ETV Bharat / state

ಎರಡು ಪ್ರತ್ಯೇಕ ಪ್ರಕರಣ: 6 ಮಂದಿ ಆರೋಪಿಗಳ ಬಂಧನ - 6 Thief arrest

ಹಾಸನ ಗ್ರಾಮಾಂತರ ಠಾಣೆ ಹಾಗೂ ಚನ್ನರಾಯಪಟ್ಟಣ ಪೊಲೀಸರು ಮನೆಗಳ್ಳತನ ಮತ್ತು ಸರಗಳ್ಳತನದ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ 6 ಜನ ಆರೋಪಿಗಳನ್ನು ಬಂಧಿಸಿ, 7.5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

hassan police
ಹಾಸನ ಗ್ರಾಮಾಂತರ ಠಾಣೆ
author img

By

Published : Feb 25, 2021, 7:23 AM IST

ಹಾಸನ: ಮನೆಗಳ್ಳತನ ಮತ್ತು ಸರಗಳ್ಳತನ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಹಾಸನ ಗ್ರಾಮಾಂತರ ಠಾಣೆ ಹಾಗೂ ಚನ್ನರಾಯಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.

ಎರಡು ಪ್ರತ್ಯೇಕ ಪ್ರಕರಣಗಳ ಕುರಿತು ಮಾಹಿತಿ ನೀಡಿದ ಎಸ್​ಪಿ

ಫೆ.11 ರಂದು ಹಾಸನ ತಾಲೂಕಿನ ಯಲ್ಲಗೊಂಡನಹಳ್ಳಿ ಗ್ರಾಮದ ಒಂಟಿಮನೆ ನಿವಾಸಿ ಶಾರದಮ್ಮ ಎಂಬುವರ ಮೇಲೆ ಮೂರು ಮಂದಿ ಹಲ್ಲೆ ನಡೆಸಿ, ಚಿನ್ನಾಭರಣಗಳನ್ನು ಮತ್ತು ಮನೆಯಲ್ಲಿದ್ದ ಮೊಬೈಲ್​ಗಳನ್ನು ದೋಚಿಕೊಂಡು 5 ಮಂದಿ ಆರೋಪಿಗಳು ಪರಾರಿಯಾಗಿದ್ದರು. ಈ ಕುರಿತು ತನಿಖೆ ನಡೆಸಿದ ಪೊಲೀಸರು, ಇದೀಗ ಅದೇ ಗ್ರಾಮದ ದಿಲ್ಲಿಗೌಡ (53), ಹಾಸನ ಹೊರವಲಯದ ಭುವನಹಳ್ಳಿಯ ನಿವಾಸಿ ಶಶಿಕುಮಾರ್ (24), ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ತಿಪ್ಪೇಸ್ವಾಮಿ (32), ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಗ್ರಾಮದ ಹಣ್ಣಿನ ವ್ಯಾಪಾರಿ ಬಾಷಾ (25) ಮತ್ತು ಚಿಕ್ಕಮಗಳೂರು ಜಿಲ್ಲೆಯ ಅಂಬಳೆ ಗ್ರಾಮದ ಧ್ರುವ ಪ್ರಸಾದ್ (21) ಎಂಬುವರನ್ನು ಬಂಧಿಸಿದ್ದಾರೆ.

ಬಂಧಿತರಿಂದ 33 ಗ್ರಾಂ ತೂಕದ ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸರು ಕೂಡ ಮನೆ ಕಳ್ಳತನ ಪ್ರಕರಣದ ಓರ್ವ ಆರೋಪಿ ಅಭಿ ಅಲಿಯಾಸ್ ಚಪಾತಿ (24) ಬಂಧಿಸಿ ಆತನಿಂದ ಸುಮಾರು 5.61 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ವಿವರ:

ಜಿಲ್ಲೆಯ ಚನ್ನರಾಯಪಟ್ಟಣ ನಗರದ ವಿದ್ಯಾನಗರದಲ್ಲಿ ವಾಸವಾಗಿದ್ದ ಯೋಗೇಶ್ ಕುಟುಂಬ ಅ. 25, 2020 ಆಯುಧ ಪೂಜೆ ಪ್ರಯುಕ್ತ ಸಮೀಪದ ಉದಯಪುರ ಗ್ರಾಮದ ತೋಟದಲ್ಲಿ ಪೂಜೆ ಮಾಡಲು ಹೋದ ಸಂದರ್ಭದಲ್ಲಿ ಮನೆ ಬಾಗಿಲು ಒಡೆದು ಚಿನ್ನಾಭರಣಗಳನ್ನು ಮತ್ತು ನಗದನ್ನು ದೋಚಿ ಆರೋಪಿ ಪರಾರಿಯಾಗಿದ್ದನು.

ಈ ಸಂಬಂಧ ತನಿಖೆ ಆರಂಭಿಸಿದ ಚನ್ನರಾಯಪಟ್ಟಣ ಪೊಲೀಸರು, ಬಾಗೂರು ರಸ್ತೆಯ ನೃಪತುಂಗ ವೃತ್ತದ ಚಿನ್ನಾಭರಣ ಅಂಗಡಿ ಮುಂಭಾಗ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಅಭಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ನಡೆಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿ ಬಳಿಯಿದ್ದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.