ETV Bharat / state

ಪಂಚಪೀಠಾಧಿಪತಿಗಳ ವಿರುದ್ಧ ವಚನಾನಂದ ಸ್ವಾಮೀಜಿ ಆಕ್ರೋಶ: ವಿಡಿಯೋ ವೈರಲ್

ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಶ್ರೀಗಳು ಪಂಚಪೀಠಾಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

vachanananda swamiji
ವಚನಾನಂದ ಸ್ವಾಮೀಜಿ ವೈರಲ್ ವಿಡಿಯೋ
author img

By

Published : Nov 12, 2022, 2:10 PM IST

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನಡೆದ ಭಕ್ತರ ಸಭೆಯಲ್ಲಿ ಪಂಚಪೀಠಾಧಿಪತಿಗಳ ವಿರುದ್ಧ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಆಕ್ರೋಶ ಹೊರ ಹಾಕಿದ್ದಾರೆ. ಪಂಚಪೀಠಾಧಿಗಳ ವಿರುದ್ಧ ಹರಿಹಾಯ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ನಾಡಿನಲ್ಲಿ 3-4 ಸಾವಿರ ಮಠಗಳು ಇದ್ದವು. ಎಲ್ಲಾ ಮಠಗಳ ಶ್ರೀಗಳು ಇದ್ದರು. ಅವ್ರಿಗೆ ದವಸ ಧಾನ್ಯ ನೀಡ್ತಾಯಿದ್ವಿ. ಪಂಚಪೀಠಗಳ ಸ್ವಾಮೀಜಿಗಳನ್ನು ಪಲ್ಲಕ್ಕಿ ಮೆರವಣಿಗೆ ಮಾಡಿದ್ದೀವಿ. ಆ ಮಠಗಳು ಕಟ್ಟಿರುವ ಶಿಕ್ಷಣ ಸಂಸ್ಥೆಗಳಿಗೆ ದಾನ, ಧರ್ಮ ಮಾಡಿದ್ದೇವೆ. ಅಷ್ಟೇ ಅಲ್ಲದೇ, ಅವರೇ ನಮ್ಮ ಗುರುಗಳು ಎಂದು ತಿಳಿದುಕೊಂಡಿದ್ದೆವು. ಅಂದ ಮೇಲೆ ಮತ್ತೇಕೆ ಪಂಚಮಸಾಲಿ ಪೀಠ ಮಾಡಬೇಕಿತ್ತು. ಯಾವ ಅವಶ್ಯಕತೆ ಇತ್ತು. ಯಾಕೆ ಪಂಚಮಸಾಲಿ ಜಗದ್ಗುರು ಪೀಠ ಆಯ್ತು. ಹೀಗೆ ಆಗಲಿಕ್ಕೆ ಕಾರಣ ಏನೂ ಎಂದು ನಿಮಗೆ ಮಾಹಿತಿ ಇರಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಶ್ರೀಗಳು ಪಂಚಮಸಾಲಿ ಜಗದ್ಗುರು ಪೀಠ ಸ್ಥಾಪನೆಯ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

ವಚನಾನಂದ ಸ್ವಾಮೀಜಿ ವೈರಲ್ ವಿಡಿಯೋ

ಇದನ್ನೂ ಓದಿ: ನಾವು ಗಡುವು ಕೊಡುವ ಸ್ವಾಮೀಜಿ ಅಲ್ಲ, ಮೀಸಲಾತಿ ಕೊಡಿಸುವ ಸ್ವಾಮೀಜಿ : ವಚನಾನಂದ ಶ್ರೀ

2003ರಲ್ಲಿ ವಾಜಪೇಯಿ ಪ್ರಧಾನಿ ಆಗಿದ್ರು, ಅಡ್ವಾಣಿ ಉಪ ಪ್ರಧಾನಿ ಆಗಿದ್ರು. ಅಂದು ಐದು ಜನ ಜಗದ್ಗುರುಗಳು ಅವ್ರನ್ನು ಭೇಟಿಯಾಗಿ ಒಂದು ಮನವಿ ಮಾಡಿದ್ರು. ನಾವು ಬೇಡ, ಜಂಗಮರು ಬೇಡಿಕೊಂಡು ತಿನ್ನುವರು. ನಮಗೆ ಎಸ್​ಸಿ ಸರ್ಟಿಫಿಕೇಟ್ ಕೊಡಿ ಅಂತ ಕೇಳಿದ್ರು. ಅದು ಪತ್ರಿಕೆಗಳಲ್ಲಿ ಬಂತು. ಅಂದು ಪಂಚಮಸಾಲಿ ಮುಖಂಡರು ಯೋಚನೆ ಮಾಡಿದ್ರು. ನೀವು ಯಾವ ಆಧಾರದ ಮೇಲೆ ಎಸ್​ಸಿ ಸರ್ಟಿಫಿಕೇಟ್ ಕೇಳ್ತೀರಾ?, ನಿಮಗೆ ನಡೆದುಕೊಳ್ಳುವ ಭಕ್ತರು ನಾವು ಇದ್ದೇವೆ. ನೀವು ಗುರುಗಳು ಅಂತ ಎತ್ತರಕ್ಕೆ ಕೂರಿಸಿಕೊಂಡು ಪೂಜೆ ಪುನಸ್ಕಾರ ಮಾಡಿ ಆಶೀರ್ವಾದ ಪಡೆದುಕೊಳ್ತೀವಿ. ಇಂತವರು ಹೇಗೆ ಎಸ್​ಸಿ ಆಗ್ತೀರಿ ಎಂದು ಕೇಳಿದ್ರು. ದಾನ ಧರ್ಮ ಮಾಡೋರು ನಾವು, ಭಕ್ತರು ಪಂಚಮಸಾಲಿಗಳು. ನಿಮ್ಮ ಮಠಕ್ಕೆ ಅಕ್ಕಿ, ಜೋಳ ಮನೆಯಲ್ಲಿ ಪ್ರತಿನಿತ್ಯ ಮೊದಲ ರೊಟ್ಟಿ ಮಠಕ್ಕೆ ಇಟ್ಟವ್ರು ನಾವು. ನಿಮ್ಮ ಶಿಕ್ಷಣ ಸಂಸ್ಥೆಗಳಿಗೆ ಸಾಕಷ್ಟು ಜಮೀನು ದಾನ ಮಾಡಿದವ್ರು ನಾವು. ನೀವು ನಿಮ್ಮ ಜಾತಿಗಾಗಿ ಕೇಳಿದ್ರಿ. ಆದ್ರೆ, ಪಂಚಮಸಾಲಿ ಸಮುದಾಯಕ್ಕೆ, ಭಕ್ತರಿಗಾಗಿ ಏನೂ ಕೇಳಿಲ್ಲ ಅಂತ ಪ್ರಶ್ನೆ ಬಂತು ಎಂದು ಪಂಚಪೀಠಗಳ ವಿರುದ್ಧ ವಚನಾನಂದ ಶ್ರೀಗಳು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಕ್ಕೇ ಸಿಗುತ್ತೆ : ವಚನಾನಂದ ಶ್ರೀ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.