ಹಾಸನ: ಲಾಕ್ಡೌನ್ ಹಿನ್ನೆಲೆ, ಕರ್ನಾಟಕದಲ್ಲಿ ಸಿಲುಕಿಕೊಂಡಿದ್ದ ಬಿಹಾರದ ಸುಮಾರು 1,440 ಕಾರ್ಮಿಕರನ್ನ ವಿಶೇಷ ಶ್ರಮಿಕ್ ರೈಲಿನ ಮೂಲಕ ಹಾಸನದಿಂದ ಕಳುಹಿಸಿಕೊಡಲಾಗುತ್ತಿದೆ.
ಇಂದು ಸಂಜೆ 5 ಗಂಟೆಗೆ ಹಾಸನದಿಂದ ಹೊರಡಲಿರುವ ಈ ವಿಶೇಷ ರೈಲು ಬೆಂಗಳೂರು, ರಾಯದುರ್ಗ, ಬಳ್ಳಾರಿ, ಗುಂತಕಲ್ ಮಾರ್ಗವಾಗಿ ವಿಜಯವಾಡ ತಲುಪಲಿದ್ದು, ನಂತರ ವಿಶಾಖಪಟ್ಟಣ ಮಾರ್ಗವಾಗಿ ಒರಿಸ್ಸಾ ರಾಜ್ಯ ಹಾಗೂ ಜಾರ್ಖಂಡ್ ಮೂಲಕ ಬಿಹಾರಕ್ಕೆ ತೆರಳಲಿದೆ. ಹಾಸನದಿಂದ ಸಂಜೆ 5 ಗಂಟೆಗೆ ಹೊರಡುವ ರೈಲಿನಲ್ಲಿ ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ 1,440 ಪ್ರಯಾಣಿಕರು 22 ಬೋಗಿಗಳ ವ್ಯವಸ್ಥೆ ಮಾಡಲಾಗಿದೆ.
ಕೇಂದ್ರ ಸರ್ಕಾರ ಹೊರರಾಜ್ಯಗಳಿಗೆ ತೆರಳಲು ಅವಕಾಶ ಮಾಡಿಕೊಟ್ಟ ಹಿನ್ನೆಲೆ, ಸೇವಾಸಿಂಧು ಮೂಲಕ ಕರ್ನಾಟಕದಿಂದ ಮೊದಲ ಬಾರಿಗೆ ಹೊರರಾಜ್ಯಕ್ಕೆ 1,440 ಮಂದಿಯನ್ನು ಕಳಿಸಲಾಗುತ್ತಿದೆ.