ETV Bharat / state

Congress Guarantee Scheme: ಚುನಾವಣೆ ವೇಳೆ ಘೋಷಿಸಿದ್ದ ಐದು‌ ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಲಿದೆ: ಸಚಿವ ಹೆಚ್ ಕೆ ಪಾಟೀಲ್

ಗ್ಯಾರಂಟಿ ಯೋಜನೆಗಳಿಗೆ ಸಾಕಷ್ಟು ಆರ್ಥಿಕ ಹೊರೆ ಆಗುತ್ತದೆ. ಆದರೆ ಜನರ ಕಲ್ಯಾಣದ ಹಿತದೃಷ್ಟಿಯಿಂದ ಆ ವೆಚ್ಚವನ್ನು ಸರ್ಕಾರ ಭರಿಸಬೇಕು. ರಾಜ್ಯ ಸರ್ಕಾರದಲ್ಲಿ ಅನಾವಶ್ಯಕ ಖರ್ಚನ್ನು ಕಡಿಮೆ ಮಾಡಿ, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು: ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಕೆ ಪಾಟೀಲ್​

Minister HK Patil spoke to reporters.
ಸಚಿವ ಹೆಚ್ ಕೆ ಪಾಟೀಲ ಸುದ್ದಿಗಾರರೊಂದಿಗೆ ಮಾತನಾಡಿದರು.
author img

By

Published : Jun 11, 2023, 8:06 PM IST

Updated : Jun 11, 2023, 8:35 PM IST

ಸಚಿವ ಎಚ್ ಕೆ ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಗದಗ: ವಿಧಾನಸಭೆ ಚುನಾವಣೆ ವೇಳೆ ಐದು‌ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆಗಳನ್ನು ಜನರಿಗೆ ನೀಡಿದ್ದೆವು. ಘೋಷಣೆ ಮಾಡಿದಂತೆ ಮಾತು, ಬದ್ಧತೆ ಹಾಗೂ ಜನಪರ ನಿಲುವು ಇರುವ ನಮ್ಮ ಕಾಂಗ್ರೆಸ್ ಸರ್ಕಾರದಲ್ಲಿ ಗ್ಯಾರಂಟಿಗಳ ಅನುಷ್ಠಾನ ಮಾಡಲು ನಿರ್ಣಯಿಸಿದ್ದೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್. ಕೆ. ಪಾಟೀಲ್​ ಹೇಳಿದರು.

ನಗರದಲ್ಲಿ ಇಂದು ಮಹಿಳೆಯರು ಉಚಿತವಾಗಿ ಬಸ್​ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ನಾವು ಹಾಕಿಕೊಂಡ ಗ್ಯಾರಂಟಿ ಯೋಜನೆಗಳಿಗೆ ಸಾಕಷ್ಟು ಆರ್ಥಿಕ ಹೊರೆಯಾಗಿ ಖರ್ಚಾಗುತ್ತದೆ. ಆದರೆ ಜನರ ಕಲ್ಯಾಣದ ಸಲುವಾಗಿ ಆ ವೆಚ್ಚವನ್ನು ಭರಿಸಬೇಕು. ರಾಜ್ಯ ಸರ್ಕಾರದಲ್ಲಿ ಅನಾವಶ್ಯಕವಾಗಿ ಆಗುವ ಖರ್ಚನ್ನು ನಿಗ್ರಹಿಸಿ ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡುತ್ತೇವೆ ಎಂದು ಹೇಳಿದರು.

ಮೊದಲ ದಿವಸವೇ ಅನೌಪಚಾರಿಕ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ನಿರ್ಣಯ ಮಾಡಿದ್ದೇವೆ. ನಂತರ ಮೊದಲ ಅಧಿಕೃತ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಆಫೀಶಿಯಲ್ ಆಗಿ ನಿರ್ಧಾರ ಮಾಡಿದ್ವಿ. ನಮ್ಮ ಚುನಾವಣೆ ಫಲಿತಾಂಶ ಬಂದು ಇನ್ನೂ ಒಂದು ತಿಂಗಳೂ ಸಹ ಕಳೆದಿಲ್ಲ. ನಮ್ಮ ಐದು ಗ್ಯಾರಂಟಿಗಳಲ್ಲಿ ಮೊದಲ ಗ್ಯಾರಂಟಿ ಮಹಿಳೆಯರಿಗೆ ಉಚಿತ ಬಸ್ ಪ್ರವಾಸ ಪ್ರಾರಂಭ ಅಗಿದೆ. ಈ ಐದು ಕಾರ್ಯಕ್ರಮಗಳು ಪ್ರತಿಯೊಬ್ಬರ ಹಕ್ಕುಗಳಾಗಿವೆ. ಈ ಜನಪ್ರಿಯ ಕಾರ್ಯಕ್ರಮಗಳು ರಾಷ್ಟ್ರಕ್ಕೆ ಮಾದರಿಯಾಗಿವೆ ಎಂದು ತಮ್ಮ ಸರ್ಕಾರದ ಸಾಧನೆಯನ್ನು ಸಚಿವರು ಬಿಚ್ಚಿಟ್ಟರು.

ಗ್ರಾಮೀಣ ಪ್ರದೇಶಗಳಿಗೆ ಬಸ್ ಇಲ್ಲದ ವಿಚಾರ ಕುರಿತು ಮಾತನಾಡಿದ ಅವರು, ಸರ್ಕಾರ ಬಂದು ಒಂದು ತಿಂಗಳಾಯಿತು. ಬರುವ ನೂರು ದಿವಸಗಳಲ್ಲಿ ಬಸ್ ಸೌಲಭ್ಯ ಇಲ್ಲದಂಥ ಯಾವುದೇ ತಾಂಡಾ ಆಗಲಿ, ಗ್ರಾಮ ಆಗಲಿ ನಮ್ಮ ಜಿಲ್ಲೆಯಲ್ಲಿ ಇರೋದಿಲ್ಲ ಎಂದು ಭರವಸೆ ನೀಡಿದರು.

ಕರೆಂಟ್ ಬಿಲ್ ಡಬಲ್‌ ಸಾಫ್ಟವೇರ್ ಮಿಸ್ಟೇಕ್ ಅಂತ ನನಗೆ ಕೇಳಿ ಬರ್ತಿದೆ: ವಿದ್ಯುತ್ ಬಿಲ್ ಡಬಲ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಕರೆಂಟ್ ಬಿಲ್ ಡಬಲ್‌ ಬರ್ತಿದೆ. ನಮ್ಮ ಪಕ್ಷದ ಕಾರ್ಯಕರ್ತರಿಂದ ಹಿಡಿದು ಬಿಲ್ ಜಾಸ್ತಿ ಬಂದದ್ದನ್ನೂ ಮಾಧ್ಯಮದಲ್ಲಿ ತೋರಿಸಿದ್ದಾರೆ. ಮೂರು ಸಾವಿರ ಇದ್ದದ್ದು ಆರು‌ ಸಾವಿರ ಬಂದಿದ್ದನ್ನು ತೋರಿಸಿದ್ದಾರೆ. ಈ ಹಿನ್ನೆಲೆ ನಾಳೆ 12 ಗಂಟೆಗೆ ಡಿಸಿ ಆಫೀಸ್​ನಲ್ಲಿ ಈ ಬಗ್ಗೆ ಕೆಇಬಿ‌ ಅಧಿಕಾರಿಗಳ ಜೊತೆ ಸಭೆ ನಡೆಸುವೆ. ಸಾಫ್ಟವೇರ್ ಮಿಸ್ಟೇಕ್ ಅಂತ ನನಗೆ ಕೇಳಿ ಬರ್ತಿದೆ. ಹಾಗೇನಾದರೂ ಇದ್ದಲ್ಲಿ ಸರಿಪಡಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ಗ್ಯಾರಂಟಿಗಳಿಗೆ ಸಂಪನ್ಮೂಲ ಕ್ರೋಢೀಕರಣ‌ ವಿಚಾರದಲ್ಲಿ‌ ಸ್ಪಷ್ಟತೆ ಇಲ್ಲ ಅನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಾಗಂತ ಯಾರು ಹೇಳಿದ್ದು? ಸ್ಪಷ್ಟ ಮಾಹಿತಿ ವಿಪಕ್ಷದವರಿಗೆ ಇರಲಿಕ್ಕಿಲ್ಲ. ಆದರೆ, ನಮಗಿದೆ. ಮುಖ್ಯಮಂತ್ರಿಗಳು ಬಜೆಟ್ ಮಂಡಣೆ ಮಾಡುವ ವೇಳೆ ಸಂಪನ್ಮೂಲ ಕ್ರೋಢೀಕರಣ‌ ಬಗ್ಗೆ ಹೇಳುತ್ತಾರೆ. ಅದನ್ನೂ ಮಾಧ್ಯಮಗೋಷ್ಟಿಯಲ್ಲಿ ಹೇಳೋಕಾಗುತ್ತಾ? ಎಂದು ಹೆಚ್.ಕೆ. ಪಾಟೀಲ್ ಪ್ರಶ್ನಿಸಿದರು.

ಇದನ್ನೂಓದಿ:Indira Canteen : ತಮ್ಮ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್ ಕಾಯಕಲ್ಪಕ್ಕೆ ಮುಂದಾದ ಸಿಎಂ ಸಿದ್ದರಾಮಯ್ಯ

Last Updated : Jun 11, 2023, 8:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.