ETV Bharat / state

ಕ್ವಾರಂಟೈನ್​​ನಲ್ಲಿದ್ದವನನ್ನು ಅನುಮಾನಾಸ್ಪದವಾಗಿ ನೋಡಿದ ಗ್ರಾಮಸ್ಥರು: ವ್ಯಕ್ತಿ ನೇಣಿಗೆ ಶರಣು

ಕೊರೊನಾ ಪ್ರಕರಣದಿಂದ ಮುಂಬೈನಿಂದ ಬಂದಿದ್ದ ವ್ಯಕ್ತಿಯನ್ನು ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಕಂಡಿದ್ದು, ಇದರಿಂದ ನೊಂದು ಮಗ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೋಷಕರು ತಿಳಿಸಿದ್ದಾರೆ.

a-man suicide in shravanabelagola
ವ್ಯಕ್ತಿ ಆತ್ಮಹತ್ಯೆ
author img

By

Published : Mar 29, 2020, 7:58 PM IST

Updated : Mar 29, 2020, 8:06 PM IST

ಹಾಸನ/ಶ್ರವಣಬೆಳಗೊಳ: ಮೂರು ದಿನಗಳ ಹಿಂದೆ ಮುಂಬೈನಿಂದ ಬಂದಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ.

ಶ್ರವಣಬೆಳಗೊಳ ಹೋಬಳಿಯ ಮಂಚೇನಹಳ್ಳಿ ಗ್ರಾಮದ ವಿಷಕಂಠೇಗೌಡ (58) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನಿಂದ ಯುಗಾದಿ ಹಬ್ಬದ ನಿಮಿತ್ತ ಗ್ರಾಮಕ್ಕೆ ಬಂದಿದ್ದರು. ಮುಂಬೈನಿಂದ ಬಂದಿದ್ದರಿಂದ ವೈದ್ಯರು ಪರೀಕ್ಷಿಸಿ ಕೊರೊನಾ ಲಕ್ಷಣಗಳು ಕಾಣುತ್ತಿಲ್ಲ, ಆದರೂ ಮುನ್ನೆಚ್ಚರಿಕೆಯಾಗಿ ಮನೆಯಿಂದ ಹೊರ ಬರದಂತೆ ಸೂಚನೆ ನೀಡಿದ್ದರು. ಮೃತನ ಪೋಷಕರು ಹೇಳುವ ಪ್ರಕಾರ ಈತ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಉಬ್ಬಸ ಮತ್ತು ಕ್ಷಯರೋಗದ ಸಮಸ್ಯೆಯೂ ಕಾಡುತ್ತಿದ್ದು, ಆರೋಗ್ಯ ಕಾಪಾಡುವ ಸಲುವಾಗಿ ಮುಂಬೈನಿಂದ ಹಬ್ಬದ ಸಮಯದಲ್ಲಿ ಅವರನ್ನ ಕರೆಸಿಕೊಳ್ಳಲಾಗಿತ್ತು.

ವ್ಯಕ್ತಿ ಆತ್ಮಹತ್ಯೆ

ಆದ್ರೆ ಕೊರೊನಾ ಪ್ರಕರಣದಿಂದ ಗ್ರಾಮದಲ್ಲಿ ಇವರನ್ನ ನೋಡುವ ದೃಷ್ಠಿಯೇ ಬದಲಾಗಿತ್ತಂತೆ. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಅನುಮಾನ ಕಾಡುತ್ತಿದೆ ಎನ್ನುತ್ತಾರೆ ಪೋಷಕರು. ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಎಂ.ಸತೀಶ್, ಡಾ. ಶೀತಲ್, ತಾಲೂಕು ಆರೋಗ್ಯಾಧಿಕಾರಿ ಡಾ.ಎ.ಎನ್.ಕಿಶೋರ್ ಕುಮಾರ್ ಹಾಗೂ ಜಿಲ್ಲಾ ಸಿ.ಎಂ.ಡಿ. ವಿಭಾಗದ ಸಿಬ್ಬಂದಿ ಆಗಮಿಸಿ ಪೋಷಕರನ್ನ ತಪಾಸಣೆಗೆ ಒಳಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನ ಹಾಸನದ ಶವಾಗಾರಕ್ಕೆ ತರಲಾಗಿದೆ. ಇನ್ನು ಈ ಸಂಬಂಧ ಶ್ರವಣಬೆಳಗೊಳ ಪೊಲೀಸರು ಪ್ರಕರಣದ ದಾಖಲಿಸಿಕೊಂಡಿದ್ದಾರೆ.

Last Updated : Mar 29, 2020, 8:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.