗು ಮಹಿಳೆ ಜೀನತ್ ಬಾನುಗೆ ಕಾಡುತ್ತಿತ್ತು. ಈ ಸಂಗತಿ ಜೀನತ್ ಬಾನು ಅವರ ಮನಸ್ಸಿಗೆ ತುಂಬಾ ನೋವು ಕೋಡುತ್ತಿತ್ತು. ಅವರಿಗೆ ಮಗಳು ಬೇಕಾಗಿಲ್ಲ ಅಂದ್ಮೇಲೆ ನಾನು ಬದುಕಿದ್ದು ವ್ಯರ್ಥ ಅಂತಾ ಮಹಿಳೆ ತಿಳಿದುಕೊಂಡಿದ್ದಾಳೆ. ಇದರಿಂದ ನೊಂದ ಜೀನತ್ ಬಾನು ಜನವರಿ 7ರಂದು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ‘‘ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
’’ಆತ್ಮಹತ್ಯೆಗೆ ಯತ್ನಿಸಿದ ಬಳಿಕ ತಾಯಿ ಮಕ್ಕಳಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ಜೀನತ್ ಬಾನು ಆತ್ಮಹತ್ಯೆಗೆ ಯತ್ನಿಸಿರುವ ಸಂಗತಿ ತಮ್ಮ ಸಂಬಂಧಿಕರಿಗೆ ತಿಳಿಸಿರಲಿಲ್ಲ. ಇವರ ಆರೋಗ್ಯದಲ್ಲಿ ಏರುಪೇರು ಕಂಡ ಹಿನ್ನೆಲೆ ಕುಟುಂಬಸ್ಥರು ಮತ್ತು ಸಂಬಂಧಿಕರು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜನವರಿ 8ರ ಬೆಳಗ್ಗೆ ಮುರೂವರೆ ವರ್ಷದ ಮಹಮದ್ ಆರಾನ್ ಚಿಕಿತ್ಸೆ ಫಲಿಕಾರಿಯಾಗದೇ ಸಾವನ್ನಪ್ಪಿದೆ. ಮೊದಲು ತಾಯಿ ಮತ್ತು ಮಕ್ಕಳಿಗೆ ಫುಡ್ ಪಾಯಿಸನ್ ಆಗಿದೆ ಎಂದು ತಿಳಿದುಕೊಂಡಿದ್ದರು. ಅಷ್ಟೇ ಅಲ್ಲ ಅವರು ವಿಷ ತೆಗೆದುಕೊಂಡಿದ್ದಾರೆ ಎಂದು ವೈದ್ಯರ ಗಮನಕ್ಕೂ ಬಂದಿಲ್ಲ‘‘ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಮಹಮದ್ ಆರಾನ್ ಸಾವು ಸುದ್ದಿ ಕೇಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಬಳಿಕ ಜನವರಿ 8 ರಂದೇ ಆರಾನ್ ಅಂತ್ಯಕ್ರಿಯೆ ನಡೆಯಿತು. ಇದಾದ ಬಳಿಕ ಆರು ವರ್ಷದ ಹೆಣ್ಣು ಮಗಳು ಸುನೈನಾ ದಿಲ್ದಾರ್ ಆರೋಗ್ಯದಲ್ಲಿ ಮತ್ತೆ ಏರುಪೇರು ಕಂಡಿದ್ದು, ಆಕೆಯನ್ನು ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಅವರು ಆತ್ಮಹತ್ಯೆಗೆ ಯತ್ನಿಸಿರುವುದು ತಿಳಿದು ಬಂದಿದ್ದು, ಅಲ್ಲಿ ತಾಯಿ ಮತ್ತು ಮಗಳು ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ. ನಗರದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಓದಿ: ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ: ಪೊಲೀಸ್ ವಿಚಾರಣೆಗೆ ಹಾಜರಾದ ಬಿಎಂಆರ್ಸಿಎಲ್ ಅಧಿಕಾರಿಗಳು