ETV Bharat / state

ಹಾಸನದಲ್ಲಿ ಇಂದು 49 ಕೊರೊನಾ ಕೇಸ್​​​ ಪತ್ತೆ - ಹಾಸನದಲ್ಲಿ 49 ಕೊರೊನಾ ಪ್ರಕರಣ ಪತ್ತೆ

ಜಿಲ್ಲಾಧಿಕಾರಿ ಆರ್.ಗಿರೀಶ್ ಜಿಲ್ಲೆಯಲ್ಲಿ ಪತ್ತೆಯಾದ ಕೊರೊನಾ ಪ್ರಕರಣಗಳ ಕುರಿತು ಮಾಹಿತಿ ನೀಡಿದರು.

District Collector R. Girish
ಜಿಲ್ಲಾಧಿಕಾರಿ ಆರ್.ಗಿರೀಶ್
author img

By

Published : Jul 6, 2020, 5:21 PM IST

ಹಾಸನ: ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದು, ಇಂದು ಒಂದೇ ದಿನ 49 ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಮಾಹಿತಿ ನೀಡಿದರು.

ಕೊರೊನಾ ಪ್ರಕರಣಗಳ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಇಂದು ಒಂದೇ ದಿನ 49 ಪ್ರಕರಣ ದಾಖಲಾಗಿದ್ದು, ಇಲ್ಲಿವರೆಗೂ 541 ಪ್ರಕರಣ ವರದಿಯಾಗಿವೆ. ಇದುವರೆಗೂ 8 ಜನರು ಸಾವನ್ನಪ್ಪಿದ್ದು, 255 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ ಎಂದರು.

ಇಂದು ಪತ್ತೆಯಾದ ಸೋಂಕಿತರ ವಿವರ:

ಇವತ್ತು ಪತ್ತೆಯಾಗಿರುವ 49 ಪ್ರಕರಣಗಳಲ್ಲಿ ಬೇಲೂರು-2, ಚನ್ನರಾಯಪಟ್ಟಣದಲ್ಲಿ-6, ಹಾಸನದಲ್ಲಿ-36, ಹೊಳೆನರಸೀಪುರದಲ್ಲಿ-1, ಸಕಲೇಶಪುರದಲ್ಲಿ-4 ಪತ್ತೆಯಾಗಿವೆ. ​ ​

ಸರ್ಕಾರದಿಂದ ಹೊಸ ಆದೇಶ:

ಕೋವಿಡ್ ಪಾಸಿಟಿವ್ ಇರುವ ವ್ಯಕ್ತಿಗಳನ್ನು ಮನೆಯಲ್ಲೇ ಪ್ರತ್ಯೇಕವಾಗಿ ಇಡುವಂತೆ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, 60 ವರ್ಷಕ್ಕಿಂತ ಕಡಿಮೆ ಇರುವ ವ್ಯಕ್ತಿಗಳಿಗೆ ಪಾಸಿಟಿವ್ ಪ್ರಕರಣ ಬಂದಲ್ಲಿ ಮತ್ತು ಅಂತವರಿಗೆ ರೋಗದ ಯಾವ ಲಕ್ಷಣಗಳು ಇಲ್ಲದಿದ್ದಲ್ಲಿ ಮನೆಯಲ್ಲಿಯೇ ಇಡುವಂತೆ ಸೂಚಿಸಲಾಗಿದೆ.

ಮುಂದಿನ ದಿನಗಳಲ್ಲಿ ಬರುವ ಪಾಸಿಟಿವ್ ವ್ಯಕ್ತಿಗಳನ್ನು ಮನೆಗಳಲ್ಲೇ ಇಡುವ ಕೆಲಸ ಮಾಡಲಾಗುತ್ತಿದ್ದು, ಮನೆಯಲ್ಲಿ ಪ್ರತ್ಯೆಕ ಕೊಠಡಿ ಇದ್ದು, ಶೌಚಾಲಯ ಇದ್ದರೆ ಪಾಸಿಟಿವ್ ವ್ಯಕ್ತಿಗಳು ಮನೆಯಲ್ಲೇ ಇರಬಹುದಾಗಿದೆ. ಇದಕ್ಕೂ ಮೊದಲು ನಮ್ಮ ವೈದ್ಯ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ನಂತರ ನಿರ್ಧರಿಸಲಾಗುವುದು. ಯಾರೂ ಹೆದರು ಅವಶ್ಯಕತೆಯಿಲ್ಲ. ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಡಿಸಿ ಮಾಡಿದರು.

ಜಿಲ್ಲೆಯ ತಾಲೂಕುವಾರು ಕೋವಿಡ್ ಪ್ರಕರಣಗಳ ವಿವರ:

1. ಆಲೂರು - 20

2. ಅರಕಲಗೂಡು-21

3. ಅರಸೀಕೆರೆ-62

4. ಬೆಲೂರು-14

5. ಚನ್ನರಾಯಪಟ್ಟಣ-236

6. ಹಾಸನ-105

7. ಹೊಳೆನರಸೀಪುರದಲ್ಲಿ-73

8. ಸಕಲೇಶಪುರ-6

9. ಇತರೆ -4 ಪ್ರಕರಣಗಳು ದಾಖಲಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.