ETV Bharat / state

ವರ್ಷದ ಕೂಳು ಕಸಿದ ಅಕಾಲಿಕ ಮಳೆ : ನೆಲಕಚ್ಚಿದ ಬಿಳಿ ಜೋಳದ ಬೆಳೆ - ಅಕಾಲಿಕ ಮಳೆ

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಸುರಿದ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ವರುಣನ ಆರ್ಭಟಕ್ಕೆ ಬಿಳಿ ಜೋಳ, ಕಡಲೆ, ಗೋಧಿ, ಹತ್ತಿ ಬೆಳೆಗಳು ನೆಲಕ್ಕುರುಳಿ ನಾಶವಾಗಿವೆ.

White corn crop destruction from premature rain in Gadag
ನೆಲಕಚ್ಚಿದ ಬಿಳಿ ಜೋಳದ ಬೆಳೆ
author img

By

Published : Jan 9, 2021, 10:38 AM IST

Updated : Jan 9, 2021, 11:02 AM IST

ಗದಗ: ಜಿಲ್ಲೆಯ ಹಲವೆಡೆ ತಡರಾತ್ರಿ ಸುರಿದ ಅಕಾಲಿಕ ಮಳೆಯಿಂದಾಗಿ ರೈತರು ಬೆಳೆದ ಬೆಳೆ ಸಂಪೂರ್ಣ ನೆಲಕಚ್ಚಿದೆ. ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಸುರಿದ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ವರುಣನ ಆರ್ಭಟಕ್ಕೆ ಬಿಳಿ ಜೋಳ, ಕಡಲೆ, ಗೋಧಿ, ಹತ್ತಿ ಬೆಳೆಗಳು ನೆಲಕ್ಕುರುಳಿ ನಾಶವಾಗಿವೆ.

ನೆಲಕಚ್ಚಿದ ಬಿಳಿ ಜೋಳದ ಬೆಳೆ

ಕೆಲವು ಬೆಳೆ ಕಟಾವಿಗೆ ಬಂದಿದ್ದು, ಇನ್ನು ಕೆಲವು ಬೆಳೆ, ಕಾಳು ಕಚ್ಚುವ ಸಂದರ್ಭದಲ್ಲಿ ಜಮೀನಿನಲ್ಲಿ ನೀರು ನಿಂತು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬಸವರಾಜ್ ಮೆಣಸಿನಕಾಯಿ ಎನ್ನುವ ರೈತ, ನಾಲ್ಕು ಎಕರೆಯಲ್ಲಿ ಬೆಳೆಯಲಾಗಿದ್ದ ಬಿಳಿ ಜೋಳ ಮಳೆ ಗಾಳಿಗೆ ನೆಲಕ್ಕುರುಳಿದ್ದು, ಕಣ್ಣೀರು ಹಾಕ್ತಿದ್ದಾರೆ.

ಈ ವರ್ಷ ಮುಂಗಾರು ಸಂದರ್ಭದಲ್ಲಿ ಅತಿವೃಷ್ಟಿಯಿಂದ ಬೆಳೆಗಳೆಲ್ಲಾ ಹಾಳಾಗಿ ಹೋಯಿತು. ಹಿಂಗಾರಿನಲ್ಲೂ ಹೀಗೇ ಆಗಿದೆ. ಸಾಲಸೋಲ ಮಾಡಿ ಬೆಳೆದ ಬೆಳೆಗಳು ಪ್ರಕೃತಿ ವಿಕೋಪದಿಂದ ಹಾಳಾಗುತ್ತಿವೆ. ಸರ್ಕಾರ ರೈತರನ್ನು ಕಣ್ಣು ತೆರೆದು ನೋಡಬೇಕು. ಜಾನುವಾರುಗಳಿಗೆ ಮೇವು ಇಲ್ಲದೆ, ರೈತರ ಹೊಟ್ಟೆಗೆ ಹಿಟ್ಟು ಇಲ್ಲದೆ ಬದುಕುವುದು ದುಸ್ತರವಾಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಓದಿ : 1 ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಆಕಾಶವಾಣಿ ನಲಿ-ಕಲಿ ಕಾರ್ಯಕ್ರಮ ಜ.11 ರಿಂದ

Last Updated : Jan 9, 2021, 11:02 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.