ಗದಗ: ವೀಕೆಂಡ್ ಕರ್ಫ್ಯೂನಿಂದಾಗಿ ವಿಕಲಚೇತನ ಯುವತಿಯೊಬ್ಬಳು ಊರಿಗೆ ತೆರಳಲು ಪರದಾಡಿದ ಘಟನೆ ನಗರದಲ್ಲಿ ನಡೆದಿದೆ.
ಗದಗನ ಪಂಡಿತ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿ ಮುಂಜಾನೆಯಿಂದ ತಮ್ಮೂರಿಗೆ ಹೋಗಲು ಯುವತಿ ಪರದಾಡಿದ್ದಾಳೆ. ರೈಲಿನಲ್ಲಿ ಬೆಂಗಳೂರಿನಿಂದ ನಗರಕ್ಕೆ ಆಗಮಿಸಿದ ಯುವತಿ, ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಶೆಲವಡಿ ಗ್ರಾಮಕ್ಕೆ ತೆರಳಲು ಪರದಾಡುತ್ತಿದ್ದಾರೆ.
ವೀಕೆಂಡ್ ಕರ್ಫ್ಯೂ ಜಾರಿ ಇರುವುದರಿಂದ ಗದಗ ಬಸ್ ನಿಲ್ದಾಣ ಖಾಲಿ ಖಾಲಿ ಇದೆ. ಕೆಲವು ಮಾರ್ಗಕ್ಕೆ ಹೋಗುವ ಬಸ್ಗಳ ಸಂಚಾರ ಮಾತ್ರ ಆರಂಭವಾಗಿವೆ. ಪ್ರಯಾಣಿಕರ ಕೊರತೆಯಿಂದ ಬಸ್ ಸಂಚಾರವೂ ಸ್ಥಗಿತವಾಗಿದೆ. ಹೀಗಾಗಿ ಓರ್ವ ಯುವತಿಗಾಗಿ ಬಸ್ ಓಡಿಸಿದರೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ.
ಹೀಗಾಗಿ ಮುಂದೆ ಏನ್ಮಾಡಬೇಕು ಅನ್ನೋದು ಗೊತ್ತಾಗ್ತಿಲ. ಇತ್ತ ಯಾವುದೇ ಖಾಸಗಿ ವಾಹನಗಳು ಇಲ್ಲ ಎಂದು ಯುವತಿ ಅಳಲು ತೋಡಿಕೊಂಡಿದ್ದಾಳೆ.