ETV Bharat / state

ಹಾಸನ ಜಿಲ್ಲೆಯಲ್ಲಿ ಇಂದು 476 ಕೊರೊನಾ ಪ್ರಕರಣಗಳು ಪತ್ತೆ..!

author img

By

Published : Sep 29, 2020, 5:02 PM IST

ಇಂದು ಹಾಸನ ಜಿಲ್ಲೆಯಲ್ಲಿ 476 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 16,348ಕ್ಕೆ ಏರಿಕೆಯಾಗಿದೆ.

Hasan
ಹಾಸನ

ಹಾಸನ: ಹಾಸನ ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ ಹಾಸನ ಈಗ ರಾಜ್ಯದಲ್ಲಿ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಪಟ್ಟಿಗೆ ಸೇರ್ಪಡೆಯಾಗಲು ಸಜ್ಜಾಗುತ್ತಿದೆ.

ನಿನ್ನೆ 200 ಗಡಿ ದಾಟಿದ್ದ ಕೊರೊನಾ ಸೋಂಕಿತರ ಸಂಖ್ಯೆ ಇಂದು ಅದರ ಎರಡರಷ್ಟಾಗಿದೆ. ಇಂದು ಜಿಲ್ಲೆಯಲ್ಲಿ 476 ಮಂದಿಗೆ ಕೊರೊನಾ ಸೋಂಕು ಹರಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 16,348ಕ್ಕೆ ಏರಿಕೆಯಾಗಿದೆ.

ಈಗಾಗಲೇ ಆಸ್ಪತ್ರೆಯಲ್ಲಿ 3,521 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು 148 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸೋಂಕಿಗೆ ಇಂದು 11 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 322ಕ್ಕೆ ಏರಿಕೆಯಾಗಿದೆ. ಇದಲ್ಲದೇ 51 ಮಂದಿ ತೀವ್ರ ನಿಗಾ ಘಟಕದಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ತಾಲೂಕುವಾರು ಅಂಕಿ ಅಂಶ : ಆಲೂರು ತಾಲೂಕಿನಲ್ಲಿ ಇಂದು 30 ಪ್ರಕರಣಗಳು ದಾಖಲಾದರೆ, ಅರಕಲಗೂಡಿನಲ್ಲಿ 45, ಅರಸಿಕೆರೆಯಲ್ಲಿ 34, ಬೇಲೂರಿನಲ್ಲಿ 91, ಚನ್ನರಾಯಪಟ್ಟಣದಲ್ಲಿ 44, ಹಾಸನ ನಗರದಲ್ಲಿ 184, ಹೊಳೆನರಸೀಪುರದಲ್ಲಿ 34, ಸಕಲೇಶಪುರದಲ್ಲಿ 11, ಇತರೆ 03 ಪ್ರಕರಣ ಸೇರಿ ಇಂದು 476 ಪ್ರಕರಣಗಳು ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.