ಹಾಸನ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇಂದು ಕೂಡ 228 ಮಂದಿಗೆ ಪಾಸಿಟಿವ್ ಬಂದಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 14,915 ಪ್ರಕರಣಗಳು ದಾಖಲಾಗಿವೆ.
ಆಸ್ಪತ್ರೆಯಿಂದ ಇಂದು 284 ಮಂದಿ ಬಿಡುಗಡೆಯಾಗಿದ್ದು, ಕಳೆದ ಆರು ತಿಂಗಳಿನಿಂದ 11,815 ಮಂದಿ ಗುಣಮುಖರಾಗಿದ್ದಾರೆ. ಇಂದಿನ ತನಕ ಆಸ್ಪತ್ರೆಯಲ್ಲಿ 2,583 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಕೂಡ ಕೊರೊನಾದಿಂದ 8 ಮಂದಿ ಮೃತಪಟ್ಟಿದ್ದಾರೆ ಎಂಬ ವರದಿ ಬಂದಿದೆ.
![228 new coronavirus cases reported in Hassan](https://etvbharatimages.akamaized.net/etvbharat/prod-images/kn-hsn-03-today-corona-avb-7203289_25092020151232_2509f_01740_145.jpg)
ಇದುವರೆಗೆ ಜಿಲ್ಲೆಯಲ್ಲಿ 297 ಮಂದಿ ಮೃತಪಟ್ಟಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ 52 ಮಂದಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕುವಾರು ಅಂಕಿ ಅಂಶಗಳನ್ನು ನೋಡುವುದಾದರೆ ಆಲೂರಿನಲ್ಲಿ ಇಂದು 11 ಪ್ರಕರಣಗಳು ದಾಖಲಾದರೆ ಅರಕಲಗೂಡಿನಲ್ಲಿ 12, ಅರಸೀಕೆರೆಯಲ್ಲಿ 45, ಬೇಲೂರಿನಲ್ಲಿ 20, ಚನ್ನರಾಯಪಟ್ಟಣದಲ್ಲಿ 54, ಹಾಸನದಲ್ಲಿ 63, ಹೊಳೆನರಸೀಪುರದಲ್ಲಿ 15, ಸಕಲೇಶಪುರದಲ್ಲಿ 8 ಪ್ರಕರಣಗಳು ದಾಖಲಾಗಿವೆ ಎಂದು ಹಾಸನ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸತೀಶ್ ಮಾಹಿತಿ ನೀಡಿದ್ದಾರೆ.