ETV Bharat / state

ಸ್ನೇಹಿತರೊಂದಿಗೆ ಜಾಲಿ ರೈಡ್​ ಹೋಗಿದ್ದನ್ನು ಪ್ರಶ್ನಿಸಿದ ಪ್ರಿಯಕರ.. ಮನನೊಂದ ಬಾಲಕಿ ಆತ್ಮಹತ್ಯೆ - etv bharat kannada

ಜಾಲಿ ರೈಡ್ ಪ್ರಶ್ನಿಸಿದ್ದಕ್ಕೆ ಮನನೊಂದ ಬಾಲಕಿ ಆತ್ಮಹತ್ಯೆ- ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಘಟನೆ- ಪ್ರಿಯಕರ ಲೋಕೇಶ್​ ಅನ್ನು ವಶಕ್ಕೆ ಪಡೆದ ಯಳಸೂರು ಪೊಲೀಸರು

hassan
ಬಾಲಕಿ ಆತ್ಮಹತ್ಯೆ
author img

By

Published : Feb 4, 2023, 8:01 AM IST

ಹಾಸನ/ವಿಜಯಪುರ: ರಾಜ್ಯದ ಜಿಲ್ಲೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ವರದಿಯಾಗಿದೆ. ಹಾಸನ ಜಿಲ್ಲೆಯಲ್ಲಿ ಪ್ರಿಯಕರನ ಮಾತಿಗೆ ಮನನೊಂದ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮತ್ತೊಂದೆಡೆ ವಿಜಯಪುರದಲ್ಲಿ ಪತ್ನಿಯ ಶೀಲ ಶಂಕಿಸಿ ಕೊಲೆಗೈದ ಆರೋಪಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ಜಾಲಿ ರೈಡ್​ ಹೋಗಿದ್ದನ್ನು ಪ್ರಶ್ನಿಸಿದ್ದಕ್ಕೆ ಬಾಲಕಿ ಆತ್ಮಹತ್ಯೆ: ಸ್ನೇಹಿತರೊಂದಿಗೆ ಬೈಕ್​ನಲ್ಲಿ ಜಾಲಿ ರೈಡ್ ಹೋಗಿದ್ದಕ್ಕೆ ಪದೇ ಪದೇ ಪ್ರಶ್ನೆ ಮಾಡುತ್ತಿದ್ದ ಪ್ರಿಯಕರನ ಹಿಂಸೆ ತಾಳಲಾರದೇ ಮನನೊಂದು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.

ಮೃತ ಬಾಲಕಿ ಯಳಸೂರು ಗ್ರಾಮದ ಲೋಕೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆಕೆ ಮತ್ತೊಬ್ಬ ಯುವಕನೊಂದಿಗೆ ಜಾಲಿ ರೈಡ್​ ಹೋಗಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಮೇಲೆ ಪದೇ ಪದೇ ಅನುಮಾನಗೊಂಡು ಜಗಳವಾಡುತ್ತಿದ್ದ. ಇದರಿಂದ ಮನನೊಂದ ಬಾಲಕಿ ಮೂರು ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಇನ್ನು, ಬಾಲಕಿಯ ಸಾವಿಗೆ ಪ್ರಿಯಕರ ಲೋಕೇಶ್​ ಪರೋಕ್ಷ ಕಾರಣ ಎಂದು ಆರೋಪಿಸಿ ಪೋಷಕರು ದೂರು ನೀಡಿದ್ದರು. ಇದರನ್ವಯ ಯಳಸೂರು ಪೊಲೀಸರು ಲೋಕೇಶ್​ ಅನ್ನು ವಶಕ್ಕೆ ಪಡೆದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ನೇಪಾಳಿ ಮಹಿಳೆ: ನೇಣುಬಿಗಿದ ಸ್ಥಿತಿಯಲ್ಲಿ ಅಸ್ಥಿಪಂಜರವಾಗಿ ಪತ್ತೆ

ಪತ್ನಿಯ ಶೀಲ ಶಂಕಿಸಿ ಕೊಲೈಗೈದ ಪತಿಗೆ ಜೀವಾವಧಿ ಶಿಕ್ಷೆ: ಪತ್ನಿಯ ಶೀಲ ಶಂಕಿಸಿ ಆಕೆಯನ್ನು ಕೊಲೆ ಮಾಡಿದ ಪಾಪಿ ಪತಿಗೆ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ಶುಕ್ರವಾರ ಆದೇಶಿಸಿದೆ. ವಿಜಯಪುರ ಜಿಲ್ಲೆಯ ಕಾಸಗೇರಿ ಕಾಲೋನಿಯಲ್ಲಿ ಸೋನಾಬಾಯಿ ಪವಾರ ಎಂಬವರನ್ನು ಆಕೆಯ ಪತಿ ಮಲ್ಲಿಕಾರ್ಜುನ ಪವಾರ 2019 ಮಾರ್ಚ್​ 5ರಂದು ಮನೆಯಲ್ಲಿಯೇ ಕೊಲೆಗೈದಿದ್ದ. ಈ ಸಂಬಂಧ ಆರೋಪಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದೆ.

ಮೃತ ಸೋನಾಬಾಯಿ ಮೇಲೆ ಮಲ್ಲಿಕಾರ್ಜುನ ಪದೇ ಪದೇ ಸಂಶಯಗೊಂಡು ಜಗಳವಾಡುತ್ತಿದ್ದ. ಬೇರೆಯವರ ಜೊತೆ ಸಂಬಂಧ ಇದೆ ಎಂದು ಸಂಶಯಪಟ್ಟು ಪತ್ನಿ ಮಲಗಿದ್ದ ವೇಳೆ ಆಯುಧದಿಂದ ಹತ್ಯೆಗೈದಿದ್ದ. ಈ ಸಂಬಂಧ ವಿಜಯಪುರ ಗಾಂಧಿಚೌಕ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಅಂದಿನ ಪಿಎಸ್​ಐ ಆರೀಫ್​ ಮುಶಾಪುರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್​​ ಶೀಟ್​ ಸಲ್ಲಿಸಿದ್ದರು. ಪ್ರಕರಣವನ್ನು ವಿಚಾರಣೆ ನಡೆಸಿದ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸುಭಾಷ್ ಸಂಕದ, ಆರೋಪಿ ಮಲ್ಲಿಕಾರ್ಜುನ ಪವಾರಗೆ ಶಿಕ್ಷೆ ವಿಧಿಸಿ ಆದೇಶಿದ್ದಾರೆ. ಸರ್ಕಾರದ ಪರವಾಗಿ 3ನೇ ಅಧಿಕ ಸರ್ಕಾರಿ ಅಭಿಯೋಜಕರಾದ ಬಿಡಿ ಬಾಗವಾನ್ ವಾದ ಮಂಡಿಸಿದ್ದರು.

ಇದನ್ನೂ ಓದಿ: ಸಿಗರೇಟ್ ನೀಡದ ಕಾರಣಕ್ಕೆ ಪಾನ್​ಶಾಪ್​ ಮಾಲೀಕನ ಮೇಲೆ ಚಾಕುವಿನಿಂದ ಹಲ್ಲೆ- ಕಣ್ಣಿನ ದೃಷ್ಟಿ ಕಳೆದುಕೊಂಡ ಮಾಲೀಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.