ETV Bharat / state

ಜಿಗಿ ಹುಳು ಕಾಟಕ್ಕೆ ಮಾವಿನ ಬೆಳೆ ನಾಶ : ಸಂಕಷ್ಟದಲ್ಲಿ ಗದಗ ರೈತರು!

ಮಾವಿನ ಸೀಜನ್​ನಲ್ಲೊಂತೂ ಇಲ್ಲಿನ ರೈತರು ಹಬ್ಬದ ರೀತಿಯಲ್ಲಿ ಮಾವಿನ ವ್ಯಾಪಾರ ಮಾಡಿ ಹೆಚ್ಚಿನ ಆದಾಯ ಗಳಿಸುತ್ತಿದ್ದರು. ಆದ್ರೀಗ ರೈತರು ಲಕ್ಷಾಂತರ ರೂ. ಖರ್ಚು ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಜಿಗಿ ಹುಳು ಬಾಧೆಯಿಂದ ರೈತ ಕಂಗಾಲಾಗಿದ್ದಾನೆ..

worms problem for mango tree in Gadag
ಮಾವಿನ ಬೆಳೆ ನಾಶ
author img

By

Published : Apr 23, 2022, 6:53 AM IST

Updated : Apr 23, 2022, 1:05 PM IST

ಗದ​ಗ : ಮಾವು ಬೆಳೆಯುವಲ್ಲಿ ಗದಗ ತಾಲೂಕಿನ ಹುಲಕೋಟಿ ಗ್ರಾಮ ತುಂಬಾ ಫೇಮಸ್‌. ಈ ಊರಿನಲ್ಲಿ ಸುಮಾರು ಶೇ.80ರಷ್ಟು ರೈತರು ಮಾವಿನ ಬೆಳೆ ಬೆಳೆದು ಪ್ರತಿವರ್ಷ ಉತ್ತಮ ಆದಾಯ ಗಳಿಸುತ್ತಿದ್ದರು. ಆದ್ರೆ, ಮಾವು ಬೆಳೆಗೆ ಈ ವರ್ಷ ಜಿಗಿ ಹುಳು ಕಾಟದಿಂದ ಇಡೀ ಬೆಳೆ ನಾಶವಾಗಿದೆ. ಈ ಕೀಟ ಮಾವಿನ ಹೂಗಳನ್ನು ಸಂಪೂರ್ಣವಾಗಿ ತಿಂದು ಹಾಕಿ ವಿಷಕಾರಿ ಜೊಲ್ಲು ಬಿಟ್ಟು ಹೂವಿನ ಗೊಂಚಲು ಸುಡುವಂತೆ ಮಾಡಿಬಿಡುತ್ತಿದೆ. ಇದರಿಂದ ಹೆಚ್ಚಿನ ಮರಗಳಲ್ಲಿ ಹೂ ಕಾಯಿಯಾಗುವ ಮುನ್ನವೇ ಉದುರಿ ಹೋಗಿ ಸಂಪೂರ್ಣ ಫಸಲು ಹಾಳಾಗಿ ಹೋಗಿದೆ.

ಜಿಗಿ ಹುಳು ಕಾಟ - ರೈತರ ಪ್ರತಿಕ್ರಿಯೆ

ಇನ್ನು ರೈತರು ಆರಂಭದಲ್ಲಿಯೇ ಸಾಕಷ್ಟು ಬಾರಿ ಔಷಧಿ ಸಿಂಪಡಿಸಿದ್ದಾರೆ. ಒಂದು ಬಾರಿ ಔಷಧಿ ಸಿಂಪಡಿಸಿ, ಸುಮಾರು 50 ಸಾವಿರ ರೂ. ವರೆಗೆ ಖರ್ಚು ಮಾಡಿದ್ದಾರೆ. ಹೀಗೆ ಸುಮಾರು 3-4 ಬಾರಿ ಲಕ್ಷಾಂತರ ರೂ. ಖರ್ಚು ಮಾಡಿ ಔಷಧಿ ಸಿಂಪಡಿಸಿದರೂ ಜಿಗಿ ಹುಳು ನಿಯಂತ್ರಣಕ್ಕೆ ಬಂದಿಲ್ಲ. ಇದು ಒಮ್ಮೆಗೆ 1,500 ಮರಿಗಳನ್ನ ಹಾಕುತ್ತೆ. ಹೀಗಾಗಿ, ಇಡೀ ತೋಟಕ್ಕೆ ತೋಟವೇ ನಾಶವಾಗಿದೆ.

ಈ ಸಂಬಂಧ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ತಮಗೆ ಆಗಿರುವ ಸಮಸ್ಯೆಗಳನ್ನು ಹೇಳಿಕೊಂಡರೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸದೇ ಕಚೇರಿಯಲ್ಲಿಯೇ ಕೂತು ವಾಟ್ಸ್‌ಆ್ಯಪ್​ನಲ್ಲಿ ಫೋಟೋ ಕಳುಹಿಸಿ ಅಂತಾ ಹೇಳುತ್ತಾರೆನ್ನುವ ಆರೋಪವಿದೆ. ತೋಟಗಾರಿಕೆ ಇಲಾಖೆಯಾಗಲಿ ಅಥವಾ ಸರ್ಕಾರವಾಗಲಿ ನಮ್ಮ ನೆರವಿಗೆ ಬರಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಭಾರತೀಯ ಯೋಧರು ಏನೇ ಖರೀದಿಸಿದ್ರೂ ಫ್ರೀ! ಬೆಂಗಳೂರಿನ ಪುಟ್ಟ ಜ್ಯೂಸ್‌ ಸೆಂಟರ್‌ ಮಾಲೀಕನ ದೇಶಪ್ರೇಮ

ಹುಲಕೋಟಿ ಗ್ರಾಮವಷ್ಟೇ ಅಲ್ಲದೇ ಸುತ್ತಮುತ್ತಲಿನ ಕುರ್ತಕೋಟಿ, ದುಂದೂರು ಸೇರಿದಂತೆ ಕೆಲ ಗ್ರಾಮದ ರೈತರು ಈ ಜಿಗಿ ಹುಳುವಿನ ಕಾಟಕ್ಕೆ ಬೇಸತ್ತಿದ್ದಾರೆ. ಸರ್ಕಾರ ಇವರ ನೆರವಿಗೆ ಧಾವಿಸಬೇಕಿದೆ.

Last Updated : Apr 23, 2022, 1:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.