ETV Bharat / state

ಸಾರ್ವಜನಿಕ ಸ್ಥಳಗಳಲ್ಲಿ ಗಲಾಟೆ ಮಾಡುತ್ತಿದ್ದ ಪುಂಡರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು

ಸಾರ್ವಜನಿಕ ಸ್ಥಳಗಳಲ್ಲಿ ಗಲಾಟೆ ಮಾಡುತ್ತಿದ್ದ ಯುವಕರಿಗೆ ಹಾಸನ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

Hassan police lathi  charge
ಸಾರ್ವಜನಿಕ ಸ್ಥಳಗಳಲ್ಲಿ ಗಲಾಟೆ ಮಾಡುತ್ತಿದ್ದ ಯುವಕರಿಗೆ ಲಾಠಿ ಚಾರ್ಜ್​
author img

By

Published : Aug 31, 2020, 1:49 PM IST

ಹಾಸನ: ನಗರದ ಬಸಟ್ಟಿಕೊಪ್ಪಲಿನ ಸಾರ್ವಜನಿಕ ಸ್ಥಳಗಳಲ್ಲಿ ಗಲಾಟೆ ಮಾಡುತ್ತಿದ್ದ ಯುವಕರಿಗೆ ಹಾಸನ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಗಲಾಟೆ ಮಾಡುತ್ತಿದ್ದ ಯುವಕರಿಗೆ ಲಾಠಿ ಚಾರ್ಜ್​

ಲಾಕ್‌ಡೌನ್ ಕಳೆದ ಮೇಲೆ ಹಾಸನದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗಿದ್ದು, ಯುವಕರು ಕುಡಿದು ಗಲಾಟೆ ಮಾಡಿಕೊಳ್ಳುವುದು ಹೆಚ್ಚಾಗಿತ್ತು. ಈ ಬಗ್ಗೆ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರೂ, ಕೆಲವರು ತಮ್ಮ ನಡತೆ ಬದಲಾಯಿಸಿಕೊಳ್ಳದ ಕಾರಣ ಹಾಸನ ಪೊಲೀಸರು ಸಾರ್ವಜನಿಕರ ಬಳಿ ನಿಮಗೆ ಯಾರಾದರೂ ಗಲಾಟೆ ಮಾಡುವುದು ಕಂಡು ಬಂದರೆ ನಮಗೆ ಕರೆ ಮಾಡಿ. ಪುಂಡರಿಗೆ ನಾವು ಬುದ್ದಿ ಕಲಿಸಿ ಮುಂದಾಗುವ ಅನಾಹುತ ತಪ್ಪಿಸುತ್ತೇವೆ ಎಂದು ಮನವಿ ಮಾಡಿದ್ದರು.

ನಿನ್ನೆ ಸಂಜೆ ಹಾಸನದ ಬಸಟ್ಟಿಕೊಪ್ಪಲು ಬಳಿ ಯುವಕರ ತಂಡವೊಂದು ಕುಡಿದ ಮತ್ತಿನಲ್ಲಿ ಕೊರಳಪಟ್ಟಿ ಹಿಡಿದುಕೊಂಡು ಗಲಾಟೆ ಮಾಡುತ್ತಿತ್ತು. ಇದನ್ನು ನೋಡಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪುಂಡರಿಗೆ ಲಾಠಿ ರುಚಿ ತೋರಿಸಿ ಠಾಣೆಗೆ ಕರೆದುಕೊಂಡು ಹೋಗಿ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.